ಬೆಂಗಳೂರು(ಜು.11): ಕೋವಿಡ್‌ ಕೇರ್‌ ಕೇಂದ್ರವಾದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಗೋಪಾಲಕೃಷ್ಣ ಎಂಬುವವರು ಸೌಲಭ್ಯಗಳ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿ ಸಚಿವ ಡಾ.ಕೆ.ಸುಧಾಕರ್‌ಗೆ ಪತ್ರ ಬರೆದಿದ್ದಾರೆ.

ಜೂ.23ರಂದು ಗೋಪಾಲಕೃಷ್ಣ ಮತ್ತು ಅವರ ಕುಟುಂಬ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್‌ 19 ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗಿ ಗುಣಮುಖರಾಗಿರುವ ಅವರು, ಪತ್ರದಲ್ಲಿ ಆಸ್ಪತ್ರೆಯಲ್ಲಿ ಒದಗಿಸಿರುವ ಸೌಲಭ್ಯಗಳು, ಅಲ್ಲಿನ ವೈದ್ಯರು, ನರ್ಸ್‌ ಹಾಗೂ ಇತರೆ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸುವ ಜತೆಗೆ ಸರ್ಕಾರಕ್ಕೂ ಅಭಿನಂದನೆ ಸಲ್ಲಿಸಿದ್ದಾರೆ.

ಬೆಂಗ್ಳೂರಲ್ಲಿ ಒಂದೇ ದಿನ 23 ಪೊಲೀಸರಿಗೆ ಕೊರೋನಾ ಸೋಂಕು..!

ನಾವು ಮೊದಲಿಗೆ ಎರಡು ದಿನದ ಮಟ್ಟಿಗೆ ಜನರಲ್‌ ವಾರ್ಡ್‌ನಲ್ಲಿ ದಾಖಲಾಗಿದ್ದೆವು. ಅಲ್ಲಿನ ವೈದ್ಯರು ರೋಗಿಗಳ ಆರೋಗ್ಯ ವಿಚಾರಿಸುವುದರೊಂದಿಗೆ ಸಮಯಕ್ಕೆ ಸರಿಯಾಗಿ ಔಷಧಿ, ಊಟ ನೀಡುತ್ತಿದ್ದರು.

ಸಿಬ್ಬಂದಿ ವಾರ್ಡ್‌ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಎಲ್ಲವನ್ನೂ ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ. ಬೆಳಗಿನ ಉಪಹಾರ ಕಾಫಿ, ಊಟ, ಗಂಜಿ ಎಲ್ಲವೂ ಸರಿಯಾದ ಸಮಯಕ್ಕೆ ಒದಗಿಸಿದ್ದಾರೆ.

ಇತರೆ ರೋಗಿಗಳನ್ನು ವಿಚಾರಿಸಿದಾಗಲೂ ಅವರು ಆಸ್ಪತ್ರೆ ಹಾಗೂ ಸಿಬ್ಬಂದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಜಕಿಸ್ತಾನದಲ್ಲಿ ಕೊರೋನಾಗಿಂತ ಗಂಭೀರ ಸೋಂಕು ಪತ್ತೆ: ಚೀನಾ

ನಂತರ ನಾವು ವಿಶೇಷ ವಾರ್ಡ್‌ಗೆ ಹೋದೆವು. ಅಲ್ಲಿ ನಮಗೆ ಯಾವುದೇ ತಾರತಮ್ಯವಿಲ್ಲದೆ ಒಂದೇ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಿದ್ದರು. ನಮ್ಮ ಮನೆಗಳಿಗಿಂತ ಉತ್ತಮ ಆಹಾರವನ್ನು ಆಸ್ಪತ್ರೆಯಲ್ಲೇ ಕೊಡುತ್ತಿದ್ದರು ಎಂದಿರುವ ಅವರು, ಆಸ್ಪತ್ರೆಯ ಎಲ್ಲಾ ವೈದ್ಯರು, ನರ್ಸ್‌ಗಳು ಹಾಗೂ ಇತರೆ ಎಲ್ಲಾ ಸಿಬ್ಬಂದಿಗೆ ನಮಸ್ಕಾರವನ್ನು ತಿಳಿಸಿದ್ದಾರೆ.