ಉಡುಪಿ(ಮೇ 13): ಕಾಮಗಾರಿ ನಡೆಸಲು ಕಾರ್ಮಿಕರನ್ನು ಕರೆತಂದಿರುವ ಗುತ್ತಿಗೆದಾರರು ಲಾಕ್‌ಡೌನ್‌ ಸಂದರ್ಭದಲ್ಲಿ ಅವರ ಬಗ್ಗೆ ನಿಗಾ ವಹಿಸದೆ ನಿರ್ಲಕ್ಷ್ಯ ಮಾಡಿದರೆ ಅಂತಹ ಗುತ್ತಿಗೆದಾರರ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಎಚ್ಚರಿಕೆ ನೀಡಿದ್ದಾರೆ.

ಕೊಂಕಣ ರೈಲ್ವೆಯ ಕಾಮಗಾರಿಗೆ ತೆಲಂಗಾಣದಿಂದ 50 ಕಾರ್ಮಿಕರನ್ನು ಕರೆತಂದು ಈಗ ಅವರನ್ನು ಬಿಟ್ಟು ಗುತ್ತಿಗೆದಾರರ ಪರಾರಿಯಾದ ಘಟನೆ ಸೋಮವಾರ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಅಂತಹ ಗುತ್ತಿಗೆದಾರರನ್ನು ಪತ್ತೆ ಹಚ್ಚಿ ಕೇಸು ದಾಖಲಿಸುವಂತೆ ತಹಸೀಲ್ದಾರ್‌ ಅವರಿಗೆ ಆದೇಶಿಸಿದ್ದಾರೆ.

ಕೊರೋನಾ ವಾರಿಯರ್ಸ್‌ಗಳಿಗೆ ಸಿಂಗಾಪುರ ಎಂಟಿಆರ್‌ ಊಟ!

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ 7 ಸಾವಿರಕ್ಕೂ ಅಧಿಕ ಕಾರ್ಮಿಕರನ್ನು ಜಿಲ್ಲಾಡಳಿತ ಕಳುಹಿಸಿಕೊಟ್ಟಿದೆ. ಈಗ ಬೇರೆ ರಾಜ್ಯದ ಕಾರ್ಮಿಕರು ಉಳಿದುಕೊಂಡಿದ್ದರೆ ಅವರನ್ನು ಗುತ್ತಿಗೆದಾರರು ಊರಿಗೆ ಕಳುಹಿಸಿ ಕೊಡಬೇಕು, ಅವರ ಊಟ-ತಿಂಡಿಯ ವ್ಯವಸ್ಥೆ ಯನ್ನು ಗುತ್ತಿಗೆದಾರರು ಮಾಡಬೇಕು. ಇಷ್ಟುದಿನ ದುಡಿಸಿ ಈಗ ರಸ್ತೆ ಬದಿಯಲ್ಲಿ ಅವರನ್ನು ಮಾನವೀಯವಾಗಿ ಬಿಟ್ಟು ಹೋದರೆ ಜಿಲ್ಲಾಡಳಿತ ಸುಮ್ಮನಿರುವುದಿಲ್ಲ ಎಂದವರು ಎಚ್ಚರಿಸಿದ್ದಾರೆ.