ಹೊಸಪೇಟೆಯಲ್ಲಿ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಎರಡು ಲಸಿಕೆಗಳು ಖಾಲಿ| ಆಸ್ಪತ್ರೆಯ ವ್ಯಾಕ್ಸಿನೇಷನ್‌ ರೂಮ್‌ಗಳನ್ನು ಮುಚ್ಚಿದ ಸಿಬ್ಬಂದಿ| ಶುಕ್ರವಾರ ವ್ಯಾಕ್ಸಿನ್‌ ನಗರಕ್ಕೆ ಬರಲಿದೆ ಎಂದು ಟಿಎಚ್‌ಒ ಮಾಹಿತಿ| 

ಹೊಸಪೇಟೆ(ಏ.21): ಒಂದು ಕಡೆ ಕೊರೋನಾ ಮಹಾಮಾರಿ ಅಬ್ಬರ ಶುರುವಾಗಿದ್ದರೆ, ನಗರದಲ್ಲಿ ಮಹಾಮಾರಿಗೆ ಅಂಕುಶ ಹಾಕಲು ತಯಾರಿಸಿರುವ ವ್ಯಾಕ್ಸಿನ್‌ ಖಾಲಿಯಾಗಿವೆ.

ನಗರದಲ್ಲಿ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಎರಡು ಲಸಿಕೆಗಳು ಖಾಲಿಯಾಗಿವೆ. ಮೊದಲ ಡೋಸ್‌ ಪಡೆದು ಎರಡನೇ ಡೋಸ್‌ ಪಡೆಯಲು ಬಂದವರಿಗೆ ಲಸಿಕೆ ಖಾಲಿಯಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ವಾಪಾಸ್‌ ಕಳುಹಿಸುತ್ತಿದ್ದಾರೆ.

ಖಾಸಗಿ ಕಂಪನಿಯೊಂದರ 20 ನೌಕರರಿಗೆ ಕೊರೋನಾ ಸೋಂಕು

ನಗರದ ಆಸ್ಪತ್ರೆಯ ವ್ಯಾಕ್ಸಿನೇಷನ್‌ ರೂಮ್‌ಗಳನ್ನು ಮುಚ್ಚಲಾಗಿದೆ. ಮೊದಲ ಡೋಸ್‌ ಪಡೆದವರು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಾಸ್‌ ಆಗುತ್ತಿದ್ದಾರೆ. ಇಂಡೆಂಟ್‌ ಕಳಿಸಲಾಗಿದೆ. ಶುಕ್ರವಾರ ವ್ಯಾಕ್ಸಿನ್‌ ನಗರಕ್ಕೆ ಬರಲಿದೆ ಎಂದು ಹೇಳುತ್ತಾರೆ ಟಿಎಚ್‌ಒ ಡಾ. ಭಾಸ್ಕರ್‌.