ನನ್ನ ಖಡ್ಗ ಕಾಫಿಗರ ರಕ್ತಕ್ಕಾಗಿ ತಹತಹಿಸುತ್ತಿದೆ: ಟಿಪ್ಪು ಖಡ್ಗದ ಮೇಲಿನ ಬರಹ ರಿವೀಲ್
ಟಿಪ್ಪುವನ್ನ ನೀವು ಹೇಗೆ ಮೈಸೂರಿನ ಹುಲಿ, ಧರ್ಮಸಹಿಷ್ಣು, ಕನ್ನಡ ಪ್ರೇಮಿ ಅಂತ ಕರೆಯುತ್ತೀರಾ. ಆತ ತನ್ನ ಖಡ್ಗದ ಮೇಲೆ ಕಾಫಿಗರ ರಕ್ತಕ್ಕಾಗಿ ತನ್ನ ಖಡ್ಗ ತಹತಹಿಸುತ್ತಿದೆ ಎಂದು ಅರೆಬಿಕ್ ಭಾಷೆಯಲ್ಲಿ ಬರೆಸಿಕೊಂಡಿದ್ದನು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮಾ.22): ಟಿಪ್ಪುವನ್ನ ನೀವು ಹೇಗೆ ಮೈಸೂರಿನ ಹುಲಿ, ಧರ್ಮಸಹಿಷ್ಣು, ಕನ್ನಡ ಪ್ರೇಮಿ ಅಂತ ಕರೆಯುತ್ತೀರಾ. ಆತ ತನ್ನ ಖಡ್ಗದ ಮೇಲೆ ಕಾಫಿಗರ ರಕ್ತಕ್ಕಾಗಿ ತನ್ನ ಖಡ್ಗ ತಹತಹಿಸುತ್ತಿದೆ ಎಂದು ಅರೆಬಿಕ್ ಭಾಷೆಯಲ್ಲಿ ಬರೆಸಿಕೊಂಡಿದ್ದ. ರಕ್ತಕ್ಕಾಗಿ ಹಾತೊರೆಯುತ್ತಿದ್ದವನನ್ನ ಮತಾಂಧ ಅನ್ನದೆ ಇನ್ನೇನು ಹೇಳಬೇಕು ಎಂದು ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್‍ಗೆ ಸಂಬಂಧಪಟ್ಟಂತೆ ಸಾಕಷ್ಟು ಮಾಹಿತಿ ಸಿಕ್ಕಿದೆ. ಟಿಪ್ಪು ಆಡಳಿತದಲ್ಲಿ ಮಾಡಿದ ದೌರ್ಜನ್ಯಗಳಿಗೂ ಸಾಕ್ಷಿ ಇದೆ. ಉರಿಗೌಡ-ನಂಜೇಗೌಡ ಐತಿಹಾಸಿಕ ವ್ಯಕ್ತಿಗಳು ಅನ್ನೋದಕ್ಕೂ ದಾಖಲೆಗಳಿವೆ. 30 ವರ್ಷಗಳ ಹಿಂದೆಯೇ ಸುವರ್ಣ ಮಂಡ್ಯ ಪುಸ್ತಕದಲ್ಲಿ ದಾಖಲಿಸಲಾಗಿದೆ. ಟಿಪ್ಪುವನ್ನ ಕೊಂದ್ರೋ ಇಲ್ವೋ ಅನ್ನುವುದು ಅಪರಿಚಿತ ವ್ಯಕ್ತಿಗಳು ಎಂದು ಇದೆ. ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿ ಸಂಗ್ರಹಿಸುತ್ತಾ ಇದ್ದೇವೆ. ಮಾಹಿತಿ ಸಿಕ್ಕ ಬಳಿಕ ನಿರ್ಮಲಾನಂದನಾಥ ಶ್ರೀಗಳ ಜೊತೆ ಚರ್ಚೆ ಮಾಡುತ್ತೇವೆ ಎಂದರು.
ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ರಾಜ್ಯ ದ್ರೋಹಿ ಹೈದರಾಲಿ ಪರ ನಿಂತುಕೊಳ್ತಿದ್ದರು: ಸಿಟಿ ರವಿ ವಾಗ್ದಾಳಿ
ಕಾಫಿಗರ ರಕ್ತಕ್ಕಾಗಿ ನನ್ನ ಖಡ್ಗ ತಹತಹಿಸುತ್ತಿದೆ: ಟಿಪ್ಪುವನ್ನ ನೀವು ಹೇಗೆ ಮೈಸೂರಿನ ಹುಲಿ, ಧರ್ಮಸಹಿಷ್ಣು, ಕನ್ನಡ ಪ್ರೇಮಿ ಅಂತ ಕರೆಯುತ್ತೀರಾ. ಆತ ತನ್ನ ಖಡ್ಗದ ಮೇಲೆ ಕಾಫಿಗರ ರಕ್ತಕ್ಕಾಗಿ ತನ್ನ ಖಡ್ಗ ತಹತಹಿಸುತ್ತಿದೆ ಎಂದು ಅರೆಬಿಕ್ ಭಾಷೆಯಲ್ಲಿ ಬರೆಸಿಕೊಂಡಿದ್ದನು. ಇನ್ನು ಕಾಫಿಗರು ಅಂದರೆ ಯಾರು? ಯಾರ್ಯಾರು ಇಸ್ಲಾಂ ಧರ್ಮವನ್ನ ನಂಬುವುದಿಲ್ಲವೋ ಅವರೆಲ್ಲರೂ ಕಾಫಿಗರು. ಓಕ್ಕಲಿಗರು, ಲಿಂಗಾಯಿತರು, ಕುರುಬರು, ಬ್ರಾಹ್ಮಣರು, ಜೈನರು ಎಲ್ಲರೂ ಕೂಡ ಕಾಫಿಗರು. ಅವನನ್ನ ಹೇಗೆ ಧರ್ಮಸಹಿಷ್ಣು ಅಂತೀರಾ ಎಂದು ಪ್ರಶ್ನಿಸಿದ್ದಾರೆ.
ಕೂಲಿಗೆ ಬಂದ ಹೈದರಾಲಿ ಮೋಸ ಮಾಡಿ ಅಧಿಕಾರ ಕಿತ್ತುಕೊಂಡ: ಟಿಪ್ಪುವನ್ನ ಮೈಸೂರು ಹುಲಿ, ಕನ್ನಡಪ್ರೇಮಿ, ಧರ್ಮಸಹಿಷ್ಣು ಎಂದು ಓದಿದ್ದೇವೆ. ಆದರೆ, ನಾವು ಪುಸ್ತಕದಲ್ಲಿ ಓದಿದ್ದು ಬೇರೆ, ವಾಸ್ತವದಲ್ಲಿ ದಾಖಲೆಗಳ ಪ್ರಕಾರ ಸತ್ಯವೇ ಬೇರೆ. ರಕ್ತಕ್ಕಾಗಿ ಹಾತೊತೆಯುತ್ತಿದ್ದ ಅವನನ್ನ ಮತಾಂಧ ಎಂದು ಹೇಳಬೇಕಿತ್ತು. ಆದರೆ, ದುರ್ದೈವ ಸರ್ವಧರ್ಮ ಸಹಿಷ್ಣು ಅಂತ ಸುಳ್ಳು ಇತಿಹಾಸ ಬರೆದರು. ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ಮೋಸದಿಂದ ನಮ್ಮನ್ನು ಆಳಿದರು ಎಂದು ಓದಿದ್ದೇವೆ. ಇದು ಕೂಡ ಅದೇ ರೀತಿ. ಕೂಲಿಗೆ ಬಂದ ಹೈದರಾಲಿಯೂ ಮೋಸದಿಂದಲೇ ಅಧಿಕಾರ ನಡೆಸಿದ್ದು. ಹೈದರಾಲಿ ನಂಬಿಕೆದ್ರೋಹಿ ಅಂತ ನಮ್ಮ ಪಠ್ಯಪುಸ್ತಕದಲ್ಲಿ ಬರೆಯಬೇಕಿತ್ತು ಎಂದು ಇತಿಹಾಸದ ವಿರುದ್ಧ ಕಿಡಿಕಾರಿದ್ದಾರೆ.
ಟಿಪ್ಪು ವಿರುದ್ಧ ಕತ್ತಿ ಹಿಡಿದು ಹೋರಾಡ್ತಿದ್ದೆ : ಟಿಪ್ಪು ಕಾಲಮಾನದಲ್ಲಿ ನಾನು ಇದ್ದಿದ್ದರೆ ಆಂಜನೇಯ ಮಂದಿರ ಮಸೀದಿ ಆಗಲು ಬಿಡುತ್ತಿರಲಿಲ್ಲ. ನಾನೇ ಉರೀಗೌಡ... ನಾನೇ ದೊಡ್ಡ ನಂಜೇಗೌಡನಂತೆ ಕತ್ತಿ ಹಿಡಿದು ಸಿಡಿದು ನಿಲ್ಲುತ್ತಿದ್ದೆ. ಇತಿಹಾಸದಲ್ಲಿ ಮತಾಂಧನ ವಿರುದ್ಧ ಕತ್ತಿ ಎತ್ತಿದ ಅನ್ನಿಸಿಕೊಳ್ಳುತ್ತಿದೆ ಎಂದರು. ಸಿ.ಟಿ.ರವಿ ಉರೀಗೌಡ, ಅಶ್ಚಥ್ ನಾರಾಯಣ್ ನಂಜೇಗೌಡ ಎಂಬಂತೆ ಬಿಂಬಿಸಿ ಸೋಶಿಯಲ್ ಮೀಡಿಯಾದಲ್ಲಿ ಆಧಾರ್ ಕಾರ್ಡ್ ಹರಿಬಿಟ್ಟಿರುವುದನ್ನ ಸಮರ್ಥಿಸಿಕೊಂಡರು. ಹೌದು, ನಾವು ಅದೇ. ನಮಗೆ ಖುಷಿ-ಹೆಮ್ಮೆ ಇದೆ ಎಂದರು.
ಆದಿಚುಂಚನಗಿರಿ ಶ್ರೀಗಳ ಎಚ್ಚರಿಕೆಗೂ ಮಣಿಯದ ಬಿಜೆಪಿ ನಾಯಕರು! ದಾಖಲೆ ಸಂಗ್ರಹಿಸಲು ಮುಂದಾದ ಸಿ.ಟಿ.ರವಿ!
ಡಿಕೆಶಿ ವಿರುದ್ದ ಪರೋಕ್ಷ ವಾಗ್ದಾಳಿ : ಗುಲಾಮಿ ಮಾನಸೀಕತೆಯಲ್ಲಿ ಬದುಕುವ ಜನರಿಗಿಂತ ಹಾಗೇ ಕರೆಸಿಕೊಳ್ಳುವುದು ಒಳ್ಳೆಯದು ಎಂದು ಕಾಂಗ್ರೆಸ್ ಪ್ರಚಾರಕ್ಕೆ ಟಾಂಗ್ ಕೊಟ್ಟಿದ್ದಾರೆ. ಇವತ್ತು ಟಿಪ್ಪು ಇದ್ದು ಆತ ಆಂಜನೇಯ ದೇವಸ್ಥಾನವನ್ನ ಮಸೀದಿ ಮಾಡ ಹೊರಟಿದ್ದರೆ ಸುಮ್ಮನೆ ಇರ್ತಿದ್ವಾ.? ಕೆಲವರಿಗೆ ಸತ್ಯ ಗೊತ್ತು. ಆದರೂ ಹೇಡಿಗಳಂತೆ ಬದುಕುತ್ತಿದ್ದಾರೆ. ಓಟಿನ ಆಸೆಗೆ ಒಪ್ಪಿಕೊಳ್ಳಲು ಅವರು ತಯಾರಿರಲಿಲ್ಲ, ನಾವು ಸತ್ಯವನ್ನು ಪ್ರತಿಪಾದನೆ ಮಾಡುತ್ತಿದ್ದೇವೆ. ದುರ್ದೈವ ಕೆಲವರು ಕಪಾಲೇಶ್ವರ ಬೆಟ್ಟವನ್ನೇ ಮತಾಂತರ ಮಾಡಲು ಹೊರಟಿದ್ದ ಜನ ಇಂದು ದೊಡ್ಡ-ದೊಡ್ಡ ಮಾತುಗಳನ್ನ ಆಡುತ್ತಾರೆ. ಗುಲಾಮಿ ಮಾನಸಿಕತೆಯ ಆ ಜನ ಕಪಾಲೇಶ್ವರ ಬೆಟ್ಟವನ್ನ ಮತಾಂತರ ಮಾಡಲು ಮುಂದಾಗಿದ್ದರು ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.