ಕೇರಳದಿಂದ ಬಂದವರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ

ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ಕೋವಿಡ್‌ ಟೆಸ್ಟ್‌ ಕಡ್ಡಾಯ| ಕೊಡಗು- ಕೇರಳ ಗಡಿಭಾಗದಲ್ಲಿ ಕೋವಿಡ್‌ ಪರೀಕ್ಷಾ ವರದಿಯನ್ನು ತೋರಿಸಬೇಕು| ಈಗಾಗಲೇ ಗಡಿ ಭಾಗದಲ್ಲಿ ನಡೆಯುತ್ತಿರುವ ಹೆಚ್ಚಿನ ತಪಾಸಣೆ| ಟೆಸ್ಟ್‌ ಮಾಡಿಸದೆ ಉಳಿದುಕೊಂಡವರ ಬಗ್ಗೆ ಮಾಹಿತಿ ದೊರೆತರೆ ಕಠಿಣ ಕಾನೂನು ಕ್ರಮ| 

Covid Test Mandatory for Those Who Came From Kerala to Kodagu grg

ಮಡಿಕೇರಿ(ಫೆ.19): ಕೇರಳ ರಾಜ್ಯದಿಂದ ಫೆ.2ರಿಂದ ಈವರೆಗೆ ಕೊಡಗು ಜಿಲ್ಲೆಗೆ ಆಗಮಿಸಿರುವ ನಾಗರಿಕರು, ಕಾರ್ಮಿಕರು, ವಿದ್ಯಾರ್ಥಿಗಳು, ಶಾಲಾ ಕಾಲೇಜು ಮತ್ತು ವಸತಿ ಶಾಲೆಗಳಲ್ಲಿರುವವರು ಹಾಗೂ ಇತರರು ಕಡ್ಡಾಯವಾಗಿ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ತೆರಳಿ, ಗಂಟಲು ದ್ರವ ಹಾಗೂ ಮೂಗಿನ ದ್ರವಗಳ ಮಾದರಿಯನ್ನು ನೀಡಿ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ. ಮೋಹನ್‌ ತಿಳಿಸಿದ್ದಾರೆ.

ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ಕೋವಿಡ್‌ ಟೆಸ್ಟ್‌ ಕಡ್ಡಾಯವಾಗಿದೆ. ಕೊಡಗು- ಕೇರಳ ಗಡಿಭಾಗದಲ್ಲಿ ಕೋವಿಡ್‌ ಪರೀಕ್ಷಾ ವರದಿಯನ್ನು ತೋರಿಸಬೇಕು. ಈಗಾಗಲೇ ಗಡಿ ಭಾಗದಲ್ಲಿ ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ. ಟೆಸ್ಟ್‌ ಮಾಡಿಸದೆ ಉಳಿದುಕೊಂಡವರ ಬಗ್ಗೆ ಮಾಹಿತಿ ದೊರೆತರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೊಡಗು ಆರೋಗ್ಯಾಧಿಕಾರಿ ಡಾ. ಮೋಹನ್‌ ಎಚ್ಚರಿಕೆ ನೀಡಿದ್ದಾರೆ. 

ಶ್ವಾಸಕೋಶದ ಮೇಲೆ ಕೊರೋನಾ ಎಫೆಕ್ಟ್ ಪತ್ತೆಗೆ IISC ತಂತ್ರಾಂಶ

ಹೋಟೆಲ್‌, ಹೋಂಸ್ಟೇ, ರೆಸಾರ್ಟ್‌ ಮಾಲೀಕರು ಕೂಡಾ ಎಚ್ಚರ ವಹಿಸಬೇಕು. ಸರ್ಕಾರದ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ತಾಲೂಕು ಆರೋಗ್ಯಾಧಿಕಾರಿಗಳ ತಂಡ ರಚಿಸಲಾಗಿದೆ. ಕೇರಳದಿಂದ ಬರುವವರ ಮೇಲೆ ಇವರು ನಿಗಾ ಇಡಲಿದ್ದಾರೆ. ಹೋಟೆಲ್‌, ರೆಸಾರ್ಟ್‌ ಮೇಲೆ ನಿಗಾ ಇಡಲು ಪಿಡಿಒಗಳ ತಂಡ ರಚಿಸಲಾಗಿದೆ ಎಂದು ಮೋಹನ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios