ಸಮಸ್ಯೆ ಮುಕ್ತ ಪಾವಗಡ ರೂಪಿಸುವೆ: ಜನಾರ್ದನರೆಡ್ಡಿ
ಇಲ್ಲಿನ ವಿಧಾನಸಭಾ ಕ್ಷೇತ್ರದ ಕೆಆರ್‌ಪಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ನಾಗೇಂದ್ರಕುಮಾರ್‌ರನ್ನು ಅಸೆÜಂಬ್ಲಿಗೆ ಆಯ್ಕೆ ಮಾಡಿ ಕಳುಹಿಸಿದರೆ ಇನ್ನೂ ಎರಡು ವರ್ಷದೊಳಗೆ ಪಾವಗಡವನ್ನು ಸಮಸ್ಯೆ ಮುಕ್ತ ಕ್ಷೇತ್ರವನ್ನಾಗಿ ರೂಪಿಸಲು ಬದ್ಧರಾಗಿರುವುದಾಗಿ ಮಾಜಿ ಸಚಿವ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನರೆಡ್ಡಿ ಭರವಸೆ ವ್ಯಕ್ತಪಡಿಸಿದರು.
ಪಾವಗಡ : ಇಲ್ಲಿನ ವಿಧಾನಸಭಾ ಕ್ಷೇತ್ರದ ಕೆಆರ್‌ಪಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ನಾಗೇಂದ್ರಕುಮಾರ್‌ರನ್ನು ಅಸೆÜಂಬ್ಲಿಗೆ ಆಯ್ಕೆ ಮಾಡಿ ಕಳುಹಿಸಿದರೆ ಇನ್ನೂ ಎರಡು ವರ್ಷದೊಳಗೆ ಪಾವಗಡವನ್ನು ಸಮಸ್ಯೆ ಮುಕ್ತ ಕ್ಷೇತ್ರವನ್ನಾಗಿ ರೂಪಿಸಲು ಬದ್ಧರಾಗಿರುವುದಾಗಿ ಮಾಜಿ ಸಚಿವ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನರೆಡ್ಡಿ ಭರವಸೆ ವ್ಯಕ್ತಪಡಿಸಿದರು.
ಪಕ್ಷ ಸಂಘಟನೆ ಹಿನ್ನಲೆಯಲ್ಲಿ ಭಾನುವಾರ ಮಾಜಿ ಸಚಿವ ಜನಾರ್ದನ ರೆಡ್ಡಿ ಪಾವಗಡಕ್ಕೆ ಆಗಮಿಸಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನೂತನ ಕಚೇರಿ ಉದ್ಘಾಟನೆ ನೆರವೇರಿಸಿದ ಬಳಿಕ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ತುಮಕೂರು ಹಾಗೂ ಬಳ್ಳಾರಿ ರಸ್ತೆಯಲ್ಲಿ ನಾಗೇಂದ್ರಕುಮಾರ್ ಜತೆ ತೆರದ ವಾಹನದ ಮೂಲಕ ರೋಡ್ ಶೋ ನಲ್ಲಿ ತೆರಳಿ ಕನಕದಾಸ ಹಾಗೂ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿದ ನಂತರ ಗುರುಭವನದ ಬಳಿ ಸರ್ಕಾರಿ ಬಾಲಕಿಯರ ಪಾಠಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಕಾರ್ಯಕರ್ತರ ಸಮಾವೇಶದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಹಾಲಿ ಶಾಸಕ ರಮಣಪ್ಪ ಹಾಗೂ ಮಾಜಿ ಶಾಸಕ ರಾಯಪ್ಪರ ಸೇವೆ ಸಾಕು. ಹೊಸ ಅಭ್ಯರ್ಥಿಯತ್ತ ತಾಲೂಕಿನ ಜನತೆ ಮುಖ ಮಾಡಿದ್ದು ಕೆಆರ್‌ಪಿಪಿ ಕಡೆ ಅಲೆ ವ್ಯಾಪಕವಾಗಿದೆ. ನಿಮ್ಮ ಸಮ್ಮುಖದಲ್ಲಿಯೇ ನಾಗೇಂದ್ರಕುಮಾರ್‌ರನ್ನು ಕೆಆರ್‌ಪಿಪಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಅತ್ಯಧಿಕ ಮತಗಳಿಂದ ಗೆಲ್ಲಿಸಿಕೊಡುವಂತೆ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.
ಎಲ್‌ಕೆಜಿಯಿಂದ ಪಿಜಿವರೆಗೆ ತಮ್ಮ ಶೈಕ್ಷಣಿಕ ಪ್ರಗತಿಗೆ ಬೇಕಾದ ಹಣ ತಾಯಂದಿರ ಖಾತೆಗೆ ಜಮೆ ಮಾಡುವ ಉದ್ದೇಶಹೊಂದಿದ್ದು ಕೆಆರ್‌ಪಿಪಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ತಾಲೂಕಿನ ಜ್ವಲಂತ ಸಮಸ್ಯೆಗಳಿಗೆ ಬದ್ಧರಾಗಿದ್ದು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಗಾರ್ಮೆಂಟ್ಸ್, ಮಾಸಿಕ 30 ಸಾವಿರ ಆದಾಯ ಬರುವ ಫ್ಯಾಷನ್ ಡಿಸೈನ್ ಹೊಲಿಗೆ ತರಬೇತಿ, ಡಿಪ್ಲೊಮೋ ಇತರೆ ಉನ್ನತ ಶಿಕ್ಷಣ ತರಬೇತಿ ಕೇಂದ್ರ ಹಾಗೂ ನಿಡಗಲ್ ನಾಗಲಮಡಿಕೆ ಇತರೆ ಪ್ರದೇಶಗಳನ್ನು ಪ್ರವಾಸಿ ತಾಣಗಳನ್ನಾಗಿ ನಿರ್ಮಿಸಲು ಬದ್ಧರಾಗಿರುವುದಾಗಿ ಹೇಳಿದರು.
ಕೆಆರ್‌ಪಿಪಿ ಅಭ್ಯರ್ಥಿ ನಾಗೇಂದ್ರಕುಮಾರ್ ಮಾತನಾಡಿ, ಇದೊಂದು ಐತಿಹಾಸಿಕ ಕಾರ್ಯಕ್ರಮ. ಈ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಮಾವೇಶ ಅಡ್ಡಿಪಡಿಸಲು ಷಡ್ಯಂತರ ನಡೆಸಿ ಇಂದು ತಾಲೂಕಿನಲ್ಲಿ ವಿದ್ಯುತ್ ಸರಬರಾಜು ಕಟ್ ಮಾಡಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟುಜ್ವಲಂತ ಸಮಸ್ಯೆ ಇವೆ. ಬೆಂಗಳೂರಿಗೆ ಹತ್ತಿರದಲ್ಲಿದ್ರು, ಬರಪೀಡಿತ ಪ್ರದೇಶದಲ್ಲಿ ನಾವಿದ್ದೇವೆ. ಉನ್ನತ ವ್ಯಾಸಂಗಕ್ಕೆ ಇಲ್ಲಿ ಯಾವುದೇ ಕಾಲೇಜುಗಳಿಲ್ಲ. ಇನ್ನೂ ಕೆಲ ಗ್ರಾಮಗಳಲ್ಲಿ ವಿದ್ಯಾರ್ಥಿಗಳು ಮರದ ಕೆಳಗೆ ಪಾಠ ಕೇಳುವ ಸ್ಥಿತಿ ಎದುರಾಗಿದೆ. ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಜೀವನ ನಡೆಸಲು ಸಾಧ್ಯವಾಗದೇ ಆಂಧ್ರದ ಪೆನುಗೊಂಡ, ಮಡಕಶಿರಾ, ಬೆಂಗಳೂರು ಕಡೆಗೆ ವಲಸೆ ಹೋಗುತ್ತಿದ್ದಾರೆ. ಜಗತ್ತಿನ ಎರಡನೇ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದ್ದು ಸಂತೋಷ, ಆದರೆ ಸೋಲಾರ್ ಪಾರ್ಕ್ಗೆ ಭೂಮಿ ಕೊಟ್ಟಿದ್ದರೂ ರೈತ ಮತ್ತು ಕಾರ್ಮಿಕರ ಮಕ್ಕಳಿಗೆ ಉದ್ಯೋಗ ಕೊಡ್ತಿವಿ ಅಂತಾ ಹೇಳಿ ಮೋಸ ಮಾಡಿದ್ದಾರೆ. ನೀರಿನ ವಿಚಾರದಲ್ಲಿ ಸಾಕಷ್ಟುಅನ್ಯಾಯವಾಗಿದೆ. ಸುಸಜ್ಜಿತ ಆಸ್ಪತ್ರೆಗಳಿಲ್ಲದೇ ತುರ್ತು ಚಿಕಿತ್ಸೆಗೆ ಬೆಂಗಳೂರಿಗೆ ಹೋಗ್ಬೇಕು. ಸಾವು ನೋವು ಆಗುತ್ತಿವೆ. ಮೂಲಭೂತ ಸಮಸ್ಯೆಗಳನ್ನು ಇಲ್ಲಿ ಕೇಳುವ ಹಾಗೆ ಇಲ್ಲ. ತಾಲೂಕಿನಲ್ಲಿ ಬದಲಾವಣೆ ಗಾಳಿ ಬಿಸಿದೆ. ರಾಜಕೀಯ ಬದಲಾವಣೆಯನ್ನು ಜನ ಬಯಸಿದ್ದಾರೆ. ಮುಂಬರುವ ದಿನಗಳಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಗೆಲ್ಲಿಸಿಕೊಡ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಇದಕ್ಕೂ ಮುನ್ನ ಮಾಜಿ ಸಚಿವ ಜನಾರ್ದನರೆಡ್ಡಿ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ, ನಗರದ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದು ಈ ವೇಳೆ ರೆಡ್ಡಿ ಸಮಾಜದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ 10 ಸಾವಿರಕ್ಕಿಂತ ಹೆಚ್ಚು ಕಾರ್ಯಕರ್ತರು ಭಾಗಿಯಾಗಿ ನಾಗೇಂದ್ರಕುಮಾರ್‌ಗೆ ಸಾಥ್ ನೀಡಿದರು.
ಇದೇ ವೇಳೆ ಕೆಆರ್‌ಪಿಪಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಹೇಮಲತಾ, ಕುದುರ್‌ಸಾಬ್, ಪ್ರಕಾಶ್‌ರೆಡ್ಡಿ, ವಿರುಪಾಕ್ಷಗೌಡ, ಸ್ಥಳೀಯ ಹಿರಿಯ ಮುಖಂಡರಾದ ವಿ.ಸಿ.ಚನ್ನಕೇಶವರೆಡ್ಡಿ, ಎಸ್.ಸಿ.ಕರಿಯಣ್ಣ, ಎಸ್.ಹನುಮಂತರಾಯಪ್ಪ, ಕುರಲಪಲ್ಲಿ ಅಂಜಿನರೆಡ್ಡಿ, ಜಯರೆಡ್ಡಿ, ಕನಿಕಲಬಂಡೆ ಅಂಜಿನರೆಡ್ಡಿ, ನಲಿಗಾನಹಳ್ಳಿ ಮಂಜುನಾಥ್, ಕಿರಣ್‌ಕುಮಾರ್ ಇತರರು ಉಪಸ್ಥಿತರಿದ್ದರು.
ಉತ್ತರ ಕರ್ನಾಟಕ ಭಾಗದ 30 ವಿಧಾನಸಭಾ ಕ್ಷೇತ್ರಗಳಲ್ಲಿ ಕೆಆರ್‌ಪಿಪಿ ಸಕ್ರಿಯವಾಗಿದ್ದು ಪಾವಗಡ ಕ್ಷೇತ್ರವನ್ನೂ ಸಹ ಗಂಭೀರವಾಗಿ ಪರಿಗಣಿಸಲಾಗಿದೆ. ಕೆಆರ್‌ಪಿಪಿ ಅಧಿಕಾರಕ್ಕೆ ಬಂದರೆ ರೈತರ ಖಾತೆಗೆ 15 ಸಾವಿರ ನೇರಹಣ ಜಮೆ, ರೈತ ಕೇಂದ್ರಗಳ ಮೂಲಕ ಬಿತ್ತನೆ ಬೀಜ, ಗೊಬ್ಬರ ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಸೇರಿದಂತೆ ನಿರ್ಗತಿಕ ಹಾಗೂ ನಿರುದ್ಯೋಗಿಗಳಿಗೆ ಮಾಸಾಶನ ಹಾಗೂ ನದಿ ಜೋಡಣೆಗಳ ಮೂಲಕ ರೈತರ ನೀರಾವರಿಗೆ ನೀರು ಒದಗಿಸುವ ಕಾರ್ಯ ಕೈಗೊಳ್ಳಲಾಗುವುದು.
ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಂಸ್ಥಾಪಕ