ಶಿಕಾರಿಪುರ (ಸೆ.01):  ಹಲವು ವರ್ಷಗಳ ಹಿಂದೆ ತನ್ನ ಕರುವನ್ನು ರೋಡ್ ರೋಲರ್ ಹೊತ್ತೊಯ್ದ ಸಂಕಟದಲ್ಲಿರುವ ಮುಗ್ದ ಹಸು ಇಂದಿಗೂ ರಸ್ತೆಯಲ್ಲಿ ಜೆಸಿಬಿ,ರೋಲರ್ ಮತ್ತಿತರ ಭಾರೀ ಶಬ್ದದ ವಾಹನಗಳನ್ನು ಸಂಚರಿಸಲು ತೀವ್ರ ಪ್ರತಿರೋಧವನ್ನು ಒಡ್ಡುತ್ತಿದೆ. 

ಶಿಕಾರಿಪುರ ಪಟ್ಟಣದ ರಥಬೀದಿಯ ನಿವಾಸಿ ವಿ.ಹಿಂ.ಪ ಉಪಾಧ್ಯಕ್ಷ ಪ್ರಕಾಶ್  ಕುಟುಂಬಕ್ಕೆ ಗೋವುಗಳ ಜತೆ ಅತ್ಯಂತ ನಿಕಟ ಸಂಬಂಧ. ಮನೆಯಲ್ಲಿ ಪ್ರತಿ ಹಸುಗಳಿಗೆ ಕರುಗಳಿಗೆ ಪ್ರತ್ಯೇಕ ಹೆಸರಿಟ್ಟು ಅವುಗಳ ಜತೆ ನಿಕಟ ಬಾಂಧವ್ಯ ಇಟ್ಟುಕೊಂಡಿರುವ ಈ ಕುಟುಂಬಕ್ಕೆ ಸೇರಿದ ಹಸುವು ಎಲ್ಲರ ಗಮನ ಸೆಳೆಯುತ್ತಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಿವಾನಿ  ಎಂಬ ಹಿರಿಯ ಹಸು ತನ್ನ ಕರುಳ ಕುಡಿಯನ್ನು ಹೊತ್ತೊಯ್ದ ಸಂಕಟದಲ್ಲಿ ಇಂದಿಗೂ ರಸ್ತೆಯಲ್ಲಿ ಜೆಸಿಬಿ ರೋಲರ್ ಮತ್ತಿತರ ಭಾರೀ ಶಬ್ದದ ವಾಹನಕ್ಕೆ ತೀವ್ರ ಪ್ರತಿರೋಧವನ್ನು ಒಡ್ಡುತ್ತದೆ.  ಬಸ್, ಲಾರಿ, ಕಾರು ದ್ವಿಚಕ್ರ ಸಹಿತ ಯಾವುದೇ ವಾಹನಗಳಿಗೆ ತೊಂದರೆ ನೀಡದೆ ಕೇವಲ ಜೆಸಿಬಿ ರೋಲರ್ ಗಳಿಗೆ ಭಯಭೀತವಾಗಿ ಸ್ಥಳದಿಂದ ವಾಪಾಸು ತೆರಳುವಂತೆ ಅಡ್ಡಾದಿಡ್ಡಿಯಾಗಿ ಪ್ರತಿರೋಧಿಸುತ್ತಿದ್ದು ಕ್ಷಣ ಕಾಲ ನೋಡುಗರ ಮನಕಲುಕುತ್ತದೆ.  

ದೇಶೀ ಹಸುಗಳು ಅತ್ಯಂತ ಸೂಕ್ಷ್ಮ ಹಾಗೂ ಭಾವನಾತ್ಮಕ ಜೀವಿಯಾಗಿದ್ದು ಕಳೆದ 7 ವರ್ಷದ ಹಿಂದೆ ಹಸು ತನ್ನ ಕರು ಕಳೆದುಕೊಂಡಿದ್ದುದ್ದು, ಇಂದಿಗೂ ಭಾರೀ ವಾಹನಗಳಿಗೆ ಪ್ರತಿರೋಧ ಒಡ್ಡುತ್ತದೆ ಎನ್ನುತ್ತಾರೆ ಮಾಲಿಕ ಪ್ರಕಾಶ್.