ಹೊಸಪೇಟೆಯ ಖಾಸಗಿ ಕಂಪನಿಯೊಂದರ  ನೌಕರರಿಗೆ ಕೊರೋನಾ ಸೋಂಕು ತಗುಲಿದೆ. ಇಲ್ಲಿನ 20 ನೌಕರರಿಗೆ ಸೋಂಕು ಕಾಣಿಸಿಕೊಂಡಿದೆ. 

ಹೊಸಪೇಟೆ (ಏ.19) : ಹೊಸಪೇಟೆಯಲ್ಲಿ ಮತ್ತೆ ಕೊರೋನಾ ಅಬ್ಬರ ಶುರುವಾಗಿದ್ದು, ರೈಲ್ವೆ ಇಲಾಖೆಯ ರೈಲ್ವೆ ಟ್ರ್ಯಾಕ್‌ಗೆ ವಿದ್ಯುತ್‌ ಪೂರೈಸುವ ಖಾಸಗಿ ಕಂಪನಿಯ 20 ನೌಕರರು ಸೋಂಕಿಗೆ ಒಳಗಾಗಿದ್ದಾರೆ. ತಾಲೂಕಿನ ಪಾಪಿನಾಯಕನಹಳ್ಳಿಯ ರೈಲು ನಿಲ್ದಾಣದ ಬಳಿ ವಿದ್ಯುತ್‌ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ 20 ನೌಕರರು ಸೋಂಕಿಗೊಳಗಾಗಿದ್ದಾರೆ. ಸಂಡೂರು ತಾಲೂಕಿನ ವಡ್ಡು ಗ್ರಾಮದ ಕ್ವಾರ್ಟರ್ಸ್‌ನಲ್ಲಿ ಇವರು ವಾಸ ಮಾಡುತ್ತಿದ್ದರು.

ವೆಂಕಟಾಪುರದಲ್ಲಿ ಆತಂಕ: ತಾಲೂಕಿನ ವೆಂಕಟಾಪುರದಲ್ಲಿ 12 ಮಂದಿಗೆ ಕೊರೋನಾ ದೃಢಪಟ್ಟಿದ್ದು, ತೀವ್ರ ಆತಂಕ ಮೂಡಿಸಿದೆ. ಹೋಮ್‌ ಐಸೋಲೇಷನ್‌ ಮತ್ತು ಹೋಮ್‌ ಕ್ವಾರಂಟೈನ್‌ಗೆ ಜನ ಒಪ್ಪುತ್ತಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಾವು ಗ್ರಾಮದಲ್ಲಿರುವುದಿಲ್ಲ ಎಂಬುದು ಸೋಂಕಿತರ ಆಗ್ರಹ.

ಕೊರೋನಾ ಕಾರಣ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ; ಕೈಗಾರಿಕೆಗೆ ಆಮ್ಲಜನಕ ಪೂರೈಕೆ ನಿಷೇಧಿಸಿದ ಸರ್ಕಾರ! ..

‘ಇವರನ್ನು ಹಿಡಿದಿಟ್ಟುಕೊಳ್ಳುವುದೇ ದೊಡ್ಡ ಸವಾಲಿನ ಕೆಲಸ. ಕೊರೋನಾ ನಿಯಂತ್ರಣ ಮಾಡಲು ಸೋಂಕಿತರ ಸಹಕಾರವೂ ಮುಖ್ಯ. ಹೋಮ್‌ ಐಸೋಲೇಷನ್‌, ಹೋಮ್‌ ಕ್ವಾರಂಟೈನ್‌ಗೆ ಆದ್ಯತೆ ನೀಡಲಾಗುತ್ತದೆ. ಒಂದು ವೇಳೆ ನಿಯಮ ಮೀರಿದರೆ ಕ್ರಮಕ್ಕೆ ಮುಂದಾಗುತ್ತೇವೆ’ ಎಂದು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಹೇಳಿದ್ದಾರೆ.