Asianet Suvarna News Asianet Suvarna News

ಗಂಗಾವತಿ ಜನವಸತಿ ಪ್ರದೇಶದಲ್ಲಿ ಮೊಸಳೆ ಪ್ರತ್ಯಕ್ಷ; ಆತಂಕದಲ್ಲಿ ಜನರು!

ಜಿಲ್ಲೆಯ ಗಂಗಾವತಿ ನಗರದ ಹೊರವಲಯದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು. ಮೊಸಳೆ ಕಂಡು ಸ್ಥಳೀಯರು ಆತಂಕಕೊಂಡ ಘಟನೆ ನಡೆದಿದೆ.

Crocodile spotted in residential area panic among people in gangavati at koppal district rav
Author
First Published Jul 14, 2023, 9:55 AM IST

ಕೊಪ್ಪಳ (ಜು.14) ಜಿಲ್ಲೆಯ ಗಂಗಾವತಿ ನಗರದ ಹೊರವಲಯದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು. ಮೊಸಳೆ ಕಂಡು ಸ್ಥಳೀಯರು ಆತಂಕಕೊಂಡ ಘಟನೆ ನಡೆದಿದೆ.

ತಹಶಿಲ್ದಾರ್ ಕಚೇರಿ ಬಳಿ ಇರೋ ಕ್ಯಾಂಟೀನ್ ಬಾಗಿಲ ಬಳಿ ಬಂದ ಮೊಸಳೆ. ಸುತ್ತಮುತ್ತ ಮನೆಗಳಿರುವ ಪ್ರದೇಶ. ಜನರು, ಮಕ್ಕಳು ಓಡಾಡುವ ಸ್ಥಳ. ಮೊಸಳೆ ಕಾಣಿಸಿಕೊಂಡ ಬಳಿಕ ಆತಂಕಕ್ಕೀಡಾದ ಜನರು.  ನಗರದ ಪ್ರದೇಶದಿಂದ ನಾಲ್ಕೈದು ಕಿಲೋಮೀಟರ್ ದೂರ ಇರೋ ನದಿ. ತುಂಗಾಭದ್ರ ಎಡದಂಡೆ ಕಾಲುವೆ ಮೂಲಕ ಬಂದಿರುವ ಸಾಧ್ಯತೆ.  

ಕಳೆದ ತಿಂಗಳಷ್ಟೇ ಕುರಿಹಟ್ಟಿ ಗ್ರಾಮದಲ್ಲಿ ಮೊಸಳೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದ್ದ ಮೊಸಳೆ. ಇದೀಗ ತಿಂಗಳೊಳಗೆ ಎರಡನೇ ಬಾರಿ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿರುವುದು ಜನರು ಆತಂಕ ಉಂಟುಮಾಡಿದೆ. 

 

ಯಾದಗಿರಿ; ಸಣ್ಣಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ, ಜನರಲ್ಲಿ ಆತಂಕ

ಕೃಷಿ ಹೊಂಡಕ್ಕೆ ವಿಷ: ಮೀನುಗಳ ಮಾರಣಹೋಮ

ಲಕ್ಷ್ಮೇಶ್ವರ :ದುಷ್ಕರ್ಮಿಗಳು ಕೃಷಿ ಹೊಂಡಕ್ಕೆ ವಿಷ ಹಾಕಿದ ಪರಿಣಾಮ ಕೆರೆಯಲ್ಲಿ ಸಾಕಿದ್ದ ಸಾವಿರಾರು ಮೀನುಗಳು ಸಾವಿಗೀಡಾದ ಘಟನೆ ತಾಲೂಕಿನ ಬೂದಿಹಾಳ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ಗ್ರಾಮದ ನಿವಾಸಿ, ಗಡಿ ದ್ಯಾಮವ್ವನ ದೇಗುಲದ ಪೂಜಾರಿಕೆ ಮಾಡುತ್ತಿರುವ ಮಲ್ಲಪ್ಪ ಹೆಗ್ಗಣ್ಣವರ ಅವರಿಗೆ ಸೇರಿದ ಕೃಷಿ ಹೊಂಡದಲ್ಲಿನ ಮೀನುಗಳು ಮೃತಪಟ್ಟು ದಡದಂಚಿನಲ್ಲಿ ತೇಲುತ್ತಿವೆ.

ಕೃಷಿಕ ಮಲ್ಲಪ್ಪ ಹೋಂಗಾರ್ಡ್‌ನ ಮಾಜಿ ಕಮಾಂಡರ್‌ ಆಗಿದ್ದು, ಕಳೆದ 12 ವರ್ಷಗಳ ಹಿಂದೆ ಬೂದಿಹಾಳ ವ್ಯಾಪ್ತಿಯಲ್ಲಿ ಆರು ಎಕರೆ ಜಮೀನು ಖರೀದಿಸಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದರೊಂದಿಗೆ ಕೃಷಿಹೊಂಡ ನಿರ್ಮಿಸಿ ಮೀನು ಸಾಕಾಣಿಕೆಯನ್ನೂ ಕೈಗೊಂಡಿದ್ದರು. ಈ ಬಾರಿ . 30 ಸಾವಿರ ಮೌಲ್ಯದ ಮೀನು ಮರಿಗಳನ್ನು ಕೆರೆಗೆ ಬಿಟ್ಟಿದ್ದರು. ಮೀನು ದೊಡ್ಡದಾಗಿ ಮಾರಾಟ ಮಾಡಿದ್ದರೆ ಇವರಿಗೆ ಲಕ್ಷಾಂತರ ರುಪಾಯಿ ಆದಾಯ ಸಿಗುತ್ತಿತ್ತು ಎನ್ನಲಾಗಿದೆ. ಆದರೆ ದುಷ್ಕರ್ಮಿಗಳು ವಿಷ ಹಾಕಿ ಮೀನು ಮರಿಗಳನ್ನು ಸಾಯಿಸಿದ್ದರಿಂದ ತುಂಬ ನೋವಾಗಿದೆ ಎಂದು ರೈತ ಕಣ್ಣೀರು ಹಾಕಿದರು.

Viral Video : ಇನ್ನೇನು ಮುಗಿತು ಕಥೆ ಎನ್ನುವಾಗ್ಲೇ ಗ್ರೇಟ್ ಎಸ್ಕೇಪ್..! ಜೀವನ ಪಾಠ ಹೇಳುತ್ತೆ ಈ ವಿಡಿಯೋ

Follow Us:
Download App:
  • android
  • ios