ಇಂದಿರಾ ಕ್ಯಾಂಟೀನ್‌ಗೆ ಗ್ರಾಹಕರ ದಂಡು : ಹೊಸ ಮಾರ್ಗಸೂಚಿ
ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸೋಂಕಿತರು ಸಾವನ್ನಪ್ಪುತ್ತಿರುವವರ ಸಂಖ್ಯೆ ಅಧಿಕವಾಗುತ್ತಿರುವ ಬೆನ್ನಲ್ಲೇ ಕಠಿಣ ಕ್ರಮ ಜಾರಿ ಮಾಡಲಾಗಿದೆ. ಇದೇ ವೇಳೆ ಇಂದಿರಾ ಕ್ಯಾಂಟೀನ್‌ಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಚಾಮರಾಜನಗರ (ಏ.23): ಲಾಕ್‌ಡೌನ್ ವೇಳೆ ಹಸಿದವರ ಪಾಲಿನ ಅನ್ನಪೂರ್ಣೆಯಾಗಿದ್ದ ಇಂದಿರಾ ಕ್ಯಾಂಟೀನ್‌ನಲ್ಲಿ ಈಗ ಮತ್ತೆ ಗ್ರಾಹಕರ ದಂಡೇ ಹರಿದು ಬರುತ್ತಿದೆ, ಈ ನಿಟ್ಟಿನಲ್ಲಿ ಗುರುವಾರ ಹೊಸ ಮಾರ್ಗಸೂಚಿಯೊಂದು ಪ್ರಕಟವಾಗಿದೆ.
ಹೋಟೆಲ್, ದರ್ಶಿನಿಗಳಲ್ಲಿ ಕೇವಲ ಪಾರ್ಸೆಲ್‌ಗಷ್ಟೇ ಅವಕಾಶ ಕಲ್ಪಿಸಿರುವುದರಿಂದ ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು, ಆಟೋ- ಲಾರಿ ಚಾಲಕರು, ಅಂಗಡಿ-ಮಳಿಗೆಗಳಲ್ಲಿ ಕೆಲಸ ಮಾಡುವವರು ತಿಂಡಿ-ಊಟಕ್ಕಾಗಿ ಇಂದಿರಾ ಕ್ಯಾಂಟಿನ್ ಆಶ್ರಯಿಸುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಪೌರಾಡಳಿತ ನಿರ್ದೇಶನಾಲಯ ಹಲವು ಮಾರ್ಗಸೂಚಿಗಳನ್ನು ನೀಡಿದೆ.
ಸಿಎಂ ಜೊತೆ ಪಿಎಂ ಚರ್ಚೆ: ಆಕ್ಸಿಜನ್, ಲಸಿಕೆಗಾಗಿ ಬಿಎಸ್‌ವೈ ಮನವಿ
ಏನೇನು:
1. ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿ, ಸ್ಯಾನಿಟೈಸರ್ ನೀಡುವುದು
2. ಕ್ಯಾಂಟೀನ್ ನೌಕರರು ಕಡ್ಡಾಯ ಮಾಸ್ಕ್, ಗ್ಲೌಸ್ ಧರಿಸುವುದು
3. ಕ್ಯಾಂಟಿನ್ ಕನಿಷ್ಠ 6 ಬಾರಿ ಸ್ವಚ್ಛಗೊಳಿಸುವುದು
4. ನಿರಂತರ ಸಾರ್ವಜನಿಕ ಸಂಪರ್ಕಕ್ಕೆ ಒಳಪಡುವ ವಸ್ತು(ಕಿಟಕಿ, ನಳ, ಬಾಗಿಲು) ಸ್ವಚ್ಛಗೊಳಿಸುವುದು.
ಬೆಂಗಳೂರು ಲಾಕ್‌ಡೌನ್: ಇಂದಿರಾ ಕ್ಯಾಂಟೀನ್ ಊಟ, ತಿಂಡಿಗೆ ಹೆಚ್ಚಿನ ಬೇಡಿಕೆ
5. ತರಕಾರಿ, ಸೊಪ್ಪು, ಪಾತ್ರೆ ಬಿಸಿನೀರಿನಲ್ಲಿ ತೊಳೆಯುವುದು
6. ಸಾಧ್ಯವಾದಷ್ಟುಆಹಾರ ಪ್ಯಾಕೆಟ್‌ನಲ್ಲಿ ವಿತರಿಸುವುದು
7. ಸಾಮಾಜಿಕ ಅಂತರ, ಜನಸಂದಣಿ ಸೇರದಂತೆ ಪೊಲೀಸ್ ಸಹಕಾರ ಪಡೆಯಬೇಕೆಂದು ಆದೇಶಿಸಿದ್ದಾರೆ.