ಬಾಳೆಹೊನ್ನೂರಿನ ಮಸೀದಿಕೆರೆ ಬಳಿ ಮುಖ್ಯರಸ್ತೆಯಲ್ಲಿ ಕಡಿದ ಸ್ಥಿತಿಯಲ್ಲಿದ್ದ ಹಸುವಿನ ತಲೆ ಪತ್ತೆಯಾಗಿದೆ. ಈ ಕೃತ್ಯವು ಗೋ ಕಳ್ಳರದ್ದಾಗಿರಬಹುದೆಂದು ಶಂಕಿಸಲಾಗಿದ್ದು, ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲು. ಈ ಘಟನೆಯು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದು, ಹಿಂದೂ ಸಂಘಟನೆಗಳು 

ಮಸೀದಿಕೆರೆಯ ಎಂಎಸ್‌ಐಲ್ ಮದ್ಯದ ಅಂಗಡಿ ಬಳಿ ಪತ್ತೆ ।ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

, ಬಾಳೆಹೊನ್ನೂರು (ಮೇ.14) ಮಸೀದಿಕೆರೆಯಿಂದ ರಂಭಾಪುರಿ ಪೀಠಕ್ಕೆ ತೆರಳುವ ಮುಖ್ಯರಸ್ತೆಯಲ್ಲಿ ಬುಧವಾರ ಕಡಿದ ಸ್ಥಿತಿಯಲ್ಲಿರುವ ಹಸುವಿನ ತಲೆ ಪತ್ತೆಯಾಗಿದೆ.

ಬುಧವಾರ ಬೆಳಿಗ್ಗೆ ಮಸೀದಿಕೆರೆಯ ಎಂಎಸ್‌ಐಲ್ ಮದ್ಯದ ಅಂಗಡಿ ಮುಂಭಾಗದಲ್ಲಿ ಬುಧವಾರ ಬೆಳಗ್ಗೆ ಕಡಿದ ಸ್ಥಿತಿಯಲ್ಲಿರುವ ಹಸುವಿನ ತಲೆ ಮುಖ್ಯರಸ್ತೆ ಮೇಲೆ ಬಿದ್ದಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಹಸುವಿನ ಕಡಿದ ತಲೆ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

ಪ್ರಕರಣ ದಾಖಲು

ಯಾರೋ ಕಿಡಿಗೇಡಿಗಳು ಮಾಂಸಕ್ಕಾಗಿ ಹಸು ಕಡಿದು ತಲೆಯನ್ನು ಮುಖ್ಯರಸ್ತೆಯಲ್ಲಿ ಎಸೆದು ಹೋಗಿರುವ ಶಂಕೆಯಿದೆ. ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚುವುದಾಗಿ ಪಿಎಸ್‌ಐ ಅಂಬರೀಷ್ ತಿಳಿಸಿದ್ದಾರೆ. ಘಟನೆ ಕುರಿತು ಬಾಳೆಹೊನ್ನೂರು ಠಾಣೆ ಯಲ್ಲಿ ಪಿಎಸ್‌ಐ ಅಂಬರೀಷ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿದೆ.

ಕಳೆದ 2ವಾರಗಳಲ್ಲಿ ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಹಲವು ಮನೆಗಳಲ್ಲಿ ಸಾಕಿದ್ದ ಗೋವುಗಳು ಮೇಯಲು ಬಿಟ್ಟ ಬಳಿಕ ಮನೆಗೆ ಬಾರದೆ ಇದ್ದು, ಗೋ ಕಳ್ಳರ ಕೃತ್ಯವೇ ಎಂದು ಮಾಲೀಕರು ಶಂಕಿಸಿದ್ದಾರೆ. \B\B

ಆರೋಪಿಗಳ ಪತ್ತೆಗೆ ಒತ್ತಾಯ:

ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಗೋ ಕಳ್ಳತನ ಮಿತಿ ಮೀರಿದ್ದು, ಪೊಲೀಸ್ ಇಲಾಖೆ ಕಣ್ತಪ್ಪಿಸಿ ಗೋ ಹಂತಕರು ನಿರಂತರವಾಗಿ ಗೋ ಸಾಗಾಟ, ಹತ್ಯೆಯಲ್ಲಿ ತೊಡಗಿದ್ದಾರೆ. ಮಸೀದಿಕೆರೆಯಲ್ಲಿ ಗೋವಿನ ತಲೆ ಪತ್ತೆ ಯಾಗಿರುವುದು ಉದ್ದೇಶಿತ ಕೃತ್ಯ ಎಂದು ಕಾಮಧೇನು ಗೋ ಶಾಲೆ ಮುಖ್ಯಸ್ಥ ನಾಗೇಶ್ ಆಂಗೀರಸ ಹೇಳಿದ್ದಾರೆ.

ಪೊಲೀಸರ ವಿರುದ್ಧ ಗಂಭೀರ ಆರೋಪ

ಅಕ್ರಮ ಗೋ ಸಾಗಾಟ, ಗೋ ಹತ್ಯೆ ಘಟನೆಗಳ ವಿರುದ್ಧ ನಿರಂತರ ಹೋರಾಟ ನಡೆಸುವ ಹಿಂದೂ ಸಂಘಟನೆಯ ಕಾರ್ಯ ಕರ್ತರನ್ನು ಬೆದರಿಸುವ ತಂತ್ರವಾಗಿ ಗೋವಿನ ತಲೆ ಕಡಿದು ಮುಖ್ಯರಸ್ತೆ ಬಳಿ ಇರಿಸಿರುವ ಶಂಕೆ ವ್ಯಕ್ತವಾಗಿದೆ. ಬಾಳೆ ಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಗೋ ಸಾಗಾಟ ಮಾಡುತ್ತಿರುವ ಕುರಿತು ಹಲವು ಸಾರ್ವಜನಿಕರು ದೂರಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಕ್ರಮವಹಿಸುತ್ತಿಲ್ಲ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಸಾರ್ವಜನಿಕರಿಗೆ ನಿರಂತರವಾಗಿ ಸಿಗುವ ಗೋ ಕಳ್ಳರು ಪೊಲೀಸರ ಕೈಗೆ ಏಕೆ ಸಿಗುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಮುಂದೊಂದು ದಿನ ಚಿಕ್ಕಮಗಳೂರು ಜಿಲ್ಲೆ ಬಾಂಗ್ಲಾ ದೇಶ, ಪಶ್ಚಿಮ ಬಂಗಾಳದಂತೆ ಮಾರ್ಪಾಡು ಆಗುವುದರಲ್ಲಿ ಸಂಶಯವಿಲ್ಲ. ಸಂಘಟನೆ ಕಾರ್ಯಕರ್ತರನ್ನು ಗುರಿಯಾಗಿಸಿ ಕೃತ್ಯ ನಡೆದಿದ್ದು ಕೂಡಲೇ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.