ಗವಿಮಠದಿಂದ ಕೋವಿಡ್ ಸೋಂಕಿತ ಮಹಿಳೆ ಅಂತ್ಯ ಸಂಸ್ಕಾರ
* ಮೃತ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಮುಂದಾಗದ ಸಂಬಂಧಿಕರು, ಜಿಲ್ಲಾಡಳಿತ, ನಗರಸಭೆ
* ಗವಿ ಶ್ರೀಗಳ ಆದೇಶದಂತೆ ಅಂತ್ಯಕ್ರಿಯೆ
* ಅಂತ್ಯ ಸಂಸ್ಕಾರದ ಖರ್ಚು ಭರಿಸಿದ ಗವಿಶ್ರೀಗಳು
ಕೊಪ್ಪಳ(ಮೇ.14): ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರವನ್ನು ಗವಿಮಠದಿಂದಲೇ ನೆರವೇರಿಸಲಾಯಗಿದೆ.
ಗುರುವಾರ ಕೊರೋನಾ ಸೋಂಕಿನಿಂದ ಕೊಪ್ಪಳದ ಮೂರನೇ ವಾರ್ಡಿನ 48 ವರ್ಷದ ಅಂಜಿನಮ್ಮ ತಮ್ಮ ಮನೆಯಲ್ಲೇ ಮೃತಪಟ್ಟಿದ್ದರು. ಅಂತ್ಯ ಸಂಸ್ಕಾರಕ್ಕೆ ಸಂಬಂಧಿಕರು, ಜಿಲ್ಲಾಡಳಿತ, ನಗರಸಭೆ ಮುಂದಾಗದ ಹಿನ್ನೆಲೆಯಲ್ಲಿ ಗವಿಮಠದಿಂದಲೇ ಮಾಡಲಾಗಿದೆ.
"
ಕೊಪ್ಪಳ: ಕೋವಿಡ್ ಆಸ್ಪತ್ರೆ ಕಸಗೂಡಿಸಿದ ಗವಿಸಿದ್ಧೇಶ್ವರ ಶ್ರೀ
ಗವಿ ಶ್ರೀಗಳ ಆದೇಶದಂತೆ ಗವಿ ಮಠದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಅಂತ್ಯ ಸಂಸ್ಕಾರದ ಖರ್ಚನ್ನು ಗವಿಶ್ರೀಗಳು ಭರಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona