Hassan: 172 ಪೊಲೀಸರನ್ನು ಒಂದೇ ದಿನ ವರ್ಗಾಯಿಸಿದ ನೂತನ ಎಸ್‌ಪಿ

ನೂತನವಾಗಿ ಜಿಲ್ಲೆಗೆ ಆಗಮಿಸಿದ ಎಸ್ಪಿ ಹರಿರಾಮ್‌ ಶಂಕರ್‌ ಅವರು ಜಿಲ್ಲಾ ಪೊಲೀಸ್‌ ಇಲಾಖೆಯಲ್ಲಿ ಭಾರೀ ಬದಲಾವಣೆ ಮಾಡಿದ್ದಾರೆ. ಕೆಲ ಸಿಬ್ಬಂದಿ ಹಲವಾರು ವರ್ಷಗಳಿಂದ ಒಂದೇ ಕಡೆ ಠಿಕಾಣಿ ಹೂಡಿದ್ದ ಬಗ್ಗೆ ಸಾರ್ವಜನಿಕವಾಗಿ ಹೆಚ್ಚಿನ ದೂರುಗಳು ಬಂದ ಹಿನ್ನೆಲೆಯಲ್ಲಿ 5 ವರ್ಷ ಮೇಲ್ಪಟ್ಟು ಒಂದೇ ಕಡೆ ಇದ್ದ 172 ಪೊಲೀಸ್‌ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ. 

new sp transferred 172 policemen in one day at hassan gvd

ಹಾಸನ (ಜು.21): ನೂತನವಾಗಿ ಜಿಲ್ಲೆಗೆ ಆಗಮಿಸಿದ ಎಸ್ಪಿ ಹರಿರಾಮ್‌ ಶಂಕರ್‌ ಅವರು ಜಿಲ್ಲಾ ಪೊಲೀಸ್‌ ಇಲಾಖೆಯಲ್ಲಿ ಭಾರೀ ಬದಲಾವಣೆ ಮಾಡಿದ್ದಾರೆ. ಕೆಲ ಸಿಬ್ಬಂದಿ ಹಲವಾರು ವರ್ಷಗಳಿಂದ ಒಂದೇ ಕಡೆ ಠಿಕಾಣಿ ಹೂಡಿದ್ದ ಬಗ್ಗೆ ಸಾರ್ವಜನಿಕವಾಗಿ ಹೆಚ್ಚಿನ ದೂರುಗಳು ಬಂದ ಹಿನ್ನೆಲೆಯಲ್ಲಿ 5 ವರ್ಷ ಮೇಲ್ಪಟ್ಟು ಒಂದೇ ಕಡೆ ಇದ್ದ 172 ಪೊಲೀಸ್‌ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ. 

ಆಡಳಿತ ವಿಭಾಗದಲ್ಲಿ ಹಿಡಿತ ಮತ್ತು ಸುಧಾರಣೆ ತರುವ ಉದ್ದೇಶದಿಂದ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಲವರು ವರ್ಷಗಳ ಕಾಲ ಒಂದೇ ಠಾಣೆ ಹಾಗೂ ಒಂದೇ ಜಾಗದಲ್ಲಿ ಜಾಂಡ ಊರಿ ಕೆಲಸ ಮಾಡುತ್ತಿದ್ದರು. ಇದು ಅಕ್ರಮಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಇತ್ತೀಚೆಗೆ ನಡೆದ ದಿಶಾ ಸಭೆಯಲ್ಲಿ ಜಿಲ್ಲೆಯ ಹಲವಾರು ಶಾಸಕರು ದೂರಿದ್ದರು. ಜೊತೆಗೆ ಈ ಬಗ್ಗೆ ಸಾರ್ವಜನಿಕರಿಂದಲೂ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡು ಹಲವು ಪೊಲೀಸ್‌ ಅಧಿ​ಕಾರಿಗಳು ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. 

ಜು.24ರಿಂದ 3 ದಿನ ಸಿಎಂ ಬೊಮ್ಮಾಯಿ ದಿಲ್ಲಿ ಭೇಟಿ: ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪ

ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ. ತ್ವರಿತವಾಗಿ ಹೊಸ ಜಾಗದಲ್ಲಿ ಕೆಲಸಕ್ಕೆ ಹಾಜರಾಗುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಹಾಸನ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪೊಲೀಸ್‌ ವಾಹನ ಚಾಲಕರಾಗಿದ್ದ 8 ಚಾಲಕರನ್ನು ವರ್ಗಾವಣೆ ಮಾಡಿದ್ದು, ಇದುವರೆಗೂ ಅವಕಾಶ ಸಿಗದೆ ಇದುವರೆಗೆ ಚಾಲಕರಾಗಿಲ್ಲದವರಿಗೆ ಚಾಲಕರಾಗಿ ಅವಕಾಶ ಕಲ್ಪಿಸಲಾಗಿದೆ.

12 ಡಿವೈಎಸ್ಪಿ, 92 ಮಂದಿ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ: ಗೃಹ ಇಲಾಖೆಯಲ್ಲಿ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಮುಂದುವರೆಸಿರುವ ರಾಜ್ಯ ಸರ್ಕಾರ, ಮಂಗಳವಾರ 12 ಮಂದಿ ಡಿವೈಎಸ್ಪಿಗಳು ಹಾಗೂ 92 ಮಂದಿ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ. ವರ್ಗಾವಣೆಗೊಂಡ ಡಿವೈಎಸ್ಪಿಗಳ ಪಟ್ಟಿ: ಆರ್‌.ಮಂಜುನಾಥ್‌- ಚಿತ್ರದುರ್ಗ ಉಪ ವಿಭಾಗ, ಶರಣಬಸಪ್ಪ ಎಚ್‌.ಸುಬೇದಾರ್‌-ಕೊಪ್ಪಳ, ವಿ.ಎಲ್‌.ರಮೇಶ್‌- ಕೆಜಿಎಫ್‌, ಪಿ.ಮುರಳೀಧರ್‌- ಕೋಲಾರ, ಕೆ.ಎಸ್‌.ವೆಂಕಟೇಶ್‌ ನಾಯ್ಡು- ಮಧುಗಿರಿ, ಆರ್‌.ವಿ.ಗಂಗಾಧರಪ್ಪ- ಸೋಮವಾರಪೇಟೆ, ವೆಂಕನಗೌಡ ಪಾಟೀಲ್‌- ಹುಬ್ಬಳ್ಳಿ ರೈಲ್ವೆ ಉಪ ವಿಭಾಗ, ಶ್ರೀಪಾದ ದಶರಥ ಜಲ್ದೆ- ಅಥಣಿ, ಕೆ.ಜಿ.ರಾಮಕೃಷ್ಣ- ಲೋಕಾಯುಕ್ತ, ಎಚ್‌.ಎಂ.ಶೈಲೇಂದ್ರ- ಮೈಸೂರು ಡಿಸಿಆರ್‌ಇ, ಎನ್‌.ಪುಷ್ಪಲತಾ- ಬೆಳಗಾವಿ ಡಿಸಿಆರ್‌ಇ ಹಾಗೂ ಎಸ್‌.ವಿ.ಗಿರೀಶ್‌- ರಾಜ್ಯ ಗುಪ್ತ ವಾರ್ತೆಗೆ ವರ್ಗಾವಣೆಗೊಂಡಿದ್ದಾರೆ. ಇದರ ಜತೆಗೆ ರಾಜ್ಯದ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿದ್ದ 92 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಲಾಗಿದೆ.

ಐಐಟಿಗಳ ರೀತಿ ಕರ್ನಾಟಕದಲ್ಲಿ ಕೆಐಟಿ ಸ್ಥಾಪನೆ: ಸಚಿವ ಅಶ್ವತ್ಥ್‌

ಸಿಪಿಐಗಳ ವರ್ಗಾವಣೆ: ರಾಜ್ಯ ಸರ್ಕಾರ ಮಂಗಳವಾರ ಕೆಲ ಆರಕ್ಷಕ ವೃತ್ತ ನಿರೀಕ್ಷಕರನ್ನು (ಸಿವಿಎಲ್‌) ವರ್ಗಾವಣೆ ಮಾಡಿ ಆದೇಶಿಸಿದ್ದು ಜಿಲ್ಲೆಯ ಗೌರಿಬಿದನೂರು ಆರಕ್ಷಕ ವೃತ್ತ ನಿರೀಕ್ಷಕ ಎಸ್‌.ಡಿ.ಶಶಿಧರ್‌ ಹಾಗೂ ಚಿಕ್ಕಬಳ್ಳಾಪುರ ಆರಕ್ಷಕ ವೃತ್ತ ನಿರೀಕ್ಷಕ ಎ.ಎಂ.ಪ್ರಶಾಂತ್‌ರನ್ನು ವರ್ಗಾವಣೆಗೊಳಿಸಲಾಗಿದೆ. ಗೌರಿಬಿದನೂರು ಸಿಪಿಐ ಶಶಿಧರ್‌ರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಳ ನಗರ ಠಾಣೆಗೆ ವರ್ಗಾವಣೆ ಮಾಡಿದರೆ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ಎಂ.ಎಂಪ್ರಶಾಂತ್‌ರನ್ನು ಚಿಕ್ಕಬಳ್ಳಾಪುರ ಮಹಿಳಾ ಠಾಣೆಗೆ ವರ್ಗಾವಣೆ ಮಾಡಿ ಅವರಿಂದ ತೆರವಾದ ಸ್ಥಾನಕ್ಕೆ ರಾಜ್ಯ ಸಿಐಡಿಯಲ್ಲಿರುವ ಬಿ.ರಾಜುರನ್ನು ನೇಮಕ ಮಾಡಲಾಗಿದೆ. ಗೌರಿಬಿದನೂರಲ್ಲಿ ತೆರವಾದ ಸ್ಥಾನಕ್ಕೆ ಇನ್ನೂ ಯಾರನ್ನು ನೇಮಿಸಿಲ್ಲ.

Latest Videos
Follow Us:
Download App:
  • android
  • ios