ಕೊರೋನಾ ಅಟ್ಟಹಾಸ : ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ
- ದೇಶಾದ್ಯಂತ ಮಹಾಮಾರಿ ಕೊರೋನ ವೈರಸ್ ಅಟ್ಟಹಾಸ
- ಉಡುಪಿಯ ಮುಚ್ಲಕೋಡು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ
- ಕೊರೋನ ಮುಕ್ತವಾಗಲಿ ಎಂದು 1008 ಎಳನೀರಿನ ಅಭಿಷೇಕ
ಉಡುಪಿ(ಮೇ.09): ದೇಶಾದ್ಯಂತ ಮಹಾಮಾರಿ ಕೊರೋನ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು ಈ ನಿಟ್ಟಿನಲ್ಲಿ ಉಡುಪಿಯ ಮುಚ್ಲಕೋಡು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.
ಉಡುಪಿಯ ಕುಕ್ಕಿಕಟ್ಟೆ ಸಮೀಪ ಇರುವ ಮಚ್ಲಕೋಡು ಸುಬ್ರಹ್ಮಣ್ಯ ದೇಗುಲದಲ್ಲಿಂದು ದೇವರಿಗೆ ರಾಷ್ಟ್ರದ ಯೋಗಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಭಾರತ ಕೊರೋನ ಮುಕ್ತವಾಗಲಿ ಎಂದು 1008 ಎಳನೀರಿನ ಅಭಿಷೇಕ ಮಾಡಲಾಗಿದೆ.
18 ರಿಂದ 44 ವರ್ಷದೊಳಗಿನ ಎಲ್ಲರಿಗೂ ಕೊರೊನಾ ಲಸಿಕೆ ..
ಪೇಜಾವರ, ಪಲಿಮಾರು, ಪುತ್ತಿಗೆ ಸ್ವಾಮೀಜಿಗಳು ಈ ವಿಶೇಷ ಪೂಜೆಯಲ್ಲಿ ಭಾಗಿಯಾಗಿ ದೇಶದ ಹಿತಕ್ಕಾಗಿ ಪ್ರಾರ್ಥಿಸಿದರು.
ಇನ್ನು ವಿಶೇಷ ಪೂಜಾ ಕಾರ್ಯಕ್ಕೆ ಗೂಗಲ್ ಪೇ ಮೂಲಕ ಸಾರ್ವಜನಿಕರು ದೇಣಿಗೆ ನೀಡಿದ್ದು, ಸಂಗ್ರಹವಾದ ಹಣದಲ್ಲಿ ಪ್ರಧಾನಿ ಮೋದಿ ಹೆಸರಲ್ಲಿ ಗೋಗ್ರಾಸ ಸೇವೆ ನೆರವೇರಿಸಲಾಯಿತು.
'ಉಡುಪಿಯಲ್ಲಿ ಯಾವುದೇ ಕೊರತೆ ಇಲ್ಲ : ಆದ್ರೆ ಗಂಭೀರವಾಗಿ ಬಂದ್ರೆ ಚಿಕಿತ್ಸೆ ಕೊಡಲ್ಲ
ಇದೇ ವೇಳೆ ಪ್ರಧಾನಿ ಮೋದಿ ಹೆಸರಲ್ಲಿ ದೇವಾಲಯದ ವತಿಯಿಂದ ಒಂದು ಹಸು ದತ್ತು ಪಡೆಯಲಾಯಿತು. ಅಲ್ಲದೇ ಉಡುಪಿಯಲ್ಲಿ ಆಂಬುಲೆನ್ಸ್ ಸೇವೆ ನೀಡುತ್ತಿರುವ ಇಬ್ಬರಿಗೆ ಐದು ಸಾವಿರ ಸಹಾಯಧನ ನೀಡಲಾಯಿತು. ಅಲ್ಲದೇ ಇಬ್ಬರು ವಿದ್ಯಾರ್ಥಿಗಳ ಶಿಕ್ಷಣಕ್ಕೂ ನೆರವು ನೀಡಲಾಯಿತು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona