ಪ್ಲಾಸ್ಟಿಕ್ ಅಕ್ಕಿ ಮಾರಾಟ : ಸೂಪರ್ ಮಾರ್ಕೆಟ್ ವಿರುದ್ಧ ಆಕ್ರೋಶ
- ಮಂಡ್ಯದ ಮೋರ್ ಸೂಪರ್ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಾರಾಟ
- ಗ್ರಾಹಕರು ಮೋರ್ ಸೂಪರ್ ಮಾರ್ಕೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- ಅಕ್ಕಿಯಲ್ಲಿ ಅನ್ನ ತಯಾರಿಸಿದಾಗ ಅದು ಪ್ಲಾಸ್ಟಿಕ್‌ನಂತೆಯೇ ಕಂಡು ಬಂದಿದೆ.
ಮಂಡ್ಯ (ಆ.11): ಮಂಡ್ಯದ ಮೋರ್ ಸೂಪರ್ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಹಕರು ಮೋರ್ ಸೂಪರ್ ಮಾರ್ಕೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಂಧಿನಗರ ನಿವಾಸಿ ಗೋಪಾಲ್ ಅವರು ಹೊಸಹಳ್ಳಿ ವೃತ್ತದಲ್ಲಿರುವ ಮೋರ್ ಸೂಪರ್ ಮಾರ್ಕೆಟ್ ನಲ್ಲಿ ತಮ್ಮ ಮನೆಯಲ್ಲಿ ನಡೆಯುವ ಸಮಾರಂಭಕ್ಕಾಗಿ ಸೋನಾ ಮಸೂರಿ ಅಕ್ಕಿ ಖರೀದಿಸಿದ್ದರು. ಮನೆಗೆ ಕೊಂಡಯ್ದು ಕುಕ್ಕರ್‌ನಲ್ಲಿ ಅನ್ನ ಮಾಡಿದ್ದರು.
ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ?
ಅದರೆ ಅಕ್ಕಿ ಪ್ಲಾಸ್ಟಿಕ್ ಅಕ್ಕಿಯಂತಾದ ಕಾರಣ ಅನ್ನ ಆಗಿರಲಿಲ್ಲ. ಅದು ಪ್ಲಾಸ್ಟಿಕ್‌ನಂತೆಯೇ ಕಂಡು ಬಂದಿದೆ.
ತಕ್ಷಣ ಮೋರ್ ವ್ಯವಸ್ಥಾಪಲ ಅನಿಲ್ ಅವರಿಗೆ ದೂರವಾಣಿ ಕರೆ ಮಾಡಿ ಪ್ಲಾಸ್ಟಿಕ್ ಅಕ್ಕಿ ಬಗ್ಗೆ ದೂರು ನೀಡಿದ್ದಾರೆ. ಅದರೆ, ಅವರು ಅದನ್ನು ನಿರಾಕರಿಸಿದ್ದಾರೆ.
ಇದರಿಂದ ಅಸಮಾಧಾನಗೊಂಡ ಗೊಪಾಲ್ ತಮ್ಮ ಮನೆಯಲ್ಲಿದ್ದ ಕುಕ್ಕರ್ ಸಮೇತ ಮೋರ್ ಮುಂದೆ ಬಂದು ವ್ಯವಸ್ಥಾಪಕರಿಗೆ ತೋರಿಸಿದ್ದಾರೆ. ಅದರೂ ಅವರು ಒಪ್ಪಿಕೊಳ್ಳದಿದ್ದಾಗ ಆಹಾರ ಇಲಾಖೆ ಅಧಿಕಾರಿಗಳಿಗೆ, ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆಹಾರ ಇಲಾಖೆ ಪರಿಶೀಲಿಸಿದ್ದು ಪ್ಲಾಸ್ಟಿಕ್ ರೂಪದಲ್ಲೇ ಕಂಡು ಬಂದಿದೆ. ಸಾರ್ವಜನಿಕರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.