ಮಂಗಳೂರು(ನ.24): ಯುವತಿಯರ ಸರಣಿ ಹಂತಕ ಸೈನೈಡ್‌ ಮೋಹನ್‌ನ 18ನೇ ಪ್ರಕರಣದಲ್ಲೂ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣವನ್ನು ಕಾದಿರಿಸಿದ್ದು, ನ.26ರಂದು ಪ್ರಕಟಿಸುವ ಸಾಧ್ಯತೆಯಿದೆ.

ಕುಂಬಳೆ ಗ್ರಾಮದ ಯುವತಿ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಯಿದುನ್ನೀಸಾ ಒಟ್ಟು 47 ಸಾಕ್ಷಿ, 72 ದಾಖಲೆ ಪರಿಶೀಲನೆ ನಡೆಸಿ ಕೊಲೆ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ.

17ನೇ ಕೊಲೆ ಕೇಸಲ್ಲೂ ಸೈನೈಡ್‌ ಮೋಹನ್‌ ದೋಷಿ

ಸೈನೈಡ್‌ ಮೋಹನ್‌ 2009ರಲ್ಲಿ ಕುಂಬಳೆ ಬಸ್‌ ನಿಲ್ದಾಣದಲ್ಲಿ 28 ವರ್ಷದ ಯುವತಿಯ ಜೊತೆ ಮಾತನಾಡಿ ತನ್ನನ್ನು ಆನಂದ್‌ ಪೂಜಾರಿ ಎಂದು ಪರಿಚಯಿಸಿಕೊಂಡಿದ್ದ. ಆಕೆ 9ನೇ ತರಗತಿ ಓದಿದ್ದು, ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದಳು. ಆಕೆಯನ್ನು ಮದುವೆ ಆಗುವುದಾಗಿ ನಂಬಿಸಿ 2009ರ ಮೇ 21ರಂದು ಕುಶಾಲನಗರಕ್ಕೆ ತೆರಳಿ ಲಾಡ್ಜ್‌ನಲ್ಲಿ ತಂಗಿದ್ದರು. ಮರುದಿನ ಯುವತಿಯನ್ನು ಸರ್ಕಾರಿ ಬಸ್‌ ನಿಲ್ದಾಣಕ್ಕೆ ಕರೆದೊಯ್ದಿದು, ಗರ್ಭಪಾತ ಮಾತ್ರೆ ಎಂದು ನಂಬಿಸಿ ಆಕೆಗೆ ಸೈನೈಡ್‌ ನೀಡಿದ್ದ. ಬಸ್‌ ನಿಲ್ದಾಣದ ಶೌಚಾಲಯದಲ್ಲಿ ಅದನ್ನು ಸೇವಿಸಿದ ಯುವತಿ ಅಲ್ಲೇ ಮೃತಪಟ್ಟಿದ್ದಳು.

ಪತ್ನಿಯ ನಿಂದಿಸಿದ್ದ ಗೆಳೆಯನನ್ನು ಬಾಟಲಿಯಲ್ಲಿ ಹೊಡೆದು ಹತ್ಯೆಗೈದ ಪತಿ'ರಾಯ'!