ಉಡುಪಿ(ಮಾ.01): ಜಿಲ್ಲೆಯ ಪ್ರಸಿದ್ಧ ಯುವ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಆಟಗಾರ ಪ್ರಶಾಂತ್‌ ಕುಮಾರ್‌ (32) ಶುಕ್ರವಾರ ತುಮಕೂರಿನಲ್ಲಿ ಪಂದ್ಯವೊಂದರಲ್ಲಿ ಬ್ಯಾಟಿಂಗ್‌ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಅವರು ಕಾಪುವಿನ ಪಾಂಗಾಳ ಸಮೀಪದ ಸರಸ್ವತಿ ಕಾಲನಿನ ನಿವಾಸಿಯಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದರು. ಹವ್ಯಾಸಿ ಆಟಗಾರರಾಗಿದ್ದ ಅವರು ಉಡುಪಿ ಮತ್ತು ಮಂಗಳೂರಿನ ವಿವಿಧ ಕ್ರಿಕೆಟ್‌ ತಂಡಗಳಲ್ಲಿ ಆಟವಾಡುತ್ತಿದ್ದರು.

ನೇತ್ರಾವತಿಗೆ ತಡೆಗೋಡೆ ಯಾವಾಗ..? ಮತ್ತೊಬ್ಬ ಮಹಿಳೆ ಆತ್ಮಹತ್ಯೆ

ಶುಕ್ರವಾರ ತುಮಕೂರಿನಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ಬೆಂಗಳೂರಿನ ತಂಡದಲ್ಲಿ ಆಡುತ್ತಿದ್ದ ಪ್ರಶಾಂತ್‌ ಸತತ 2 ಸಿಕ್ಸ್‌ಗಳನ್ನು ಬಾರಿಸಿದ್ದರು. ನಂತರ ನೀರು ಕುಡಿಯುತ್ತಿದ್ದ ಅವರು ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ. ಪತ್ನಿ, ತಾಯಿ ಮತ್ತು ಇಬ್ಬರು ಸಹೋದರು ಇದ್ದಾರೆ.