ಚಿಕ್ಕಮಗಳೂರು: ಗೋ ಕಳ್ಳರಿಂದ ಹಸುಗಳ ರಕ್ಷಣೆ
ಗೋಕಳ್ಳರಿಂದ ರಕ್ಷಿಸಿದ ಗೋವುಗಳನ್ನು ಚಿಕ್ಕಮಗಳೂರು ಪೊಲೀಸರು ದೇವಗೋಡು ಗ್ರಾಮದ ಕೆಮ್ಮಣ್ಣು ಕಾಮಧೇನು ಗೋ ಸೇವಾ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ. ಕಟುಕರಿಂದ ರಕ್ಷಿಸಲ್ಪಟ್ಟಗೋವುಗಳನ್ನು ತಮ್ಮ ಗೋ ಕೇಂದ್ರಕ್ಕೆ ಹಸ್ತಾಂತರಿಸಿ ಸಂರಕ್ಷಣೆಗೆ ಅನುವು ಮಾಡಿಕೊಟ್ಟಿರುವ ಪೊಲೀಸರ ಕ್ರಮ ಶ್ಲಾಘನೀಯವಾಗಿದೆ ಎಂದು ಗೋ ಸೇವಾ ಕೇಂದ್ರದ ವ್ಯವಸ್ಥಾಪಕ ನಾಗೇಶ್ ಆಂಗೀರಸ ಹೇಳಿದ್ದಾರೆ.
ಚಿಕ್ಕಮಗಳೂರು(ಜು.28): ಬಾಳೆಹೊನ್ನೂನ ಆಲ್ದೂರು ಪೊಲೀಸರು ಗೋ ಕಳ್ಳರಿಂದ ಸಂರಕ್ಷಿಸಿದ ನಾಲ್ಕು ಹಸುಗಳನ್ನು ಸಮೀಪದ ದೇವಗೋಡು ಗ್ರಾಮದ ಕೆಮ್ಮಣ್ಣು ಕಾಮಧೇನು ಗೋ ಸೇವಾ ಕೇಂದ್ರಕ್ಕೆ ಶನಿವಾರ ಹಸ್ತಾಂತರಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಗೋ ಸೇವಾ ಕೇಂದ್ರದ ವ್ಯವಸ್ಥಾಪಕ ನಾಗೇಶ್ ಆಂಗೀರಸ, ಕಟುಕರಿಂದ ರಕ್ಷಿಸಲ್ಪಟ್ಟಗೋವುಗಳನ್ನು ತಮ್ಮ ಗೋ ಕೇಂದ್ರಕ್ಕೆ ಹಸ್ತಾಂತರಿಸಿ ಸಂರಕ್ಷಣೆಗೆ ಅನುವು ಮಾಡಿಕೊಟ್ಟಿರುವ ಪೊಲೀಸರ ಕ್ರಮ ಶ್ಲಾಘನೀಯವಾಗಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ದಿನದಿಂದ ದಿನಕ್ಕೆ ಗೋ ಕಳ್ಳತನ, ಗೋ ಹತ್ಯೆಗಳು ಮಿತಿ ಮೀರಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದರು.
ಅಕ್ರಮ ಗೋ ಸಾಗಣೆಗೆ ಮಂಗಳೂರು ಮುಸ್ಲಿಮರ ವಿರೋಧ
ಕಠಿಣ ಕ್ರಮ ಅಗತ್ಯ:
ಆಲ್ದೂರಿನಲ್ಲಿ ಶುಕ್ರವಾರ ನಡೆದ ಗೋ ಸಾಗಣೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಇನ್ನೂ ಕಠಿಣವಾದ ಕೇಸು ದಾಖಲಿಸಿಕೊಳ್ಳಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಪ್ರಾಣಿಗಳ ಮೇಲಿನ ದೌರ್ಜನ್ಯದ ಕುರಿತಾಗಿ ದೂರು ದಾಖಲು ಮಾಡಿಕೊಳ್ಳಲಾಗಿದೆ. 1964ರ ಗೋ ಹತ್ಯಾ ನಿಷೇಧ ಕಾಯ್ದೆಯ ಕಲಂ ಬಳಸಿಲ್ಲ ಎಂದಿದ್ದಾರೆ.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಆರೋಪಿಗಳ ವಿರುದ್ಧ ಕಳ್ಳತನದ ಕೇಸ್ ಹಾಕಿಲ್ಲ ಹಾಗೂ ಸಾಗಣೆಗೆ ಬಳಸಿದ ವಾಹನ ಮಾಲೀಕರ ಹೆಸರು ನಮೂದಿಸಿಲ್ಲ ಹಾಗೂ ಯಾವುದೇ ಕ್ರಮಕೈಗೊಂಡಿಲ್ಲ. ಪೊಲೀಸ್ ಇಲಾಖೆ ಗೋ ಕಳ್ಳರ ಮೇಲೆ ಈ ರೀತಿ ಕಠಿಣವಲ್ಲದ ಕಾಯ್ದೆಗಳನ್ನು ಹಾಕುವುದರಿಂದಲೇ ಗೋ ಕಳ್ಳರ ಮಾಫಿಯಾ ಪೊಲೀಸರ ಮೇಲೆಯೇ ವಾಹನ ಹತ್ತಿಸಿ ಕೊಲೆ ಮಾಡುವ ಮಟ್ಟಕ್ಕೆ ಬರಲು ಕಾರಣವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.