CPY vs HDK; ಚನ್ನಪಟ್ಟಣದಲ್ಲಿ ಮುಗಿಯದ ಗದ್ದಲ, ನಮಗೂ 50 ಕೋಟಿ ಕೊಡಿ ಎಂದ ಜೆಡಿಎಸ್

ಚನ್ನಪಟ್ಟಣದಲ್ಲಿ ಎಚ್ಡಿಕೆ ಮತ್ತು ಸಿಪಿವೈ ನಡುವಿನ ಘರ್ಷಣೆ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣ್ತಿಲ್ಲ. ನಮಗೂ ಐವತ್ತು ಕೋಟಿ ಅನುದಾನ ಕೊಡಿ ಎಂದು ಜೆಡಿಎಸ್  ಪರಿಷತ್ ಸದಸ್ಯರು ಮುಖ್ಯಮಂತ್ರಿ ಗಳಿಗೆ ಪತ್ರ ಬರೆಯಲು ನಿರ್ಧಾರ ಮಾಡಿದ್ದಾರೆ. 

jds-bjp-fight-continue-again-in-channapatna JDS demands 50 lakhs rupees gow

ವರದಿ : ಸುರೇಶ್ ಎ ಎಲ್, ಏಷ್ಯಾ ನೆಟ್ ಸುವರ್ಣ ನ್ಯೂಸ್.

ರಾಮನಗರ (ಅ.6): ಚನ್ನಪಟ್ಟಣದಲ್ಲಿ ಎಚ್ಡಿಕೆ ಮತ್ತು ಸಿಪಿವೈ ನಡುವಿನ ಘರ್ಷಣೆ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣ್ತಿಲ್ಲ. ಚನ್ನಪಟ್ಟಣದ ಹಾಲಿ ಶಾಸಕರೂ ಸಹಾ ಆಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಶಿಷ್ಟಾಚಾರದ ಪ್ರಕಾರ ಕ್ಷೇತ್ರದ ಸರ್ಕಾರಿ ಕಾರ್ಯಕ್ರಮ ಗಳಿಗೆ ಆಹ್ವಾನಿಸಬೇಕಿತ್ತು. ಆದರೆ ಕಲಾವಿದರ ಕೋಟಾದಲ್ಲಿ ಎಂ‌ಎಲ್‌ಸಿ ಆಗಿರುವ ಸಿ ಪಿ ಯೋಗೇಶ್ವರ್ ಗೆ ಐವತ್ತು ಕೋಟಿ ಅನುದಾನ ನೀಡಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನಾ ಸಮಾರಂಭ ಮಾಡುವ ಕಾರ್ಯಕ್ರಮ ಕ್ಕೆ ಬೇಕಂತಲೇ ಕುಮಾರಸ್ವಾಮಿ ಅವರನ್ನು ಕರೆಯದೇ ಕಡೆಗಣಿಸಲಾಗಿತ್ತು. ಕಲಾವಿದ ಕೋಟಾದಲ್ಲಿ ಆಯ್ಕೆ ಆಗಿರುವ ಯೋಗೇಶ್ವರ್ ಅವರಿಗೆ ಐವತ್ತು ಕೋಟಿ ಅನುದಾನ ಕೊಟ್ಟು, ಉಳಿದ ಎಂಎಲ್‌ಸಿ ಗಳನ್ನು ಕಡೆಗಣಿಸಿರುವುದು ರಾಜಕೀಯ ಉದ್ದೇಶ ಇದ್ದಂತಿದೆ. ಹಾಗಾಗಿ ನಮಗೂ ಐವತ್ತು ಕೋಟಿ ಅನುದಾನ ಕೊಡಿ ಎಂದು ಜೆಡಿಎಸ್  ಪರಿಷತ್ ಸದಸ್ಯರು ಮುಖ್ಯಮಂತ್ರಿ ಗಳಿಗೆ ಪತ್ರ ಬರೆಯಲು ನಿರ್ಧಾರ ಮಾಡಿದ್ದಾರೆ. 

ಈ ಮನವಿಗೆ ಸಿಎಂ ಸಕಾರಾತ್ಮಕ ವಾಗಿ ಸ್ಪಂದಿಸದೇ ಇದ್ದರೆ ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಧರಣಿ ಮಾಡಲೂ ಜೆಡಿಎಸ್ ಸದಸ್ಯರು ತೀರ್ಮಾನ ಮಾಡಿದ್ದಾರೆ. ಕೇವಲ ಜೆಡಿಎಸ್ ಪಕ್ಷದ ಪರಿಷತ್ ಸದಸ್ಯರಷ್ಟೇ ಅಲ್ಲದೇ ಇತರ ಪಕ್ಷದ ಸದಸ್ಯರ ಗಮನ ಸೆಳೆಯಲೂ ಜೆಡಿಎಸ್ ತೀರ್ಮಾನ ಮಾಡಿದೆ. ಈ ಮೂಲಕ ನಿಮ್ಮ ಕ್ಷೇತ್ರ ಗಳ ಅಭಿವೃದ್ಧಿ ಆಗಲಿದೆ.

ಹಾಗಾಗಿ ನೀವೂ ನಮಗೆ ಬೆಂಬಲ ಕೊಡಿ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಪರಿಷತ್ ಸದಸ್ಯರ ಮನವೊಲಿಕೆ ಮಾಡಲು ಜೆಡಿಎಸ್‌ ಸದಸ್ಯರು ನಿರ್ಧರಿಸಿದ್ದಾರೆ. ಮನವಿ ಗಾಗಲೀ,ಅಥವಾ ಧರಣಿಗಾಗಲೀ ಸರ್ಜಾರ ಸ್ಪಂದಿಸದೇ ಇದ್ದರೆ ಮುಂದೆ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಲು ನಿರ್ಧಾರ  ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಯೋಗೇಶ್ವರ್ ಮೇಲೇಕೆ FIR ದಾಖಲಿಸಿಲ್ಲ?: ನಿಖಿಲ್ ಕುಮಾರಸ್ವಾಮಿ

ಹಕ್ಕುಭಾದ್ಯತಾ ಸಮಿತಿಗೆ ವಹಿಸಲು ಒತ್ತಾಯ ಈ ನಡುವೆ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಈ ಪ್ರಕರಣವನ್ನು ಇನ್ನೂ ಮುಂದಿನ ಹಂತಕ್ಕೆ ಕೊಂಡೊಯ್ಯಲು  ಜೆಡಿಎಸ್ ತೀರ್ಮಾನಿಸಿದೆ. ಶಿಷ್ಟಾಚಾರ ದ ಪ್ರಕಾರ ಆಯಾ ಶಾಸಕರ ಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮ ಗಳಿಗೆ ಶಾಸಕರನ್ನು ಆಹ್ವಾನಿಸಬೇಕು. ಆದರೆ ಈ ಪ್ರಕರಣದಲ್ಲಿ ಕುಮಾರಸ್ವಾಮಿ ಅವರನ್ನು ಆಹ್ವಾನಿಸದೇ ಬೇಕಂತಲೇ ಕಡೆಗಣಿಸಲಾಗಿದೆ.

ಚನ್ನಪಟ್ಟಣದಲ್ಲಿ ಮತ್ತೆ ಮುಂದುವರೆದ ಜೆಡಿಎಸ್ - ಬಿಜೆಪಿ ಜಟಾಪಟಿ

ಹಾಗಾಗಿ ಜಿಲ್ಲಾಧಿಕಾರಿ, ಪೋಲೀಸ್ ವರಿಷ್ಟಾಧಿಕಾರಿ, ಹಾಗೂ ಇತರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ  ಜರುಗಿಸಲು ಕುಮಾರಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆದಿರುವ ಎಚ್ ಡಿ ಕುಮಾರಸ್ವಾಮಿ ಇದು ಶಾಸಕರ ಹಕ್ಕು ಚ್ಯುತಿ ಆಗಿರುವುದರಿಂದ ವಿಧಾನಸಭಾ ಹಕ್ಕುಭಾಧ್ಯತಾ ಸಮಿತಿ ಗೆ ಈ ಪ್ರಕರಣವನ್ನು ವಹಿಸಲು ಮನವಿ ಮಾಡಿದ್ದಾರೆ.  ಒಂದು ವೇಳೆ ಇದಕ್ಕೆ ಸೂಕ್ತವಾಗಿ ಸ್ಪಂದಿಸದೇ ಇದ್ದರೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ

Latest Videos
Follow Us:
Download App:
  • android
  • ios