ಕೊರೋನಾ ಪಾಸಿಟಿವ್ ಬಂದು ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡು ಪೊಲೀಸ್ ಪೇದೆಯೋರ್ವ ಮೃತಪಟ್ಟ ಘಟನೆ ನಂಜನಗೂಡಿನಲ್ಲಿ ನಡೆದಿದೆ

ನಂಜನಗೂಡು (ಆ.28): ಕೊರೋನಾ ಸೋಂಕು ತಗುಲಿ ಮನೆಯಲ್ಲಿ ಐಸೋಲೇಷನಲ್ಲಿದ್ದ ಗ್ರಾಮಾಂತರ ಠಾಣೆಯ 34 ವರ್ಷದ ಪೊಲೀಸ್‌ ಪೇದೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಉಸಿರಾಟದ ತೊಂದರೆಯಿಂದ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. 

ಮೂಲತಃ ಗುಂಡ್ಲುಪೇಟೆ ತಾಲೂಕಿನ ಸೋಮನಹಳ್ಳಿಯವರಾಗಿದ್ದು, ಮೃತರಿಗೆ ಪತ್ನಿ ಮತ್ತು 2 ವರ್ಷದ ಗಂಡು ಮಗು ಇದೆ. ಆ.12 ರಂದು ರಾರ‍ಯಪಿಡ್‌ ಟೆಸ್ಟ್‌ ನಡೆಸಿದಾಗ ಸೋಂಕು ದೃಢಪಟ್ಟಹಿನ್ನೆಲೆ ಅವರನ್ನು ಮನೆಯಲ್ಲೇ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. 

ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆದರೆ, ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಲಭ್ಯವಿಲ್ಲದ ಕಾರಣದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್‌ನಲ್ಲಿ ಸಾಗಿಸಲಾಗುತ್ತಿತ್ತು. ಅಷ್ಟರಲ್ಲೆ ಪೇದೆ ತೀವ್ರ ಉಸಿರಾಟದ ತೊಂದರೆ ಎದುರಾಗಿ ಮೃತಪಟ್ಟಿದ್ದಾರೆ.

ಬೆಂಗಳೂರು; 30 ರಿಂದ 39 ವಯೋಮಾನದ ಪುರುಷರೇ ಕೊರೋನಾ ಟಾರ್ಗೆಟ್!...

ಈಗಾಗಲೇ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಲಕ್ಷಾಂತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದೆ. ಇನ್ನು ಮೈಸೂರಿನಲ್ಲಿಯೂ ಕೂಡ ಸಾವಿರಾರು ಪ್ರಕರಣಗಳು ವರದಿಯಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲಿಯೂ ಕೂಡ ಹೆಚ್ಚು ಹೆಚ್ಚು ವರದಿಯಾಗುತ್ತಿದೆ. 

ಮೈಸೂರಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅತೀ ಹೆಚ್ಚು ಕೊರೋನಾ ಸೋಂಕಿನ ಪ್ರಕರಣಗಳೂ ಕೂಡ ವರದಿಯಾಗಿದ್ದವು.