Asianet Suvarna News Asianet Suvarna News

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಸಿಟಿ ರವಿ: ಸುಬ್ರಹ್ಮಣ್ಯ ಸ್ವಾಮಿಗೆ ಹರಕೆ

ಸಿ.ಟಿ.ರವಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ನೂರಾರು ಬಿಜೆಪಿ ಕಾರ್ಯಕರ್ತರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಿದರು.

CT Ravi to become Chief Minister of Karnataka silver arrow submit to Subrahmanya Swami sat
Author
First Published Mar 26, 2023, 10:41 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಮಾ.26):  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಗೆಲುವು ಸಾಧಿಸಿ ಮುಖ್ಯಮಂತ್ರಿ ಆಗಬೇಕು ಎಂದು ಚಿಕ್ಕಮಗಳೂರು ನಗರದಿಂದ 25 ಕಿ.ಮೀ. ದೂರದ ಕುಮಾರಗಿರಿಯ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದವರೆಗೆ ಬಿಜೆಪಿ ಕಾರ್ಯಕರ್ತರು ಹಾಗೂ ಸಿ.ಟಿ.ರವಿ ಅಭಿಮಾನಿಗಳು ಪಾದಯಾತ್ರೆ ನಡೆಸಿದ್ದಾರೆ. 

ಚಿಕ್ಕಮಗಳೂರು ನಗರದ ಪ್ರವೇಶದ್ವಾರ  ಪುರದಿಂದ ಆರಂಭವಾದ ಪಾದಯಾತ್ರೆ ಆಜಾದ್ ಪಾರ್ಕ್ ವೃತ್ತಕ್ಕೆ ಆಗಮಿಸಿದ ಬಳಿಕ ಕೋಟೆ, ಗವನಹಳ್ಳಿ, ಮೂಗ್ತಿಹಳ್ಳಿ, ರಾಮನಹಳ್ಳಿ, ಮಾರ್ಕೇಟ್ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳ ಬಿಜೆಪಿ ಕಾರ್ಯಕರ್ತರು ನಗರಸಭೆಯ ಮಾಜಿ ಅಧ್ಯಕ್ಷ ಮುತ್ತಯ್ಯ, ಮಾಜಿ ಉಪಾಧ್ಯಕ್ಷ ಶ್ರೀನಿವಾಸ್ ಹಾಗೂ ನಗರಸಭೆ ಸದಸ್ಯ ಟಿ. ರಾಜಶೇಖರ್ ನೇತೃತ್ವದಲ್ಲಿ ಕುಮಾರಗಿರಿಗೆ ತೆರಳಿದರು. ದಾರಿಯುದ್ಧಕ್ಕೂ ಸಿ.ಟಿ.ರವಿ ಪರವಾಗಿ ಘೋಷಣೆ ಹಾಕುತ್ತಾ, ಅವರು ಈ ಬಾರಿ ಗೆಲ್ಲಬೇಕು ಎನ್ನುವ ಜತೆಗೆ ಮುಂದಿನ ಮುಖ್ಯಮಂತ್ರಿ ಸಿ.ಟಿ.ರವಿ ಎಂಬ ಘೋಷಣೆಯೊಂದಿಗೆ ಹೆಜ್ಜೆ ಹಾಕಿದರು.

ಇದನ್ನೂ ಓದಿ: ಸಿಟಿ ರವಿ ಸೋಲಿಸಲು ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್‌ ಕೊಡಿ: ಹೈಕಮಾಂಡ್‌ ವಿರುದ್ಧ ಆಕ್ರೋಶ

ಸುಬ್ರಹ್ಮಣ್ಯ ಸ್ವಾಮಿಯ ಆಯುಧವಾದ ಬೆಳ್ಳಿಯ ಬಾಣ : ಸಿ.ಟಿ.ರವಿ ಅವರು ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ಈ ಬಾರಿಯೂ ಗೆಲ್ಲಲಿದ್ದಾರೆ. ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಸತತವಾಗಿ ನಾಲ್ಕು ಬಾರಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಬಾರಿಯೂ ಗೆಲ್ಲಲಿದ್ದಾರೆ, ಅವರು ಸಿಎಂ ಆಗಬೇಕೆಂಬುದು ಕ್ಷೇತ್ರದ ಜನರ ಆಶಯವಾಗಿದೆ ಹಾಗಾಗಿ ಪಾದಯಾತ್ರೆ ಹೊರಟಿದ್ದೇವೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ. ಪಾದಯಾತ್ರೆಯಲ್ಲಿ ಕುಮಾರಗಿರಿಗೆ ತೆರಳಿದ ಕಾರ್ಯಕರ್ತರು ತಮಿಳುನಾಡಿನಲ್ಲಿ ಸಿ ಟಿ ರವಿ ಗೆ ಉಡುಗೊರೆಯಾಗಿ ಬಂದಿದ್ದ ಸುಬ್ರಹ್ಮಣ್ಯ ಸ್ವಾಮಿಯ ಆಯುಧವಾದ ಬೆಳ್ಳಿಯ ಬಾಣವನ್ನು ಕುಮಾರಗಿರಿಯ ಸುಬ್ರಹ್ಮಣ್ಯ ಸ್ವಾಮಿಗೆ ನೀಡಿ ಸಿ.ಟಿ.ರವಿ ಸಿಎಂ ಆಗಲಿ ಎಂದು ಅಭಿಮಾನಿಗಳು ಬೇಡಿಕೊಂಡರು.

ಡಿಕೆ ಶಿವಕುಮಾರ್‌ ಮುಖ್ಯಮಂತ್ರಿ ಆಗೋದಿಲ್ಲ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ಸಿಟಿ ರವಿ ವಿರುದ್ದ ಮಾನಷ್ಟ ಮೊಕದ್ದಮೆ ಹೊಡಲಾಗುತ್ತದೆ ಎಂದಿದ್ದಾರೆ. ಆದರೆ, ಮಾನ ಇದ್ದವರು ಮಾತ್ರ ಮಾನನಷ್ಟ ಮೊಕದ್ದಮೆ ಹೂಡುತ್ತಾರೆ. ಈ ಬಗ್ಗೆ ಯೋಚನೆ ಮಾಡಿದರೆ ಅದು ಅವರಿಗೇ ತಿರುಗುಬಾಣ ಆಗಲಿದೆ. ಇನ್ನು ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಹೊರಟಿದ್ದು, ಅದು ಸಾಧ್ಯವೇ ಇಲ್ಲ. ಕಾರಣ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವುದೇ ಇಲ್ಲ. ಕಾಂಗ್ರೆಸ್‌ ಆಡಳಿತದಲ್ಲಿ ಏನು ಮಾಡಿದ್ದಾರೆಂದು ಮತವನ್ನು ಕೇಳಲು ಹೋಗುತ್ತಾರೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ: ನನ್ನ ಖಡ್ಗ ಕಾಫಿಗರ ರಕ್ತಕ್ಕಾಗಿ ತಹತಹಿಸುತ್ತಿದೆ: ಟಿಪ್ಪು ಖಡ್ಗದ ಮೇಲಿನ ಬರಹ ರಿವೀಲ್

ಚಿಕ್ಕಮಗಳೂರಿನಲ್ಲಿ ಹಿಂದುತ್ವವೇ ಗೆಲ್ಲುವುದು: ಚಿಕ್ಕಮಗಳೂರಿನ ಬಗ್ಗೆ ಡಿಕೆ ಶಿವಕುಮಾರ್‌ಗೆ ಯಾವುದೇ ತಿಳುವಳಿಕೆ ಇಲ್ಲ. ಚಿಕ್ಕಮಗಳೂರಿನಲ್ಲಿ ಹಿಂದುತ್ವ ಹಾಗೂ ಅಭಿವೃದ್ದಿಯೇ ಗೆಲ್ಲುವುದು. ನಾವು ಅಭಿವೃದ್ಧಿ ಹಾಗೂ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ. ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯಲ್ಲಿ ಬೆಂಕಿ ಹಾಕಿದವರಿಗೆ ಬೆಂಬಲ ನೀಡಿದವರಿಗೆ ಡಿಕೆ ಶಿವಕುಮಾರ್‌ ಅಚರೆಲ್ಲರೂ ನನ್ನ ಸಹೋದರರು ಇದ್ದಂತೆ ಎಂದು ಹೇಳಿದರು. ಈ ಮೂಲಕ ತನ್ನದೇ ಪಕ್ಷದ ದಲಿತ ಶಾಸಕನಿಗೆ ರಕ್ಷಣೆ ನೀಡದೆ ರಾಜಕಾರಣ ಮಾಡಿದವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios