ನಾನೂ ಒಬ್ಬ ಶಾಸಕ : ನಾನೇನೂ ಪಾಕಿಸ್ತಾನದಿಂದ ಬಂದಿದ್ದೇನಾ? ಸಿಪಿವೈ
ನಾನೂ ಒಬ್ಬ ಶಾಸಕ ಮೇಲ್ಮನೆ ಆಗಬಹುದು, ಕೆಳಮನೆ ಆಗಬಹುದು, ರಾಜ್ಯದ ಅಭಿವೃದ್ಧಿಗೆ ಇಂತಹವರಿಗೇ ಹಣಕೊಟ್ಟು ಅಭಿವೃದ್ಧಿ ಮಾಡಬೇಕೆಂಬುದೇನೂ ಇಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಪಿಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣ (ಅ.07): ನಾನೂ ಒಬ್ಬ ಶಾಸಕ ಮೇಲ್ಮನೆ ಆಗಬಹುದು, ಕೆಳಮನೆ ಆಗಬಹುದು, ರಾಜ್ಯದ ಅಭಿವೃದ್ಧಿಗೆ ಇಂತಹವರಿಗೇ ಹಣಕೊಟ್ಟು ಅಭಿವೃದ್ಧಿ ಮಾಡಬೇಕೆಂಬುದೇನೂ ಇಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಪಿಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಶ್ವರ್ , ಕುಮಾರಸ್ವಾಮಿ ಎತ್ತಿರುವ ಮೂಲಭೂತ ಪ್ರಶ್ನೆಯೇ ಅರ್ಥವಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಹಣಕಾಸು ಬಿಡುಗಡೆ ಮಾಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಚನ್ನಪಟ್ಟಣ (Chnnapattana) ಕ್ಷೇತ್ರದಲ್ಲಿ ಅತಿವೃಷ್ಠಿ ಆಗಿದೆ, ರಸ್ತೆಗಳು ಹಾಳಾಗಿವೆ. ಹೀಗಾಗಿ ಹಣ(Money) ಬಿಡುಗಡೆ ಮಾಡಿದ್ದಾರೆ. ನಾನೂ ಒಬ್ಬ ಶಾಸಕನಾಗಿ ಮನವಿ ಮಾಡಿದ್ದೆ. ಅನುದಾನ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ದೊಡ್ಡ ಅಪರಾಧ ಏನಿದೆ. ನಾನೇನೂ ಪಾಕಿಸ್ತಾನದಿಂದ ಬಂದಿದ್ದೇನಾ ಎಂದು ಪ್ರಶ್ನಿದರು.
ಪ್ರಬುದ್ಧತೆ ಇಲ್ಲ:
ನನ್ನ ಕಾರ್ಯಕ್ಷೇತ್ರ ಆಯ್ಕೆ ಮಾಡಿರುವುದು ಚನ್ನಪಟ್ಟಣ. ಹೀಗಾಗಿ ಚನ್ನಪಟ್ಟಣಕ್ಕೆ ಕೇಳಿಕೊಳ್ಳಬೇಕು. ಸಾವಿರಾರು ಕೋಟಿ ಹಣ ತಂದು ಅಭಿವೃದ್ಧಿ ಮಾಡಿದ್ದೇನೆ ಎಂದು ಕುಮಾರಸ್ವಾಮಿ (HD Kumaraswamy) ಹೇಳುತ್ತಾರೆ. 50 ಕೋಟಿ ಹಣ ತಂದು ಅಭಿವೃದ್ಧಿ ಮಾಡಿದ್ರೆ ತಪ್ಪೇನೂ. ಕುಮಾರಸ್ವಾಮಿ ಅವರೇ ಉಸ್ತುವಾರಿ ವಹಿಸಿ ನಿಭಾಯಿಸಿ ಎಂದು ಹೇಳಿದ್ದೆ ಕುಮಾರಸ್ವಾಮಿ ಸಿಎಂ ಆದಾಗ ಹಣ ಹಂಚಿಕೆ ಬಗ್ಗೆ ಸಮಾನತೆ ತೋರಿಸಬಹುದಿತ್ತಲ್ಲ. ಅವರಿಗೆ ಪ್ರಬುದ್ಧತೆ ಇಲ್ಲ ಎಂದು ಟೀಕಿಸಿದರು.
ಹತಾಶೆಯಿಂದ ಗಲಾಟೆ:
ಸಿಎಂ ಬೊಮ್ಮಾಯಿ ಬಗ್ಗೆ ಗೌರವ ಇದೆ. ಕುಮಾರಸ್ವಾಮಿಗೆ ರಾಜಕೀಯ ಹಿನ್ನಡೆ ಕಾಡುತ್ತಿದೆ. ಬೇರೆ ತಾಲೂಕಿನಿಂದ ಗೂಂಡಾಗಳನ್ನ ಕರೆಸಿ ಗಲಾಟೆ ಮಾಡುವುದು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್. ಚನ್ನಪಟ್ಟಣ ತಾಲೂಕಿನ ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಹತಾಶೆಯಿಂದ ಗಲಾಟೆಗೆ ಪ್ರಚೋದನೆ ಮಾಡಿದ್ದಾರೆ ಎಂದು ಆರೋಪಿಸಿದರು.
50 ಕೋಟಿ ಅನುದಾನ ನನ್ನ ಮನೆಗೆ ತೆಗೆದುಕೊಂಡು ಹೋಗುತ್ತಿದ್ದೇನಾ. ಕ್ಷೇತ್ರದ ಅಭಿವೃದ್ಧಿಗೆ ಹಾಕಿದ್ದೇನೆ. ಕುಮಾರಸ್ವಾಮಿ ಬಂದು ಅಭಿವೃದ್ಧಿ ಮಾಡುವುದನ್ನು ಬಿಟ್ಟು ಚೇಷ್ಟೇ ಮಾಡುತ್ತಿದ್ದಾರೆ. ಎಲ್ಲ ಎಂಎಲ್‌ಸಿಗಳಿಗೆ ಹಣ ಕೊಡಲಿ ನಾನೇನೂ ಬೇಡ ಎನ್ನುತ್ತೇನಾ. ರಾಮನಗರ ಕ್ಷೇತ್ರಕ್ಕೂ ನೂರಾರು ಕೋಟಿ ಕೊಟ್ಟಿದ್ದಾರೆ. ಕುಮಾರಸ್ವಾಮಿ ತಮ್ಮ ಅನುಕೂಲಕ್ಕಾಗಿ ಯಾವ ತರ ರಾಜಕಾರಣ ಬೇಕಾದರೂ ಮಾಡುತ್ತಾರೆ ಎಂದು ಟೀಕಿಸಿದರು.
ಬ್ಲಾಕ್ ಮೇಲ್ ತಂತ್ರ:
ಕುಮಾರಸ್ವಾಮಿ ಕಾಂಗ್ರೆಸ್ ಜೊತೆಗೂ ಮಾತುಕತೆ ಮಾಡುತ್ತಾರೆ, ಬಿಜೆಪಿ ಜೊತೆಗೂ ಮಾತುಕತೆ ಮಾಡುತ್ತಾರೆ. ನಾನು ಅನಿರ್ವಾಯ ಎಂದು ಬ್ಲಾಕ್ ಮೇಲ್ ತಂತ್ರ ಮಾಡುತ್ತಾರೆ. ಒಮ್ಮೆ ನಮ್ಮದು ಪ್ರಾದೇಶಿಕ ಪಕ್ಷ ಅಂತಾರೆ, ಹೈದರಾಬಾದ್‌ಗೆ ಹೋಗಿ ರಾಷ್ಟ್ರೀಯ ಪಕ್ಷದ ಜೊತೆ ನಮ್ಮದು ಸೇರಿಕೊಳ್ಳಬೇಕು ಎಂದು ಘೋಷÜಣೆ ಮಾಡುತ್ತಾರೆ. ಜೆಡಿಎಸ್ ವ್ಯವಹಾರಿಕ ಪಕ್ಷ ಅವರ ಮಾತಿಗೂ ಅವರ ನಡೆನುಡಿಗೂ ಅಜಗಜಾಂತರ ವ್ಯತ್ಯಾಸ ಇದೆ ಎಂದರು.
ಕುಮಾರಸ್ವಾಮಿ ಸರ್ವಜ್ಞ ಇದ್ದಂತೆ:
ಕುಮಾರಸ್ವಾಮಿ ಒಂತರಾ ಸರ್ವಜ್ಞ ಇದ್ದಂತೆ. ಕುಮಾರಸ್ವಾಮಿ ಪ್ರಪಂಚದ ಯಾವ ವ್ಯಕ್ತಿ ವಿರುದ್ಧ ಕೂಡ ಮಾತನಾಡುತ್ತಾರೆ. ಯಾವುದನ್ನು ಮಾತನಾಡಿ ಡೈಜಸ್ಟ್ ಮಾಡಿಕೊಳ್ಳುತ್ತಾರೆ. ಪ್ರಪಂಚದಲ್ಲಿ ಯಾವ ವ್ಯಕ್ತಿ ವಿರುದ್ಧ ಮಾತನಾಡಿಲ್ಲ ಕುಮಾರಸ್ವಾಮಿ ಹೇಳಿ, ಒಂದು ರೀತಿ ಮಹಾನ್ ಕವಿ ಇದ್ದಂಗೆ ಎಂದು ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ ವ್ಯಂಗ್ಯವಾಡಿದರು.
ಶಿಷ್ಟಾಚಾರ, ಸಿಎಂ ಕೇಳುವುದು, ಹೆದರಿಸುವುದು ಆಮೇಲೆ. ಕುಮಾರಸ್ವಾಮಿ ಗೊಡ್ಡು ಬೆದರಿಕೆಗೆ ಹೆದರಿವುದಿಲ್ಲ. ತಾಲೂಕಿನ ಘಟನೆಗೂ ಕುಮಾರಸ್ವಾಮಿ ಅವರನ್ನು ಚಲಿತಗೊಳಿಸಿದೆ. ಭಯ, ಆತಂಕ ಕಾಡುತ್ತಿದೆ. ಸದನ ಆರಂಭವಾದಾಗ ಬುಟ್ಟಿಯಲ್ಲಿ ಹಾವು ಇಟ್ಟುಕೊಂಡು ಹೆದರಿಸುತ್ತಾರೆ. ಅಲ್ಲ ಹಾಗೆಯೂ ಹೆದರಿಸುತ್ತಾರೆ. ಅವರ ವಿರುದ್ಧ ಯಾರು ಮಾತನಾಡಬಾರದು ಎಂದು ಹೆದರಿಸುತ್ತಾರೆ. ನಾಳೆ ಬಿಡುತ್ತೇನೆ, ನಾಳೆ ಬಿಡುತ್ತೇನೆ ಎಂದು ಕುಮಾರಸ್ವಾಮಿ ಬುರುಡೆ ಬಿಡುತ್ತಾರೆ ಎಂದು ಟೀಕೆ ಮಾಡಿದರು.
ಸದನದಲ್ಲಿ ಚರ್ಚೆ ಮಾಡಲಿ ಅವರ ಹಕ್ಕು ಚರ್ಚೆ ಮಾಡಿದ ತಕ್ಷಣ ಮರಣದಂಡನೆ ಆಗುತ್ತದೆಯಾ. ಅವರದೇ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಟ್ಟರೇ ಮಹಾ ಅಪರಾಧನಾ ಕುಮಾರಸ್ವಾಮಿ ಅವರ ಆತ್ಮಸಾಕ್ಷಿಯನ್ನ ಕೇಳಬೇಕು ಎಂದು ಯೋಗೇಶ್ವರ್ ಹೇಳಿದರು.