ಕೋವಿಡ್ ಹೆಚ್ಚಳ : ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಮಾರ್ಗಸೂಚಿ
- ಅಪಾರ್ಟ್‌ಮೆಂಟ್‌ಗಳಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿದ್ದು ಮೈಕ್ರೋ ಕಂಟೈನ್ಮೆಂಟ್ ವಲಯಗಳ ಸಂಖ್ಯೆಯೂ ಜಾಸ್ತಿ
- ಬಿಬಿಎಂಪಿಯಿಂದ ಅಪಾರ್ಟ್ ಮೆಂಟ್ ನಿವಾಸಿಗಳಿಗಾಗಿ ಸೋಂಕು ಹರಡುವಿಕೆ ನಿಯಂತ್ರಿಸುವ ಮಾರ್ಗಸೂಚಿ ಬಿಡುಗಡೆ
ಬೆಂಗಳೂರು (ಆ.14): ಅಪಾರ್ಟ್‌ಮೆಂಟ್‌ಗಳಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿದ್ದು ಮೈಕ್ರೋ ಕಂಟೈನ್ಮೆಂಟ್ ವಲಯಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಬಿಬಿಎಂಪಿ ಅಪಾರ್ಟ್ ಮೆಂಟ್ ನಿವಾಸಿಗಳಿಗಾಗಿ ಸೋಂಕು ಹರಡುವಿಕೆ ನಿಯಂತ್ರಿಸುವ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ 2 ವಾರಗಳಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಕೋವಿಡ್ ಪ್ರಕರಣ ಒಟ್ಟಿಗೆ ಕಂಡುಬಂದರೆ ಅದನ್ನು ಕ್ಲಸ್ಟರ್ ಎಂದು ಗುರುತಿಸಲಾಗುತ್ತಿದೆ. ಜೊತೆಗೆ 100 ಮೀ. ಸುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್ ವಲಯ ಮಾಡಲಾಗುತ್ತಿದೆ. ಈ ಪೈಕಿ ಸಕ್ರಿಯ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 76 ದಾಟಿದ್ದು, ಅದರಲ್ಲಿ ಶೇ.50 ಅಂದರೆ 82 ಅಪಾರ್ಟ್ಮೆಂಟ್ ಕಾಂಪ್ಲೆಕ್‌ಸ್ಗಳು ಕಂಟೈನ್ಮೆಂಟ್ ವಲಯಗಳಿವೆ. ಈ
ಸಂಬಂಧ ಅಪಾರ್ಟ್‌ಮೆಂಟ್‌ಗಳಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಂತೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತು ಅಪಾರ್ಟ್‌ಮೆಂಟ್ ಕಾಂಪ್ಲೆಕ್‌ಸ್ ನಿರ್ವಹಣಾ ಸಮಿತಿಗೆ ಸೂಚನೆ ನೀಡಲಾಗಿದೆ.
ರಾಜ್ಯದೆಲ್ಲೆಡೆ ಆಕ್ಸಿಜನ್ ಬೆಡ್ ಹೆಚ್ಚಳ: ಸಿಎಂ ಬಸವರಾಜ್ ಬೊಮ್ಮಾಯಿ
ಅಪಾರ್ಟ್‌ಮೆಂಟ್‌ಗಳಿಗೆ ಬರುವ ಸಂದರ್ಶಕರು, ಮನೆ ಕೆಲಸದವರು ಸೇರಿ ಹೊರಗಿನಿಂದ ಬರುವಂತವರಿಗೆ ಉಷ್ಣಾಂಶ ತಪಾಸಣೆ ಮಾಡಬೇಕು. ಮಾಸ್ಕ್ ಧರಿಸಿರುವುದನ್ನು ಗಮನವಹಿಸಬೇಕು. ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಅಥವಾ ಕೈತೊಳೆದುಕೊಳ್ಳಲು ನೀರು, ಸೋಂಪಿನ ವ್ಯವಸ್ಥೆ ಮಾಡಬೇಕು. ಸಂದರ್ಶಕರ ಸಂಪೂರ್ಣ ಮಾಹಿತಿ ದಾಖಲಿಸಿಟ್ಟುಕೊಳ್ಳಬೇಕು ಎಂಬುದು ಸೇರಿದಂತೆ 36 ನಿಯಮಗಳನ್ನು ಸುತ್ತೋಲೆಯಲ್ಲಿ ಅಳವಡಿಸಲಾಗಿದೆ.
ಎರಡು ತಿಂಗಳು ಗಡುವು ಪ್ರತಿ ತಂಡಕ್ಕೆ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಸ್ಟೆಥಾಸ್ಕೋಪ್, ಪಲ್ಸ್ ಆಕ್ಸಿಮೀಟರ್, ಎನ್-95 ಮಾಸ್ಕ್, ಸರ್ಜಿಕಲ್ ಗ್ಲೌಸ್, ಸ್ಯಾನಿಟೈಸರ್ 500 ಎಂ.ಎಲ್ ಲಭ್ಯವಿರುವಂತೆ ಕ್ರಮವಹಿಸುವುದು ಕಡ್ಡಾಯ. ಮನೆ ಭೇಟಿಯ ಸಮಯದಲ್ಲಿ ಕೋವಿಡ್-19 ಸೋಂಕಿತರು ಪತ್ತೆಯಾದಲ್ಲಿ, ಸೋಂಕಿತರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಹೋಂ ಐಸೋಲೇಷನ್ ಕಿಟ್ ಕೊಡಬೇಕು. ಸಮೀಕ್ಷೆಯನ್ನು ಸಮರ್ಪಕವಾಗಿ ನಡೆಸಿ, 2 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಸಮೀಕ್ಷೆಯ ಮಾಹಿತಿಯನ್ನು ಸ ಭೆಯಲ್ಲಿ ತರಬೇತಿ ನೀಡಿರುವಂತೆ ಪ್ರತಿದಿನ ನಿಗದಿತ ತಂತ್ರಾಂಶದಲ್ಲಿ ನಮೂದಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
1 ಕೇರಳ-ಮಹಾರಾಷ್ಟ್ರ ರಾಜ್ಯದಿಂದ ಬರುವವರು ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತರುವುದು ಕಡ್ಡಾಯ.
2 ಆರ್‌ಟಿಪಿಸಿಆರ್ ಪರೀಕ್ಷೆ ನಂತರ ಕೊರೋನಾ ನೆಗೆಟಿವ್ ವರದಿ ಬರುವವರೆಗೂ ಕ್ವಾರಂಟೈನ್ ನಲ್ಲಿ ಇರಬೇಕು.
3 ವ್ಯಾಯಾಮ ಶಾಲೆಗಳನ್ನು (ಜಿಮ್) ಶೇ.50ರಷ್ಟು ಪ್ರಮಾಣದಲ್ಲಿ ಬಳಕೆಗೆ ಅನುಮತಿ.
4 ಈಜುಕೊಳ ಬಳಸದಂತೆ ನಿರ್ಬಂಧ: ನಿವಾಸಿಗಳಿಗೆ ಸೂಚನೆ 5 3 ವರ್ಷ ಮೇಲ್ಪಟ್ಟ ಮಕ್ಕಳು ತೆರೆದ ಪ್ರದೇಶಗಳಲ್ಲಿ ಮಾಸ್‌ಕ್ ಧರಿಸಿರಬೇಕು.
6 ಕ್ಲಬ್, ಸಮುದಾಯ ಭವನಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
7 ಗುಂಪು ಕೂಡುವುದು, ಹೆಚ್ಚು ಜನ ಸಂದಣಿ ಆಗದಂತೆ ಸಾಧ್ಯವಾದಷ್ಟು ನಿಯಂತ್ರಿಸಬೇಕು.
8 ವ್ಯಾಪಾರಸ್ಥರು, ಡೆಲಿವರಿ ಬಾಯ್‌ಸ್ ಮಾತ್ತು ಕೊರಿಯರ್ ಸೇವೆ ಮಿತವಾಗಿರಬೇಕು.
9 ಸೋಂಕಿತರು ಮೊದಲು ಭೌತಿಕ ಟ್ರಯಾಜಿಂಗ್ ಒಳಗಾಗಬೇಕು.
10ವೈದ್ಯರು ಸೂಚಿಸಿದರೆ ಮಾತ್ರ 10 ದಿನಗಳ ಹೋಂ ಐಸೋಲೇಷನ್ ಆಗಬೇಕು.
11ಸೋಂಕು ಅಲ್ಪಮಟ್ಟಿಗೆ ತೀವ್ರಗೊಂಡಿದ್ದ ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲು
12ಮಾರ್ಗಸೂಚಿ ಉಲ್ಲಂಸುವ ಅಪಾರ್ಟ್‌ಮೆಂಟ್‌ಗಳ ವಿರುದ್ಧ ಕಾನೂನು ರೀತ್ಯ ಕ್ರಮ.
13ಆರೋಗ್ಯ ಸಿಬ್ಬಂದಿ ಪರಿಶೀಲನೆಗೆ ಬಂದಾಗ ನಿವಾಸಿಗಳು ಸಹಕರಿಸಬೇಕು.
14ಅಂತಾರಾಜ್ಯ ಪ್ರಯಾಣ ಮಾಡಿ ಬಂದ ನಿವಾಸಿಗೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡಬೇಕು