'ಉಡುಪಿಯಲ್ಲಿ ಯಾವುದೇ ಕೊರತೆ ಇಲ್ಲ : ಆದ್ರೆ ಗಂಭೀರವಾಗಿ ಬಂದ್ರೆ ಚಿಕಿತ್ಸೆ ಕೊಡಲ್ಲ'

  • ಉಡುಪಿ ಜಿಲ್ಲೆಯಲ್ಲಿಲ್ಲ ಆಕ್ಸಿಜನ್ ಬೆಡ್‌ಗಳ ಕೊರತೆ 
  • ಮನೆಯಿಂದ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವವರಿಗೆ ವೆಂಟಿಲೇಟರ್ ಕೊಡಲ್ಲ
  • ಜಿಲ್ಲೆ ಜನರಿಗೆ ಉಡುಪಿ ಜಿಲ್ಲಾಧಿಕಾರಿ ಖಡಕ್ ಸೂಚನೆ 
Udupi DC Strict Warning To People Negligence On Covid snr

ಉಡುಪಿ (ಮೇ.09): ಉಡುಪಿ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್‌ಗಳಿಗೆ ಕೊರತೆ ಇಲ್ಲ.   ಸೂಕ್ತ ವೆಂಟಿಲೇಟರ್ ಚಿಕಿತ್ಸೆ ಕೊಡಲು ನಮ್ಮಲ್ಲಿ ಅವಕಾಶ ಇದೆ ಎಂದ ಜಿಲ್ಲಾಧಿಕಾರಿ ಜಿ. ಜಗದೀಶ್ ಜಿಲ್ಲೆಯ ಜನತೆಗೆ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.

ಉಡುಪಿಯಲ್ಲಿಂದು ಮಾತನಾಡಿದ ಜಿಲ್ಲಾಧಿಕಾರಿ ಜಗದೀಶ್ ಆಕ್ಸಿಜನ್ ಬೆಡ್ ಗಳು ಹೆಚ್ಚೇ ಇದೆ. ಆಮ್ಲಜನಕ ಪೂರೈಕೆ ಮಾಡಲು ಸರ್ಕಾರ ಬದ್ಧವಿದೆ.  ವೆಂಟಿಲೇಟರ್ ಚಿಕಿತ್ಸೆ ಕೊಡಲು ನಮ್ಮಲ್ಲಿ ಅವಕಾಶ ಇದೆ. ಆದರೆ ಮನೆಯಿಂದ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವವರಿಗೆ ವೆಂಟಿಲೇಟರ್ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೊರೋನಾ ವಾರಿಯರ್ಸ್ ಆಗಿ ಫೀಲ್ಡಿಗಿಳಿದ ಉಡುಪಿ ಆಟೋ ಚಾಲಕರು

ಇದು ಉಡುಪಿ ಜಿಲ್ಲಾಡಳಿತದ ಸ್ಪಷ್ಟ ಸೂಚನೆ. ಎಷ್ಟು ವೆಂಟಿಲೇಟರ್ ತಯಾರು ಮಾಡಿದರೂ ಸಾಕಾಗದ ಸ್ಥಿತಿ ಇದೆ. ಜನರ ನಿರ್ಲಕ್ಷಕ್ಕೆ ನಾವು ಜವಾಬ್ದಾರರಲ್ಲ.  ರೋಗ ಲಕ್ಷಣ ಕಂಡು ಬಂದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಿ. ಆರಂಭದಲ್ಲಿ ಆಕ್ಸಿಜನ್ ಕೊಟ್ಟು ಜೀವ ಉಳಿಸುವ ಅವಕಾಶ ಇದೆ.  ಗಂಭೀರ ಆದಲ್ಲಿ ಐಸಿಯು, ವೆಂಟಿಲೇಟರ್ ಗೆ ಶಿಫ್ಟ್ ಮಾಡುತ್ತೇವೆ.  ನನಗೆ ವೆಂಟಿಲೇಟರ್ ಕೊಡುತ್ತೀರಾ ಎಂದು ಮನೆಯಿಂದ ಫೋನ್ ಮಾಡಬೇಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು. 

ಜನತೆಗೆ ಈ ನಿರ್ಲಕ್ಷದ ಬುದ್ಧಿ ಹೋಗಬೇಕು.  ಬುದ್ಧಿವಂತರ ಜಿಲ್ಲೆಯವರು ಬುದ್ಧಿವಂತರಂತೆ ವರ್ತಿಸಿ ಎಂದು ಉಡುಪಿ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.  

ಜನರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ.  ಮನೆಯಲ್ಲೇ ಕುಳಿತು ನೇರ ಐಸಿಯುಗೆ ಬಂದರೆ ಚಿಕಿತ್ಸೆ ಸಾಧ್ಯವಿಲ್ಲ. ನಿಮ್ಮ ಜೀವದ ಜೊತೆ ನೀವೇ ಆಟವಾಡುತ್ತಿದ್ದೀರಿ ಎಂದು ಕೊರೋನಾ ನಿರ್ಲಕ್ಷಿಸುವವರ ವಿರುದ್ಧ ಉಡುಪಿ ಡಿಸಿ ಗರಂ ಆಗಿದ್ದಾರೆ. 

ಕೇಂದ್ರದಿಂದ ವ್ಯಾಕ್ಸಿನ್ ಪೂರೈಕೆ, ರಾಜ್ಯದಲ್ಲಿ ಮೇ.10ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ...

ಉಡುಪಿಯಲ್ಲಿ 950ಕ್ಕೂ ಹೆಚ್ಚು ಆಕ್ಸಿಜನ್ ಬೆಡ್ ಖಾಲಿಯಿದೆ.  ಉಡುಪಿಯಲ್ಲಿ ಮಹಾಮಾರಿ ಕೊರೊನಾ ಸೋಂಕು ವಿಪರೀತ ಹೆಚ್ಚಳವಾಗಿದೆ. ಜ್ವರ ಶೀತ ಕೆಮ್ಮು ನೆಗಡಿಯನ್ನ ಜನ ನಿರ್ಲಕ್ಷ ಮಾಡುತ್ತಿದ್ದಾರೆ.  ಜನ ಆಕ್ಸಿಜನ್ ಬೆಡ್  ಇಲ್ಲ ಎಂದು ಪ್ಯಾನಿಕ್ ಆಗದಿರಿ.  ಆಸ್ಪತ್ರೆಯ ಅಗತ್ಯ ಇಲ್ಲದವರು ಬೆಡ್ ಹುಡುಕುತ್ತಿದ್ದಾರೆ. ಈ ರೀತಿ ಪ್ಯಾನಿಕ್ ಆಗುವುದು ಬಿಟ್ಟು ಧೈರ್ಯದಿಂದ ಇರುವಂತೆ ಸಲಹೆ ನೀಡಿದರು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್.

ಉಡುಪಿ ಜಿಲ್ಲೆಯ  ಕೋರೋನಾ ಅಂಕಿಸಂಖ್ಯೆ

ಇಂದಿನ ಕೇಸು 1047

ಈವರೆಗೆ ಕೇಸು 38916

ಇಂದಿನ ಸಾವು 10

ಈವರೆಗೆ ಸಾವು 228

ಇಂದಿನ ಚೇತರಿಕೆ 328

ಈವರೆಗೆ ಚೇತರಿಕೆ 32,730

ಸಕ್ರಿಯ 5958

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios