ಮಂಗಳೂರು(ಆ.06): ಕುಂದಾಪುರದ ಗುಬ್ಕೋಣು ಸಮೀಪದ ರಾಜಾಡಿಯ ಮನೆಯೊಂದರಲ್ಲಿ ಭೂಮಿಕಾ ಹೆಸರಿನ ಜೆರ್ಸಿ ಹಸುವೊಂದು ಅವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿ ಆಸುಪಾಸಿನ ಜನರ ಆಕರ್ಷಣೆಗೆ ಕಾರಣವಾಗಿದೆ.

ರಾಜಾಡಿಯ ಬೈಲ್‌ಮನೆ ಬಾಬು ಪೂಜಾರಿ ಮನೆಯ ಭೂಮಿಕಾ ಎನ್ನುವ ಜೆರ್ಸಿ ದನ ಏಕಕಾಲದಲ್ಲಿ ಎರಡು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ. ಸದ್ಯ ದನ ಹಾಗೂ ಎರಡು ಕರುಗಳು ಆರೋಗ್ಯವಾಗಿವೆ. ನಾಗರ ಪಂಚಮಿಯ ಮುನ್ನಾ ದಿನ ಮನೆ ಸೇರಿದ ಈ ಅವಳಿ ಕರುಗಳಿಗೆ ಗಂಗೆ-ಗೌರಿ ಎಂದು ನಾಮಕರಣ ಮಾಡಲಾಗಿದೆ.

ಭಾನುವಾರ ಬೆಳಿಗ್ಗೆ 10.30ರ ಸುಮಾರಿಗೆ ಭೂಮಿಕಾ ಹೆಸರಿನ ಹಸು ಬಾಬು ಪೂಜಾರಿ ಮನೆಯ ಕೊಟ್ಟಿಗೆಯಲ್ಲಿ ಹೆಣ್ಣು ಕರುವಿಗ ಜನ್ಮ ನೀಡಿತ್ತು. ಏನೂ ತೊಂದರೆಗಳಿಲ್ಲದೆ ಹೆರಿಗೆ ಆಯಿತಲ್ಲಾ ಎಂದು ಮನೆಯವರು ನಿಟ್ಟುಸಿರು ಬಿಡುವ ಹೊತ್ತಿಗೆ ಹಸು ಭೂಮಿಕಾ ಇನ್ನೊಂದು ಕರುವಿಗೆ ಜನ್ಮ ನೀಡಿ ಸೋಜಿಗಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರು: ಗೋ ಕಳ್ಳರಿಂದ ಹಸುಗಳ ರಕ್ಷಣೆ

ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡುವುದು ಅಪರೂಪದ ಘಟನೆ. ಹಸು ಅವಳಿ ಕರುಗಳಿಗೆ ಜನ್ಮ ನೀಡಿದರೂ ಅವುಗಳು ಆರೋಗ್ಯವಾಗಿರುವುದಿಲ್ಲ. ಒಂದು ವೇಳೆ ಎರಡು ಕರುಗಳು ಆರೋಗ್ಯವಾಗಿದ್ದರೂ ಜನ್ಮ ನೀಡಿದ ಹಸುವಿನ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ ಎನ್ನುವುದು ಪಶು ವೈದ್ಯರ ಮಾತು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

-ಶ್ರೀಕಾಂತ ಹೆಮ್ಮಾಡಿ