ಬೆಳ​ಗಾವಿ(ಜು.27):  ಆಕ್ಸಿಜನ್‌ ಸಿಲಿಂಡರ್‌ ಸ್ಫೋಟಗೊಂಡು ವೈದ್ಯ ಹಾಗೂ ವಾರ್ಡ್‌​ಬಾಯ್‌ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲಾಸ್ಪತ್ರೆ(ಬಿಮ್ಸ್‌)ಯಲ್ಲಿ ಭಾನು​ವಾರ ಮಧ್ಯಾಹ್ನ ಸಂಭವಿಸಿದೆ. ಅದೃ​ಷ್ಟ​ವ​ಶಾತ್‌ ಭಾರೀ ಅನಾ​ಹುತವೊಂದು ತಪ್ಪಿದ್ದು, ಯಾವುದೇ ಜೀವ​ಹಾ​ನಿ​ಯಾ​ಗಿಲ್ಲ. 

ಬಿಮ್ಸ್‌ ಆಸ್ಪತ್ರೆಯ ತುರ್ತು ಚಿಕಿತ್ಸೆ ಘಟಕದಲ್ಲಿ ರೋಗಿಗೆ ಆಕ್ಸಿಜನ್‌ ಜೋಡಿ​ಸು​ವಾಗ ಆಕ​ಸ್ಮಿ​ಕ​ವಾಗಿ ಆಕ್ಸಿಜನ್‌ ಸಿಲಿಂಡರ್‌ ಸ್ಫೋಟಗೊಂಡಿದೆ. ಇದ​ರಿಂದ ಕರ್ತವ್ಯದಲ್ಲಿದ್ದ ಓರ್ವ ವೈದ್ಯಗೆ ಹಾಗೂ ವಾರ್ಡ್‌ಬಾಯ್‌ ಕೈಗೆ ಗಾಯವಾಗಿದೆ. 

ಬೆಳಗಾವಿ: ಬಿಮ್ಸ್‌ ಆಸ್ಪತ್ರೆಯಲ್ಲಿ ಕೊರೋನಾ ನರಕ ದರ್ಶನ

ಕೊರೋನಾ ವೈರಸ್‌ ತೀವ್ರತೆ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಪಿಪಿಇ ಕಿಟ್‌ ಧರಿಸಿದ್ದರಿಂದ ಸಿಲಿಂಡರ್‌ನಿಂದ ಹೊತ್ತಿಕೊಂಡ ಬೆಂಕಿ ಪ್ಲಾಸ್ಟಿ​ಕ್‌ನಿಂದ ಸಿದ್ಧವಾಗಿರುವ ಪಿಪಿಇ ಕಿಟ್‌ಗೆ ಹೊತ್ತಿಕೊಂಡಿದೆ. ಬೆಂಕಿಯಿಂದ ಪ್ಲಾಸ್ಟಿಕ್‌ ಸುಟ್ಟು ಕರಗಿದ್ದರಿಂದ ಚರ್ಮದ ಮೇಲೆ ಸೋರಿಕೆಯಾಗಿ ವೈದ್ಯ​ರಿಗೆ ಗಾಯವಾಗಿದೆ.