ಕಾರವಾರ: ಕಾಳಿ ನದಿಯಲ್ಲಿ ಈಜಲು ಹೋದವನನ್ನು ಎಳೆದೊಯ್ದ ಮೊಸಳೆ!
ಈಜಲು ಹೋದವನನ್ನು ಮೊಸಳೆ ಎಳೆದೊಯ್ದ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ನಡೆದಿದೆ. ವ್ಯಕ್ತಿಗಾಗಿ ಶೋಧ ಮುಂದುವರೆದಿದೆ.
ಉತ್ತರಕನ್ನಡ (ನ.3): ಈಜಲು ಹೋದವನನ್ನು ಮೊಸಳೆ ಎಳೆದೊಯ್ದ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ನಡೆದಿದೆ. ಕಾಳಿ ನದಿಯಲ್ಲಿ ಈಜಲು ತೆರಳಿದ್ದ ಅಪರಿಚಿತ ವ್ಯಕ್ತಿಯನ್ನು ಮೊಸಳೆ ಎಳೆದೊಯ್ದಿದ್ದು ಇದನ್ನು ಸ್ಥಳೀಯರು ನೋಡಿದ್ದಾರೆ. ದಾಂಡೇಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ, ಹುಡುಕಾಟ ಆರಂಭಿಸಿದ್ದಾರೆ. ನಾಪತ್ತೆಯಾದ ವ್ಯಕ್ತಿಗಾಗಿ ಪೊಲೀಸರು, ಅಗ್ನಿಶಾಮಕದಳ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಹುಡುಕಾಟ ನಡೆಯುತ್ತಿದೆ. ನಾಪತ್ತೆಯಾದ ವ್ಯಕ್ತಿಯನ್ನು ದಾಂಡೇಲಿ ನಿವಾಸಿ ಪೀತಾಂಬರಿ ದಾಸ್ ಎಂದು ಗುರುತಿಸಲಾಗಿದೆ. ಬೆಳಗ್ಗೆ ಸುಮಾರು 7.30 ಗಂಟೆಯ ಅಂದಾಜಿಗೆ ಘಟನೆ ನಡೆದಿದೆ. ದಂಡೆಯ ಮೇಲೆ ಚಪ್ಪಲಿ, ಬಟ್ಟೆಯನ್ನು ಇಟ್ಟು ಪೀತಾಂಬರಿ ದಾಸ್ ನದಿಗೆ ಇಳಿದಿದ್ದ. ಈ ವೇಳೆ ಮೊಸಳೆಯಿಂದ ದಾಳಿಗೊಳಗಾದ. ಬಳಿಕ ಮೊಸಳೆ ಆತನನ್ನು ಹೊತ್ತೊಯ್ದಿದೆ. ಕಾಳಿ ನದಿಯು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮೂಲಕ ನದಿ. ಈ ನದಿಯು ದಿಗ್ಗಿ ನದಿಯಿಂದ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಕಾರವಾರದ ದೇವಭಾಗ್ ಬೀಚ್ ಬಳಿ ಕಾಣಿಸಿಕೊಂಡ ಡಾಲ್ಫಿನ್ ಆಟ:
ಕಾರವಾರದ ದೇವಭಾಗ್ ಜಂಗಲ್ ರೆಸಾರ್ಟ್ ಬಳಿ ಡಾಲ್ಪಿನ್ ಕಾಣಸಿಕೊಂಡು ಅವರುಗಳ ಆಟ ನೋಡುಗರ ಮನ ತಣಿಸಿತು. ಅರಬ್ಬೀ ಸಮುದ್ರದಲ್ಲಿ ನೀರು ಬಿಟ್ಟು ಮೇಲಕ್ಕೆ ಜಿಗಿಯುತ್ತಾ ಸಾಗಿದ ಡಾಲ್ಫಿನ್ ನೋಡಿ ಪ್ರವಾಸಿಗರ ದಿಲ್ ಖುಷ್ ಆಯ್ತು. ಪ್ರವಾಸಿಗರು ಡಾಲ್ಫಿನ್ ಆಟವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದರು.