ಬೆಂಗಳೂರು(ಫೆ.21): ಸಾಕಿದ ನಾಯಿ, ಮೊಲ, ಬೆಕ್ಕು ಸೇರಿದಂತೆ ಇನ್ನಿತರ ಪ್ರಾಣಿಗಳ ಮೃತ ದೇಹಗಳನ್ನು ರಸ್ತೆ ಬದಿ, ರಾಜಕಾಲುವೆ ಸೇರಿದಂತೆ ಎಲ್ಲೆಂದರಲ್ಲಿ ಬಿಸಾಡದೇ, ಪ್ರಾಣಿಗಳ ಮೃತ ದೇಹವನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ಬಿಬಿಎಂಪಿ ಸುಮ್ಮನಹಳ್ಳಿಯ ಬಳಿ ಪ್ರಾಣಿ ಚಿತಾಗಾರದ ವ್ಯವಸ್ಥೆ ಮಾಡಿದೆ.

ರಿಂಗ್‌ ರಸ್ತೆ, ಖಾಲಿ ನಿವೇಶನ, ಕಸದ ರಾಶಿಯಲ್ಲಿ ಸತ್ತ ಪ್ರಾಣಿ ದೇಹವನ್ನು ಎಸೆಯಲಾಗುತ್ತದೆ. ಪ್ರಾಣಿಗಳ ಮೃತ ದೇಹವನ್ನು ಗೌರವಯುತವಾಗಿ ಅಂತ್ಯಕ್ರಿಯೆ ಮಾಡುವುದಕ್ಕೆ ಬಿಬಿಎಂಪಿ ಸುಮ್ಮನಹಳ್ಳಿಯ ಬಳಿ ಪ್ರಾಣಿ ಚಿತಾಗಾರ ಸ್ಥಾಪಿಸಲಾಗಿದೆ. ದೇಶದಲ್ಲಿ ದೆಹಲಿ ಹಾಗೂ ಬೆಂಗಳೂರಿನಲ್ಲಿ ಮಾತ್ರ ಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ವಿದ್ಯುತ್‌ ಚಿತಾಗಾರವನ್ನು ನಿರ್ಮಾಣ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಬೆಂಗ್ಳೂರಲ್ಲಿ ಈ 8 ಪ್ರದೇಶಗಳಲ್ಲಿ ಮಹಿಳೆಯರು ನಾಟ್ ಸೇಫ್..!

ಚಿತಾಗಾರ ವಾರದ ಏಳು ದಿನವೂ ಕಾರ್ಯ ನಿರ್ವಹಿಸಲಿದೆ. ಬೆಳಗ್ಗೆ 7ರಿಂದ ಸಂಜೆ 6ಗಂಟೆವರೆಗೆ ತೆರೆÜದಿರುತ್ತದೆ. ಪ್ರಾಣಿಗಳ ದಹನಕ್ಕೆ ಅಗತ್ಯವಿರುವ ಬೊಂಬನ್ನು ಸಾರ್ವಜನಿಕರೇ ತರಬೇಕು ಎಂದಿದ್ದಾರೆ.

ಚಿತಾಗಾರದಲ್ಲಿ ಕುದುರೆ, ಕತ್ತೆ, ಹಸು, ಎಮ್ಮೆ ಹಾಗೂ ಎತ್ತುಗಳ ದಹನಕ್ಕೆ ಒಂದು ಸಾವಿರ ರು. ನಿಗದಿ ಪಡಿಸಲಾಗಿದೆ. ಬೆಕ್ಕು, ಕುರಿ, ಕೋತಿ ಮತ್ತು ನಾಯಿಗೆ 300 ರು ನಿಗದಿ ಪಡಿಸಲಾಗಿದೆ. ಅನಾಥ ಪ್ರಾಣಿ ದೇಹದ ಅಂತ್ಯಕ್ರಿಯೆಯನ್ನು ಉಚಿತವಾಗಿ ಮಾಡಲಾಗುವುದು ಎಂದು ವಿವರಿಸಿದರು.