ಮಂಡ್ಯ [ಸೆ.18]: ಅನರ್ಹ ಶಾಸಕ ನಾರಾಯಣ ಗೌಡರಿಂದ ಬುದ್ದಿ ಹೇಳಿಸಿಕೊಳ್ಳುವ ಅಗತ್ಯ ನನಗಿಲ್ಲ ಎಂದು ಮಾಜಿ ಸಚಿವ ಪುಟ್ಟರಾಜು ವಾಗ್ದಾಳಿ ನಡೆಸಿದ್ದಾರೆ.

ಪಾಂಡವರಪುರದಲ್ಲಿ ಮಾತನಾಡಿದ ಪುಟ್ಟರಾಜು ಕಾಂಗ್ರೆಸ್ ಮುಖಂಡ ಚೆಲುವರಾಯ ಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಅವರು ಯಾವ ಪಕ್ಷದಲ್ಲಿದ್ದಾರೆ. ಬೆಳಗ್ಗೆ ಸಿದ್ದರಾಮಯ್ಯ ಜೊತೆಗಿದ್ದರೆ ಸಂಜೆ ಯಡಿಯೂರಪ್ಪ ಜೊತೆಗೆ ಇರುತ್ತಾರೆ ಎಂದರು.

ಇನ್ನು ಶಾಸಕ ಸಂಸದ, ಮಂತ್ರಿಯಾಗಿದ್ದವರು ಯಾವ ರೀತಿ ನಡೆದುಕೊಳ್ಳಬೇಕೆನ್ನುವುದನ್ನು ತಿಳಿದುಕೊಳ್ಳಲು ನಿಖಿಲ್ ಕುಮಾರಸ್ವಾಮಿ ಸೋಲಿನ ಹೊಣೆಯನ್ನೂ ನಾನೇ ಹೊತ್ತುಕೊಂಡಿದ್ದೇನೆ.  ಅಂಬರೀಶ್ ಅಜಾತಶತ್ರುವಾಗಿದ್ದು, ಅವರ ಹೆಸರಿನಿಂದ ಸುಮಲತಾ ಗೆದ್ದರು ಎಂದು ಪುಟ್ಟರಾಜು ಹೇಳಿದರು.

ಇನ್ನು ಜೆಡಿಎಸ್ ನಾಯಕರಾದ ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ದ್ವೇಷದ ರಾಜಕಾರಣ ಮಾಡುವವರು ಮನೆಗೆ ಹೋದರು. ಸದ್ಯ ಕಾಂಗ್ರೆಸಿನಲ್ಲಿರುವ ಚೆಲುವರಾಯಸ್ವಾಮಿ ಬಾಳೆ ಎಲೆ ರೀತಿ ಆಗಬೇಕು. ಎಂಜಲು ಎಲೆ ಆಗಬಾರದು ಎಂದರು.  ಚಲುವರಾಯಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ಮನ್ ಮುಲ್ ನಲ್ಲಿ ಗೆದ್ದ ನಿರ್ದೇಶಕರನ್ನು ವಜಾ ಮಾಡಲು ಹೊರಟಿದೆ. ಅಧಿಕಾರಿಗಳು ಸಹ ವಜಾಗೊಳಿಸಲು ಸಹಕರಿಸುತ್ತಿದ್ದಾರೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೇವೇಗೌಡರ ಕುಟುಂಬ ನನಗೆ ಯಾವತ್ತೂ ಕಿರುಕುಳ ಕೊಟ್ಟಿಲ್ಲ. ಜೆಡಿಎಸ್ ಪಕ್ಷ ನನಗೆ ಎಲ್ಲಾ ಹುದ್ದೆಯನ್ನೂ ನೀಡಿದೆ. ನನ್ನ ಕುಟುಂಬಕ್ಕೆ ಅಧಿಕಾರ ಕೊಟ್ಟಿದೆ ಎಂದರು.

ಡಿಕೆಶಿ ವಿಚಾರದಲ್ಲಿ ಕುಮಾರಸ್ವಾಮಿ ಹಗುರ ಹೇಳಿಕೆ ಆರೋಪದ ಬಗ್ಗೆಯೂ ಪ್ರತಿಕ್ರಿಯಿಸಿದ ಡಿಕೆಶಿ- ಕುಮಾರಸ್ವಾಮಿ ಸಂಬಂಧ ವನ್ನು ಬೇರ್ಪಡಿಸುವ ಹುನ್ನಾರವನ್ನು ಚಲುವರಾಯಸ್ವಾಮಿ ಮಾಡುತ್ತಿದ್ದಾರೆ. ಚಲುವರಾಯಸ್ವಾಮಿ ಚುನಾವಣೆ ಸೋತ ಬಳಿಕ ಗುರುತಿಸಿಕೊಳ್ಳಲು ಇಂತಹ ಹೇಳಿಕೆ ಕೊಡುತ್ತಿದ್ದಾರೆ ಎಂದು ಪುಟ್ಟರಾಜು ಹೇಳಿದರು.