ಸೋತಿರುವ ಕನ್ನಯ್ಯ ವಿಧಿ ಇಲ್ಲದೆ ಕಾಂಗ್ರೆಸ್ ಸೇರಿದ್ದಾರೆ
- ಕನ್ನಯ್ಯಾಕುಮಾರ್ ಒಬ್ಬ ತುಕ್ಡೆ ಗ್ಯಾಂಗಿನ ನಾಯಕ, ಸೋಲು ಕಂಡಿರುವ ಅವರು ಬೇರೆ ವಿಧಿ ಇಲ್ಲದೇ ಕಾಂಗ್ರೆಸ್‌ಗೆ ಸೇರ್ಪಡೆ
- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕೆ
ಚಿಕ್ಕಮಗಳೂರು (ಅ.03): ಕನ್ನಯ್ಯಾಕುಮಾರ್ (Kanhaiya kumar ) ಒಬ್ಬ ತುಕ್ಡೆ ಗ್ಯಾಂಗಿನ ನಾಯಕ, ಸೋಲು ಕಂಡಿರುವ ಅವರು ಬೇರೆ ವಿಧಿ ಇಲ್ಲದೇ ಕಾಂಗ್ರೆಸ್‌ಗೆ (congress) ಸೇರ್ಪಡೆಗೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಟೀಕಿಸಿದ್ದಾರೆ.
ಬಿಜೆಪಿಯನ್ನು (BJP) ತುಕ್ಡೆ, ತುಕ್ಡೆ ಮಾಡ್ತೇವೆ ಎಂಬ ಕಾಂಗ್ರೆಸ್ ಮುಖಂಡ ಕನ್ನಯ್ಯ ಕುಮಾರ್ ಅವರ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಇವರ ತಾತ, ಮುತ್ತಾತರು ಈ ರೀತಿ ಹೇಳಿ ಕಳೆದುಹೋಗಿದ್ದಾರೆ. ಅವರ ಸಮಾಧಿ ಮೇಲೆ ಬಿಜೆಪಿ ಸಮಾಧಿ ಕಟ್ಟಿದೆ. ಕನ್ನಯ್ಯ ಕುಮಾರ್ ತುಕ್ಡೆ ಗ್ಯಾಂಗಿನ ನಾಯಕ. ಹಿಟ್ಟು ಹಳಸಿತ್ತು, ಡ್ಯಾಶ್ ಕಾದಿತ್ತು ಅನ್ನುವ ಗಾದೆ ಮಾತಿದೆ. ಈಗ ಅದೇ ಪರಿಸ್ಥಿತಿ ಕಾಂಗ್ರೆಸ್‌ನದ್ದಾಗಿದೆ ಎಂದು ವ್ಯಂಗ್ಯವಾಡಿದರು.
ತಾಲಿಬಾನಿಗಳನ್ನು, ಐಎಸ್‌ಐ ಉಗ್ರರನ್ನು ಭಾರತದೊಳಕ್ಕೆ ಬಿಟ್ಟಿದ್ದೇ ಕಾಂಗ್ರೆಸ್: ಸಿ ಟಿ ರವಿ
ಮಾನಸಿಕ ದುರ್ಬಲತೆಯ ಜನರಿಗೆ ಹಣದ ಆಮಿಷ ತೋರಿಸುವ ಮೂಲಕ ಮತಾಂತರ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಮತಾಂತರ ನಿಷೇಧಕ್ಕೆ ಸರ್ಕಾರ ಕಾಯ್ದೆ ರೂಪಿಸಿದ್ದಲ್ಲಿ ಅದಕ್ಕೆ ಸಮ್ಮತಿ ಇದೆ ಎಂದು ಹೇಳಿದರು.
ಸಿ ಟಿ ರವಿ ಟಾಂಗ್
ರಾಜ್ಯ ರಾಜಕೀಯದಲ್ಲಿ 'ತಾಲಿಬಾನ್' ವಾರ್ ಮುಂದುವರೆದಿದೆ. ಸಿದ್ದರಾಮಯ್ಯ ತಾಲಿಬಾನ್ ಹೇಳಿಕೆಗೆ ಸಿ ಟಿ ರವಿ ಟಾಂಗ್ ನೀಡಿದ್ಧಾರೆ.
'ಯುದ್ಧ, ಪ್ರವಾಹ ಸ್ಥಿತಿಯಲ್ಲಿದ್ದಾಗ ಬರುವವರೇ ಸಂಘದವರು. ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುತ್ತಾರೆ. ಪ್ರಾಣವನ್ನು ಒತ್ತೆ ಇಟ್ಟು ರಕ್ಷಣೆ ಮಾಡುತ್ತಾರೆ. ಆರ್‌ಎಸ್‌ಎಸ್ ನಿಸ್ವಾರ್ಥ ಸೇವೆಯನ್ನು ತಾಲಿಬಾನಿಗೆ ಹೋಲಿಸಲು ಮನಸ್ಸಾದರೂ ಹೇಗೆ ಬಂತು..? ಎಂದು ಸಿ ಟಿ ರವಿ ತಿರುಗೇಟು ನೀಡಿದ್ದಾರೆ.
'ಪ್ಯಾಂಟ್ ಕಳಚಿ ಸಿಡಿ ಮಾಡಿಕೊಳ್ಳುವ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ'
ನಿಮ್ಮ ಪಕ್ಷದ ಆಡಳಿತದಲ್ಲಿ ಅಲ್ಲವೇ ಸಿದ್ದರಾಮಯ್ಯನವರೇ, ತಾಲಿಬಾನಿಗಳನ್ನು, ಐಎಸ್‌ಐ ಉಗ್ರರನ್ನು ಭಾರತದೊಳಕ್ಕೆ ನುಸುಳಲು ಬಿಟ್ಟು ಮುಂಬೈ ಹಾಗು ಇನ್ನಿತರ ಭಾಗಗಳಲ್ಲಿ ಉಗ್ರರ ದಾಳಿಯಾಗುವಂತೆ ಮಾಡಿದ್ದು? ನೂರಾರು ಮುಗ್ದರ ಸಾವಿನ ಭಾರ ನಿಮ್ಮ ಪಕ್ಷದ ಮೇಲಿರುವುದನ್ನು ಮರೆತುಬಿಟ್ಟರಾ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ ಸಿ ಟಿ ರವಿ