Asianet Suvarna News Asianet Suvarna News

ಕೋವಿಡ್ ವಾರ್ ರೂಂ ಮುಖ್ಯಸ್ಥ ಮುನೀಶ್ ಮೌದ್ಗಿಗ್ ಕೊಟ್ಟ ಎಚ್ಚರಿಕೆ!

ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಕೊರೋನಾ ವಾರ್ ರೂಂ ಮುಖ್ಯಸ್ಥ ಮುನೀಶ್ ಮೌದ್ಗಿಗ್/ ಟ್ರಾಕಿಂಗ್ ಅಂಡ್ ಟ್ರೇಸಿಂಗ್ ಆ್ಯಪ್ ನ ರೂವಾರಿ ಮುನೀಶ್ ಮೌದ್ಗಿಲ್/ ಜನರ ಸಹಕಾರ ಇಲ್ಲದೇ ಕೊರೋನಾ ನಿಯಂತ್ರಣ ಸಾಧ್ಯವಿಲ್ಲ

Covid war room head munish moudgil chit chat with Suvarna News
Author
Bengaluru, First Published Jun 21, 2020, 10:33 PM IST

ಬೆಂಗಳೂರು(ಜೂ.  21)  ಕೋವಿಡ್ ವಾರ್ ರೂಂ ಮುಖ್ಯಸ್ಥ ಮುನೀಶ್ ಮೌದ್ಗಿಗ್ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ್ದಾರೆ.  ಟ್ರಾಕಿಂಗ್ ಅಂಡ್ ಟ್ರೇಸಿಂಗ್ ಆ್ಯಪ್ ನ ರೂವಾರಿ ಮುನೀಶ್ ಮೌದ್ಗಿಲ್ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿಗೆ ಟ್ರಾಕಿಂಗ್ ಟ್ರೇಸಿಂಗ್ ಆ್ಯಪ್ ಬಗ್ಗೆ ಕೇಂದ್ರ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿತ್ತು.  ಶಂಕಿತರು ಹಾಗೂ ಸೋಂಕಿತರ ಪತ್ತೆ ಹಚ್ಚಲು ಆ್ಯಪ್ ಬಳಸಿಕೊಳ್ಳಲಾಗಿತ್ತು.  ಆ್ಯಪ್ ನ್ನ 10 ಸಾವಿರ ವಾರಿಯರ್ಸ್ ಬಳಸಿ ಲಕ್ಷಕ್ಕೂ ಅಧಿಕ ಶಂಕಿತರು ಹಾಗೂ ಸೋಂಕಿತರ ಪತ್ತೆಗೆ ಸಹಕಾರಿಯಾಗಿದೆ ಎಂದು ಮುನೀಶ್ ತಿಳಿಸಿದ್ದಾರೆ.

ರಾಜ್ಯದ ಕೊರೋನಾ ಕಂಟ್ರೋಲ್ ಹಿಂದಿರುವ ಶಕ್ತಿ ಇವರೇ

ಕಂಟಾಕ್ಟ್  ಟ್ರೇಸಿಂಗ್ ನ್ನ ಯಶಸ್ವಿ ಮಾಡಲಾಗಿದ್ದಿ ಇಡೀ ತಂಡಕ್ಕೆ ಯಶಸ್ಸು ಸಲ್ಲಬೇಕು.  ರಜೆ, ವಾರಂತ್ಯ, ಹಬ್ಬ ಹರಿದಿನಗಲ್ಲಿ ಮನೆಗೆ ತೆರಳದೇ ಕೆಲಸ ಮಾಡಲು ಕುಟುಂಬ ಸಪೋರ್ಟ್ ಮಾಡ್ತಿದೆ.  ಜನರಿಗಾಗಿ ಮಾಡುವುದೇ‌ ನನಗೆ ತೃಪ್ತಿ.  ಲಾಕ್ ಡೌನ್ ತೆಗೆದ ನಂತರದ ದಿನಗಳು ತುಂಬ ಗಂಭೀರವಾಗಿವೆ ಎಂದು ವಸ್ತುಸ್ಥಿತಿ ವಿವರಿಸಿದರು.

ಅನ್ ಲಾಕ್ ಆದ ನಂತರ ಈಗ ತುಂಬಾ ಚಾಲೆಂಜ್ ಬಂದಿದೆ, ತುಂಬಾ ಸಿರಿಯಸ್ ಆಗಿ ಕೆಲಸ‌ಮಾಡಬೇಕಿದೆ.  ಜನರು ಮುಂಜಾಗ್ರತೆ ತೆಗೆದುಕೊಂಡರೇ ಶೇ.70-80 ರಷ್ಟು ಸೊಂಕು ತಗುಲುವುದಿಲ್ಲ.  ಜನರು ಸಹಕರಿಸಿದ್ರೆ ಒಂದು ತಿಂಗಳಲ್ಲಿ ಕೊರೋನಾ ಕಂಟ್ರೋಲ್ ಗೆ ಬರಬಹುದು ಇಲ್ಲವಾದಲ್ಲಿನ ಕಷ್ಟ ಎಂದರು.

ಕೋವಿಡ್- 19 ವಿಚಾರದಲ್ಲಿ ಬೆಂಗಳೂರಿನ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಅಲ್ ಲಾಕ್ ಆದ ನಂತರ ಒಂದು ಲಕ್ಷ ಜನಕ್ಕೂ ಹೆಚ್ಚು  ಬೇರೆಕಡೆಯಿಂದ ಬಂದಿದ್ದಾರೆ.  ಹೋಂ ಕ್ವಾರಂಟೇನ್ ಸರಿಯಾಗಿ ಪಾಲನೆ‌ ಮಾಡದೇ ಇದ್ರೆ ಸೋಂಕು ಹೆಚ್ಚಾಗುತ್ತೆ. ಶೇ.70 ರಷ್ಟು ಸೋಂಕು ತಡೆಗಟ್ಟಲು ಜನರ ಜವಬ್ದಾರಿ ಇದೆ.  ಮಾಸ್ಕ್, ಸೋಷಿಯಲ್ ಡಿಸ್ಕೆನ್ಸ್ ಮೆಂಟೇನ್ ಮಾಡಿದ್ರೆ ಮಾತ್ರ ಕಂಟ್ರೋಲ್ ಸಾಧ್ಯ ಎಂದರು.

ಅಗತ್ಯಬಿದ್ದರೆ ಸಹಾಯವಾಣಿಗೆ ಕರೆ ಮಾಡಿ ಟೆಲಿ ಮೆಡಿಸಿನ್ ತೆಗೆದುಕೊಳ್ಳಬೇಕು ಕೂಡಲೇ ಆಸ್ಪತ್ರೆಗೆ ತೆರಳಿ ಟೆಸ್ಟ್ ಮಾಡಿಕೊಳ್ಳಬೇಕು.  50 ವರ್ಷ ಮೇಲ್ಪಟ್ಟವರು, ಇತರೆ ಖಾಯಿಲೆ ಇದ್ದವರು ಆಸ್ಪತ್ರೆಗೆ ಬಂದು ಚೆಕ್ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು. 

 

Follow Us:
Download App:
  • android
  • ios