Asianet Suvarna News Asianet Suvarna News

ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಲಸಿಕೆಗೆ ಭಾರೀ ಹಾಹಾಕಾರ

  • ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಲಸಿಕೆಗೆ ಭಾರೀ ಹಾಹಾಕಾರ ಉಂಟಾಗಿದೆ. 
  • ಕೋವ್ಯಾಕ್ಸಿನ್, ಕೋವಿಶೀಲ್ಡ್ಗೆ ಬೇಡಿಗೆ ತೀವ್ರ ಪ್ರಮಾಣದಲ್ಲಿ ಏರಿದೆ. 
Covid Vaccine shortages in Bengaluru snr
Author
Bengaluru, First Published Jul 5, 2021, 1:17 PM IST

ಬೆಂಗಳೂರು (05):  ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಲಸಿಕೆಗೆ ಭಾರೀ ಹಾಹಾಕಾರ ಉಂಟಾಗಿದೆ. ಕೋವ್ಯಾಕ್ಸಿನ್, ಕೋವಿಶೀಲ್ಡ್ಗೆ ಬೇಡಿಗೆ ತೀವ್ರ ಪ್ರಮಾಣದಲ್ಲಿ ಏರಿದೆ. 

ಬೆಂಗಳೂರಿನಲ್ಲಿ ಲಸಿಕೆ ಶಾರ್ಟೇಜ್ ಬೆನ್ನಲ್ಲೇ ರಷ್ಯಾದ ಲಸಿಕೆಗೆ ಬೇಡಿಕೆ ಭಾರೀ ಏರಿದೆ. ಸ್ಪುಟ್ನಿಕ್ ಲಸಿಕೆಗೆ ರಾಜಧಾನಿಯಲ್ಲಿ ಸಖತ್ ರೆಸ್ಪಾನ್ಸ್ ಕಂಡು ಬಂದಿದ್ದು, ರಾಜ್ಯದಲ್ಲಿ ಕೇವಲ ಬೆಂಗಳೂರಿನಲ್ಲಿ ಮಾತ್ರ ಸ್ಪುಟ್ನಿಕ್ ಲಸಿಕೆ ಲಭ್ಯವಾಗುತ್ತಿದೆ. 

ಲಸಿಕಾ ಸಾಮರ್ಥ್ಯ ಹೆಚ್ಚಿಸಲು ಕೇಂದ್ರದ ಮಹತ್ವದ ಹೆಜ್ಜೆ; ಮತ್ತೆರಡು ವ್ಯಾಕ್ಸಿನ್ ಟೆಸ್ಟ್ ಲ್ಯಾಬ್! ..

ಶಾಲಾ ಕ್ಯಾಂಪಸ್ಗೂ ಸ್ಪುಟ್ನಿಕ್  ಲಸಿಕೆ ಕಾಲಿಟ್ಟಿದ್ದು, ಕೋಲ್ಡ್ ಸ್ಟೋರೇಜ್ ಸವಾಲಿನ ಮಧ್ಯೆ ಸ್ಪುಟ್ನಿಕ್ ಲಸಿಕೆ ನೀಡಲಾಗುತ್ತಿದೆ. ಶಿಕ್ಷಕರು, ಸಿಬ್ಬಂದಿಗಳು ಹಾಗೂ ಪೋಷಕರು ಶಾಲಾ - ಕಾಲೇಜು ಕ್ಯಾಂಪಸ್ ಗಳಲ್ಲಿ ಸ್ಪುಟ್ನಿಕ್ ಲಸಿಕೆ ಪಡೆಯುತ್ತಿದ್ದಾರೆ.

ಲಸಿಕೆ ಪಡೆದರೂ ಡೆಲ್ಟಾ ಡೇಂಜರ್‌; ರಾಜ್ಯದಲ್ಲೂ ರೂಪಾಂತರಿಯಿಂದ ಅವಾಂತರ..!

ಜೂನ್ ಎರಡನೇ ವಾರದಿಂದ ಸ್ಪುಟ್ನಿಕ್ ಲಸಿಕೆಗೆ ಡಿಮ್ಯಾಂಡ್ ಶುರುವಾಗಿದೆ.  ಡೆಲ್ಟಾ ವೈರಸ್ ವಿರುದ್ಧ ಸ್ಪುಟ್ನಿಕ್ ಪರಿಣಾಮಕಾರಿ ಎಂಬ ವಿಚಾರ ಹಿನ್ನೆಲೆ ಸ್ಪುಟ್ನಿಕ್ ನತ್ತ ಜನರ ಒಲವು ಹೆಚ್ಚಾಗಿದೆ. 

ಮೊದಲ ಡೋಸ್ ಪಡೆದ ನಂತರ ಎರಡನೇ ಡೋಸ್ ಗೆ ಕೇವಲ 25 ದಿನಗಳು ಮಾತ್ರ ಕಾಯುವಿಕೆ ಇದ್ದು, 28 ದಿನಗಳೊಳಗೆ ಎರಡು ಡೋಸ್ ಕಂಪ್ಲೀಟ್ ಆಗಲಿದೆ. ಹೀಗಾಗಿ ವಿದೇಶಿ ಲಸಿಕೆಯತ್ತ ಜನರ ಒಲವು ಹೆಚ್ಚಾಗಿದೆ.  

Follow Us:
Download App:
  • android
  • ios