ಉಡುಪಿ(ಜೂ.14): ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಜಿಲ್ಲೆಯಲ್ಲಿ ಮಾ.25ರಂದು, ದುಬೈ ಪ್ರವಾಸಕ್ಕೆ ಹೋಗಿ ಹಿಂದಕ್ಕೆ ಬಂದಿದ್ದ ಮಣಿಪಾಲದ ಲ್ಯಾಬ್‌ ಟೆಕ್ನಿಶಿಯನ್‌ ಒಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗುವುದರೊಂದಿಗೆ, ಜಿಲ್ಲೆಯಲ್ಲಿ ಕೊರೋನಾ ಸಂಕಟ ಆರಂಭವಾಯಿತು. ಇದೀಗ ಸರಿಯಾಗಿ 80 ದಿನಗಳಲ್ಲಿ, ಶನಿವಾರ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 1006 ಆಗಿದೆ.

ಬೇಸರದ ವಿಷಯ ಎಂದರೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರಲ್ಲಿ 975ಕ್ಕೂ ಹೆಚ್ಚು ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಅವರು ಹೊಟ್ಟೆಪಾಡಿಗಾಗಿ ಜಿಲ್ಲೆಯಿಂದ ಮುಂಬೈಗೆ ಹೋಗಿದ್ದು, ಲಾಕ್‌ ಡೌನ್‌ ಸಂದರ್ಭದಲ್ಲಿ ಊರಿಗೆ ಬಂದಿದ್ದರು, ಬರುವಾರ ಕೊರೋನಾವನ್ನು ಜೊತೆಗೆ ತಂದಿದ್ದರು. ಉಳಿದರಲ್ಲಿ ದುಬೈ, ತೆಲಂಗಾಣ, ಕೇರಳ, ತಮಿಳುನಾಡು, ಗುಜರಾತ್‌ ಇತ್ಯಾದಿ ಕಡೆಗಳಿಂದ ಬಂದವರಾಗಿದ್ದಾರೆ.

ದಿನ ಭವಿಷ್ಯ: ಈ ರಾಶಿಯವರಿಗೆ ಇದು ಭಾರೀ ಅದೃಷ್ಟದ ದಿನ!

ಮಾಚ್‌ರ್‍ 29ರಂದು ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಯಿತು. ನಂತರ ಕೆಲವು ದಿನ ಜಿಲ್ಲೆಯಲ್ಲಿ ಯಾವುದೇ ಸೋಂಕಿರಲಿಲ್ಲ, ಆದ್ದರಿಂದ ಏ.27ರಂದು ಜಿಲ್ಲೆಯನ್ನು ಗ್ರೀನ್‌ ಝೋನ್‌ ಎಂದು ಘೋಷಿಸಲಾಯಿತು, ಜಿಲ್ಲೆಯ ಜನರು ಮತ್ತು ಜಿಲ್ಲಾಡಳಿತ ಅಂದು ದೊಡ್ಡದೊಂದು ಸಮಾಧಾನದ ನಿಟ್ಟುಸಿರು ಬಿಟ್ಟಿತ್ತು.

47 ದಿನಗಳ ಗ್ಯಾಪ್‌ !

ಆದರೆ ಮೂರು ಪಾಸಿಟಿವ್‌ ಪ್ರಕರಣಗಳ ನಂತರ ಸತತ 47 ದಿನಗಳ ಕಾಲ ಒಂದೇ ಒಂದು ಸೋಂಕು ಇಲ್ಲದೇ ಹಾಯಾಗಿದ್ದ ಜಿಲ್ಲೆಯಲ್ಲಿ ಮೇ 15ರಂದು ಮತ್ತೆ 5 ಪ್ರಕರಣಗಳು ಪತ್ತೆಯಾದವು.

ಕರ್ನಾಟಕದಲ್ಲಿ ಶನಿವಾರ ತ್ರಿಶತಕ ಬಾರಿಸಿದ ಕೊರೋನಾ: ಇಲ್ಲಿದೆ ಜಿಲ್ಲಾವಾರು ಮಾಹಿತಿ

ಆರಂಭದಲ್ಲಿ ದಿನಕ್ಕೆ ಏಳೆಂಟು ಪ್ರಕರಣಗಳಷ್ಟೇ ಪತ್ತೆಯಾಗುತಿದ್ದರೆ, ಜೂ.1ಕ್ಕೆ ಜಿಲ್ಲೆಯಲ್ಲಿ ಕೊರೋನಾ ಸ್ಪೋಟವಾಗಿ 73 ಪ್ರಕರಣಗಳು ಪತ್ತೆಯಾದವು. ಅಲ್ಲಿಂದ ಜಿಲ್ಲೆಯಲ್ಲಿ ಕೊರೋನಾ ತಾಂಡವ ಆರಂಭವಾಯಿತು. ಜೂ. 2ರಂದು 150, ಜೂ.3ರಂದು 62, ಜೂ.4ರಂದು 92 ಪ್ರಕರಣಗಳು ಪತ್ತೆಯಾಯಿತು. ಜಿಲ್ಲೆಯಲ್ಲಿ ಅತೀಹೆಚ್ಚು ಜೂ.5ರಂದು 204 ಪ್ರಕರಣಗಳು ಒಂದೇದಿನ ಪತ್ತೆಯಾಗಿ ಜಿಲ್ಲೆಯನ್ನು ನಡುಗಿಸಿಬಿಟ್ಟಿತು. ಮರದಿನ ಮತ್ತೆ 121 ಪ್ರಕರಣಗಳು ಪತ್ತೆಯಾದವು. ಅಲ್ಲಿಗೆ ಮುಂಬೈಯಿಂದ ಬಂದಿದ್ದ 9000ಕ್ಕೂ ಅಧಿಕ ಮಂದಿಯ ಪರೀಕ್ಷೆ ಪೂರ್ಣಗೊಂಡಿತ್ತು.

ಮತ್ತೆ ಏರಲಿದೆ ಗ್ರಾಫ್‌?

ನಂತರ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿ, ಜೂ.9 ಮತ್ತು 10ರಂದು ಪ್ರಕರಣಗಳ ಸಂಖ್ಯೆ ಶೂನ್ಯಕ್ಕಿಳಿಯಿತು. ಜಿಲ್ಲೆಯ ಜನರು ಮತ್ತೆ ಸಮಾಧಾನಪಟ್ಟುಕೊಂಡರು. ಆದರೆ, ಕೊರೋನಾದ ಕಪಿಮುಷ್ಟಿಯಲ್ಲಿ ನಲುಗುತ್ತಿರುವ ಮುಂಬೈಯಿಂದ ಮತ್ತೆ ನಮ್ಮವರು ಸಾಲುಗಟ್ಟಿಉಡುಪಿಗೆ ಮರಳುತಿದ್ದಾರೆ. ಸಹಜವಾಗಿಯೇ ಅವರೊಂದಿಗೆ ಕೊರೋನಾ ಕೂಡ ಬರುತ್ತಿದೆ. ಜಿಲ್ಲೆಯಲ್ಲಿ ಮತ್ತೆ ಕೊರೋನಾ ಕೇಕೆ ಆರಂಭವಾಗಿದೆ. ಜೂ.11ರಂದು 22, ಜೂ.12ರಂದು 22 ಮತ್ತು ಜೂ.13ರಂದು 15 ಪ್ರಕರಣಗಳು ಪತ್ತೆಯಾಗಿವೆ. ಈ ಗ್ರಾಫ್‌ ಮತ್ತೇ ಮೇಲೆರುವುದು ಖಚಿತವಾಗಿದೆ.

ಓರ್ವ ಸೋಂಕಿತ ನಿಧನ, 11 ಆತ್ಮಹತ್ಯೆ

ಜಿಲ್ಲೆಯಲ್ಲಿ ಮೇ 16ರಂದು ಮುಂಬೈಯಿಂದ ಬಂದಿದ್ದ ಸೋಂಕಿತ ಪುರುಷರೊಬ್ಬರು ಹೃದಯಾಘಾತದಿಂದ ನಿಧನರಾದರು. ಈ ನಡುವೆ ಕೊರೋನಾ ಲಾಕ್‌ಡೌನ್‌ನಿಂದ ಮದ್ಯ ಸಿಗದೇ ಸುಮಾರು 7 ಮಂದಿ ಆತ್ಮಹತ್ಯೆ ಮಾಡಿಕೊಂಡರೆ, 4 ಮಂದಿ ಮದ್ಯ ಕುಡಿದೇ ಸತ್ತರು. ಲಾಕ್‌ಡೌನ್‌ ನಿಂದ ಉದ್ಯೋಗ, ಸಂಪಾದನೆ ಇಲ್ಲದೇ ಆರ್ಥಿಕ ಸಂಕಷ್ಟಕ್ಕೊಳಗಾಗಿ 4 ಮಂದಿ ಆತ್ಮಹತ್ಯೆ ಮಾಡಿಕೊಂಡರು.

11 ಜನ ಪೊಲೀಸರು, 3 ಸ್ಥಳೀಯರು

ರಾಜ್ಯದಲ್ಲಿ ಅತೀಹೆಚ್ಚು ಉಡುಪಿ ಜಿಲ್ಲೆಯ 11 ಮಂದಿ ಪೊಲೀಸರು ಕೊರೋನಾ ಸೋಂಕಿತರಾಗಿದ್ದಾರೆ. ಅವರೆಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಆಸ್ಪತ್ರೆಯ ಲ್ಯಾಬ್‌ ಟೆಕ್ನಿಶಿಯನ್, ಅವರ ಮಗು ಮತ್ತವರ ಮನೆಯ 71 ವರ್ಷ ವಯೋವೃದ್ಧರಿಗೂ ಕೊರೋನಾ ಸೋಂಕಿದೆ. ಅವರನ್ನು ಬಿಟ್ಟರೆ ಉಳಿದವರೆಲ್ಲರೂ ಹೊರಗಿನಿಂದ ಬಂದವರಾಗಿದ್ದಾರೆ.