ಅಕ್ರಮ ಲೇಔಟ್‌ ನಿರ್ಮಾಣಕ್ಕೆ ಕಡಿವಾಣ ಹಾಕಿ: ಶಾಸಕ ಬಾಲಕೃಷ್ಣ

ಹೊಸ ಲೇಔಟ್‌ ನಿರ್ಮಿಸುವ ವೇಳೆ ಪ್ರಾಧಿ​ಕಾರದ ನಿಯಮದಂತೆ ಅಗಲವಾದ ರಸ್ತೆ ಸೇರಿ ಅಗತ್ಯ ಮಾನದಂಡಗಳ ಅನುಸರಿಸಿ ತಾಂತ್ರಿಕವಾಗಿ ಬಡಾವಣೆ ಅಭಿವೃದ್ಧಿಪಡಿಸಿದಲ್ಲಿ ಮಾತ್ರ ಪಟ್ಟಣದ ಅಭಿವೃದ್ಧಿ ಸಾಧ್ಯವೆಂದು ಶಾಸಕ ಸಿ.ಎನ್‌.ಬಾಲಕೃಷ್ಣ ಹೇಳಿದರು. 

Curb illegal layout construction says mla cn balakrishna gvd

ಚನ್ನರಾಯಪಟ್ಟಣ (ಆ.03): ಹೊಸ ಲೇಔಟ್‌ ನಿರ್ಮಿಸುವ ವೇಳೆ ಪ್ರಾಧಿ​ಕಾರದ ನಿಯಮದಂತೆ ಅಗಲವಾದ ರಸ್ತೆ ಸೇರಿ ಅಗತ್ಯ ಮಾನದಂಡಗಳ ಅನುಸರಿಸಿ ತಾಂತ್ರಿಕವಾಗಿ ಬಡಾವಣೆ ಅಭಿವೃದ್ಧಿಪಡಿಸಿದಲ್ಲಿ ಮಾತ್ರ ಪಟ್ಟಣದ ಅಭಿವೃದ್ಧಿ ಸಾಧ್ಯವೆಂದು ಶಾಸಕ ಸಿ.ಎನ್‌.ಬಾಲಕೃಷ್ಣ ಹೇಳಿದರು. ಪಟ್ಟಣದ ವಾರ್ಡ್‌ ನಂ.1 ರಲ್ಲಿನ ಮಕಾನ್‌ ಬಳಿ ಶ್ರವಣಬೆಳಗೊಳ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಸಂಗೋಳ್ಳಿ ರಾಯಣ್ಣ ಬಡಾವಣೆಯಲ್ಲಿನ 40 ಅಡಿ ರಸ್ತೆಗೆ ಬಾಲಗಂಗಾಧರನಾಥ ಸ್ವಾಮೀಜಿ ರಸ್ತೆ ಎಂಬುದಾಗಿ ನಾಮಫಲಕ ಅನಾವರಣಗೊಳಿಸಿ ಮಾತನಾಡಿ ಪಟ್ಟಣದಲ್ಲಿ ಎಗ್ಗಿಲ್ಲದೇ ಸರ್ಕಾರದ ಸುತ್ತೋಲೆಗಳನ್ನು ಪಾಲಿಸದೇ ಲೇಔಟ್‌ ನಿರ್ಮಾಣಕ್ಕೆ ಕಡಿವಾಣ ಹಾಕುವ ಅವಶ್ಯಕತೆಯಿದೆ. 

ಇಲ್ಲದಿದ್ದಲ್ಲಿ ಹೊಸ ಬಡಾವಣೆಗೆ ಮೂಲಭೂತ ಸೌಲಭ್ಯ ಕಲ್ಪಿಸುವುದು ಕಷ್ಟವಾಗಲಿದೆ ಎಂದರು. ರಿಯಲ್‌ ಎಸ್ಟೇಟ್‌ದಾರರು ಹಣದಾಸೆಗೆ ಬೇಕಾಬಿಟ್ಟಿಲೇಔಟ್‌ ನಿರ್ಮಾಣ ಮಾಡಿ, ನಂತರದ ಹೊರೆಯ ಪುರಸಭೆಗೆ ಹಸ್ತಾಂತರಿಸುತ್ತಿದ್ದಾರೆ. ಇದರಿಂದ ಪಟ್ಟಣದ ಬೆಳವಣಿಗೆ ಕುಂಠಿತಕ್ಕೆ ಕಾರಣವಾಗುತ್ತದೆ. 30 ಅಡಿ ರಸ್ತೆ ನಿರ್ಮಾಣ, ಯುಜಿಡಿ ವ್ಯವಸ್ಥೆ, ಪಾರ್ಕ್, ದೇವಸ್ಥಾನಗಳಿಗೆ ಜಾಗ ಕಾಯ್ದಿರಿಸಬೇಕು. ಈ ನಿಟ್ಟಿನಲ್ಲಿ ಪ್ರಾಧಿ​ಕಾರದ ಜವಾಬ್ದಾರಿ ಹೆಚ್ಚಿನದಾಗಿದೆ ಎಂದರು.

Hassan: ಕಾಲೇಜಿಗೆ ಹೋಗುವಾಗ ರೈಲಿಗೆ ಸಿಲುಕಿ ವಿದ್ಯಾರ್ಥಿನಿ ಸಾವು

ನಗರಸಭೆಯಾಗಿಸಲು ಪ್ರಯತ್ನ: 2011ರ ಜನಗಣತಿ ಪ್ರಕಾರ ಪಟ್ಟಣದ ಜನಸಂಖ್ಯೆ 50ಸಾವಿರ ದಾಟದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ 20ಹಳ್ಳಿಗಳನ್ನು ಸೇರಿಸಿ 2016ರಲ್ಲಿ ನಗರಸಭೆಯಾಗಿಸುವ ಪ್ರಯತ್ನಕ್ಕೆ ಕೈ ಹಾಕಲಾಗಿತ್ತು. ಸರ್ಕಾರ ಹಳ್ಳಿಗಳ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ನಂತರ 2021ರ ಜನಗಣತಿಯಂತೆ ಪಟ್ಟಣದ ಜನಸಂಖ್ಯೆಯೇ 50ಸಾವಿರಕ್ಕೂ ಹೆಚ್ಚಿದ್ದ ಕಾರಣ ಮತ್ತೊಮ್ಮೆ ಪ್ರಸ್ತಾವನೆ ಕಳುಹಿಸಿ ಸಿಎಂರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಕೋವಿಡ್‌ ಕಾರಣ ಅನುದಾನದ ಕೊರತೆಯಿಂದಾಗಿ ಈ ಬಾರಿ ನಗರಸಭೆಯಾಗಿಸಲು ಸಾಧ್ಯವಿಲ್ಲ, ಬಜೆಟ್‌ನಲ್ಲಿ ಅನುದಾನ ಕೊರತೆ ಕಾರಣ ಇದೇ ರೀತಿಯಲ್ಲಿ ಪ್ರಸ್ತಾವನೆ ಬಂದ 50ಕ್ಕೂ ಹೆಚ್ಚು ತಾಲೂಕುಗಳ ಪ್ರಸ್ತಾವನೆಗಳ ಪೆಂಡಿಂಗ್‌ ಇಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.

ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ್‌ ಗುರೂಜಿ ಮಾತನಾಡಿ ಅಗಲವಾದ ರಸ್ತೆಗಳಿಂದಲೇ ನಗರಗಳು ಸುಂದರವಾಗಲು ಸಾಧ್ಯ, ಸಮರ್ಪಕ ನೀರಿನ ವ್ಯವಸ್ಥೆ, ಉತ್ತಮ ಒಳಚರಂಡಿ ವ್ಯವಸ್ಥೆಯಿಂದ ಪಟ್ಟಣದ ಮೌಲ್ಯ ಹೆಚ್ಚುತ್ತದೆ. ಇನ್ನೂ ಬಡಾವಣೆಗಳಿಗೆ, ರಸ್ತೆಗಳಿಗೆ ಇತಿಹಾಸದ ಸಾಧಕರು, ಮಹಾನ್‌ ಪುರುಷರು, ಸ್ವಾತಂತ್ರ್ಯಹೋರಾಟಗಾರರ ಹೆಸರಿಡುವುದರಿಂದ ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸಿದಂತಾಗುತ್ತದೆ ಎಂದರು. ಈ ವೇಳೆ ಪುರಸಭಾಧ್ಯಕ್ಷ ಸಿ.ಜಿ.ಸುರೇಶ್‌, ಉಪಾಧ್ಯಕ್ಷ ಧರಣೀಶ್‌, ಸ್ಥಾಯಿಸಮಿತಿ ಅಧ್ಯಕ್ಷೆ ಬನಶಂಕರಿರಘು, ಕಸಾಪ ತಾ.ಅಧ್ಯಕ್ಷ ಹೆಚ್‌.ಎನ್‌.ಲೋಕೇಶ್‌, ಮುಖಂಡರಾದ ಪರಮಕೃಷ್ಣೇಗೌಡ, ಅಬು, ನಿತಿನ್‌, ಸೇರಿ ಇತರರು ಇದ್ದರು.

ಪಟ್ಟಣದ ಅಭಿವೃದ್ಧಿಗೆ ವೇಗ: ಪಟ್ಟಣದ ಮಹಾ ಯೋಜನೆ ಅನುಮೋದನೆಯಾಗಿದ್ದು, ಇದರಿಂದ ಪಟ್ಟಣದ ಅಭಿವೃದ್ಧಿಗೆ ವೇಗ ಸಿಗಲಿದೆ. ಬಡಾವಣೆಗಳು ಬೆಳೆಯಲು ಸಹಕಾರಿಯಾಗುವಂತೆ ಎಲ್ಲ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಿಗೆ ಬಡಾವಣೆಗಳ ರಸ್ತೆಗಳ ಸಂಪರ್ಕ ಕಲ್ಪಿಸಲಾಗಿದೆ. 3 ಕೋಟಿ ರು.ವೆಚ್ಚದಲ್ಲಿ ನೂತನ ಕೋರ್ಚ್‌ ಸಂಕೀರ್ಣ, ಪೊಲೀಸ್‌ ಠಾಣೆ ಸಮೀಪದಲ್ಲಿ 3 ಕೋಟಿ ರು.ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಇದರೊಂದಿಗೆ ಪಟ್ಟಣವನ್ನು ಸಂಪೂರ್ಣ ಯುಜಿಡಿ ವ್ಯವಸ್ಥೆಗೊಳಿಸಲು 50 ಕೋಟಿ ರು.ಗಳ ಅಗತ್ಯವಿದೆ ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ಹೇಳಿದರು.

Hassan: 172 ಪೊಲೀಸರನ್ನು ಒಂದೇ ದಿನ ವರ್ಗಾಯಿಸಿದ ನೂತನ ಎಸ್‌ಪಿ

ಪಟ್ಟಣದ ಅಕ್ಕಪಕ್ಕದ 6 ಪಂಚಾಯ್ತಿಗಳ ಕೆಲ ಹಳ್ಳಿಗಳ ಸೇರಿಸಿ ನಗರಸಭೆಯಾಗಿಸುವ ಕೆಲಸ 2016ರಲ್ಲೆ ಆಗಬೇಕಿತ್ತು. ಪಿಡಿಒಗಳು ಎನ್‌ಒಸಿ ನೀಡಿದ್ದಾರೆ. ಮುಖ್ಯಾ​ಧಿಕಾರಿ ಸಭೆಯಲ್ಲಿ ಅಂಗೀಕರಿಸಿ ಜಿಲ್ಲಾ​ಧಿಕಾರಿಗೆ ಕಳುಹಿಸುವ ಕೆಲಸವನ್ನೇ ಮಾಡಲಿಲ್ಲ, ಇದೀಗ ಮತ್ತೊಮ್ಮೆ ಪ್ರಸ್ತಾವನೆ ಕಳುಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅ​ಧಿಕಾರಿಗಳು, ಶಾಸಕರು ಮುಂದಾಗಬೇಕು, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿದ್ದೇನೆ.
-ಶಿವನಂಜೇಗೌಡ, ಯೋಜನಾ ಪ್ರಾ​ಧಿಕಾರ ಅಧ್ಯಕ್ಷ

Latest Videos
Follow Us:
Download App:
  • android
  • ios