ನವದೆಹಲಿ (ಸೆ.09):  ರಾಜ್ಯದ ನಾಲ್ಕು ಜಿಲ್ಲೆಗಳಾದ ಕೊಪ್ಪಳ, ಮೈಸೂರು, ದಾವಣಗೆರೆ ಮತ್ತು ಬಳ್ಳಾರಿಗಳನ್ನು ಕೊರೋನಾ ಹಾಟ್‌ಸ್ಪಾಟ್‌ ಜಿಲ್ಲೆಗಳೆಂದು ಗುರುತಿಸಿರುವ ಕೇಂದ್ರ ಸರ್ಕಾರ ಇದೀಗ ಇಲ್ಲಿ ನೇರ ನಿಗಾಗೆ ಮುಂದಾಗಿದೆ. ಈ ಮೂಲಕ ಕೊರೋನಾ ನಿಯಂತ್ರಿಸುವ ಜತೆಗೆ ಸಾವಿನ ಸಂಖ್ಯೆಯನ್ನೂ ಇಳಿಸುವ ಗುರಿ ಹೊಂದಿದೆ. ಇದರ ಭಾಗವಾಗಿ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮಂಗಳವಾರ ನಾಲ್ಕೂ ಜಿಲ್ಲೆಯ ಮುಖ್ಯ ಆರೋಗ್ಯ ಅಧಿಕಾರಿ(ಸಿಎಂಒ)ಗಳ ಜೊತೆ ಸಭೆ ನಡೆಸಿದ್ದು, ಟೆಸ್ಟಿಂಗ್‌ ಹೆಚ್ಚಿಸುವುದು ಸೇರಿದಂತೆ ಅನೇಕ ವಿಚಾರಗಳ ಕುರಿತು ಸಲಹೆ ಸೂಚನೆ ನೀಡಿದರು.

ಕೊರೋನಾ ಹೆಚ್ಚಳ: ಕರ್ನಾಟಕ ಸೇರಿ ಹಾಟ್ ಸ್ಪಾಟ್ ಜಿಲ್ಲೆಗಳ ಮೇಲೆ ಕೇಂದ್ರ ನೇರ ನಿಗಾ ..

ರಾಜ್ಯದ ಈ ನಾಲ್ಕು ಜಿಲ್ಲೆಗಳು ಮಾತ್ರವಲ್ಲದೆ ಉಳಿದ ಐದು ರಾಜ್ಯಗಳ ಒಟ್ಟು 13 ಜಿಲ್ಲೆಗಳು ದೇಶದ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆಗೆ ಶೇ.46ರಷ್ಟುಕೊಡುಗೆಯನ್ನು ಕೊಟ್ಟಿವೆ. ಹೀಗಾಗಿ ನೇರವಾಗಿ ಅಖಾಡಕ್ಕೆ ಇಳಿದಿರುವ ಕೇಂದ್ರ ಇದೀಗ ಅಷ್ಟೂಜಿಲ್ಲೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ನೇರ ಸಂಪರ್ಕ ಸಾಧಿಸಿ ಮೇಲ್ವಿಚಾರಣೆ ನಡೆಸಲಿದೆ.

ಕೊರೋನಾಗೆ ಸರ್ಕಾರಿ ಆಸ್ಪತ್ರೆ ವೈದ್ಯ ಬಲಿ: ಶ್ರೀರಾಮುಲು ಸಂತಾಪ, ಪರಿಹಾರದ ಭರವಸೆ ...

ಕೊರೊನಾ ಸೋಂಕು ನಿಯಂತ್ರಣ ವಿಷಯವಾಗಿ ಈತನಕ ರಾಜ್ಯಮಟ್ಟದ ಮುಖ್ಯಕಾರ್ಯದರ್ಶಿಗಳು, ಆರೋಗ್ಯ ಇಲಾಖೆ ಆಯುಕ್ತರು ಅಥವಾ ಕಾರ್ಯದರ್ಶಿಗಳ ಜೊತೆ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿತ್ತು. ಈ ಮೂಲಕ ಮಾಹಿತಿ ರವಾನಿಸುತ್ತಿತ್ತು. ಆದರೆ ಇದೀಗ ಸೋಂಕು ನಿಯಂತ್ರಣ ಸಂಬಂಧ ಈಗ ಇನ್ನೂ ಕೆಳಮಟ್ಟದ ಅಂದರೆ ಜಿಲ್ಲಾಮಟ್ಟದ ಅಧಿಕಾರಿಗಳ ಮೇಲೆ ಇದೀಗ ನೇರ ನಿಗಾವಣೆ ವಹಿಸುವ ಮೂಲಕ ಮೇಲ್ವಿಚಾರಣೆಗೆ ಕೇಂದ್ರ ಮುಂದಾಗಿದೆ.

ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮಂಗಳವಾರ ಜಿಲ್ಲಾಮಟ್ಟದ ಮುಖ್ಯ ಆರೋಗ್ಯ ಅಧಿಕಾರಿ(ಸಿಎಂಒ)ಗಳ ಜೊತೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕರ್ನಾಟಕದ ನಾಲ್ಕು ಜಿಲ್ಲೆಗಳ ಸಿಎಂಓಗಳು ಕೂಡ ಭಾಗಿಯಾಗಿದ್ದರು. ಈ ವೇಳೆ ಮರಣ ಪ್ರಮಾಣ ದರ ಇಳಿಸಲು ಮತ್ತು ಏಮ್ಸ್‌ ವೈದ್ಯರ ಸಹಾಯ ಪಡೆಯುವಂತೆ ಕೇಂದ್ರ ಅಧಿಕಾರಿಗಳು ಸೂಚಿಸಿದ್ದಾರೆ. ಇನ್ನು ಟೆಸ್ಟಿಂಗ್‌, ಟ್ರೇಸಿಂಗ್‌, ಚಿಕಿತ್ಸೆ ಬಗ್ಗೆ ಮಾಹಿತಿ, ಮಾರ್ಗದರ್ಶನ, ತಪ್ಪುಗಳು ಸರಿಪಡಿಸುವ ಬಗ್ಗೆಯೂ ಚರ್ಚೆ ನಡೆಯಿತು.

 -ಮರಣದ ದರ ಶೇ.1ಕ್ಕಿಂತ ಕಡಿಮೆ ಮಾಡಲು ಕೈಗೊಂಡಿರುವ ಕ್ರಮದ ಬಗ್ಗೆ ವರದಿ ಸಲ್ಲಿಸಲು ಸೂಚನೆ

-ಸೋಂಕು ನಿಯಂತ್ರಣಕ್ಕೆ ಕ್ರಮ, ಲೋಪದೋಷಗಳನ್ನೂ ಈ ವರದಿಯಲ್ಲಿ ಉಲ್ಲೇಖಿಸಲು ಸೂಚನೆ

-ವಿಶೇಷ ವಲಯದ ಹಿರಿಯ ನಾಗರಿಕರಿಗೆ ಆದ್ಯತೆ ನೀಡಲು ಏಮ್ಸ್‌ ವೈದ್ಯರ ಸಲಹೆ ಪಡೆಯಲು ಸೂಚನೆ