ಸರ್ಕಾರಿ ನೌಕರರಿಗೆ ಶಾಕ್ ಕೊಟ್ಟ ಸರ್ಕಾರ, ಬಯಸಿದ್ದು ಆಗಲ್ಲ!
ಸರ್ಕಾರಿ ನೌಕರರಿಗೆ ಕೊರೋನಾ ಶಾಕ್/ ಈ ಬಾರಿ ಸಾಮಾನ್ಯ ವರ್ಗಾವಣೆ ಇಲ್ಲ/ ಅತಿ ವಿರಳ ಪ್ರಕರಣದಲ್ಲಿ ಮಾತ್ರ ವರ್ಗಾವಣೆ/ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ
ಬೆಂಗಳೂರು(ಜೂ. 18) ವರ್ಗಾವಣೆ ಬಯಸುತ್ತಿದ್ದ ಸರ್ಕಾರಿ ನೌಕರರಿಗೆ ಕೊರೋನಾ ಕಾರಣಕ್ಕೆ ಸರ್ಕಾರ ಶಾಕ್ ನೀಡಿದೆ. ಕೊರೊನಾ ಪರಿಸ್ಥಿತಿ ಹಿನ್ನೆಲೆ ಮಿತವ್ಯಯ ಹಾಗೂ ಕೋವಿಡ್ ಕೆಲಸಗಳಿಗೆ ಧಕ್ಕೆಯಾಗಬಾರದೆಂದು ನೌಕರರ ಸಾಮಾನ್ಯ ವರ್ಗಾವಣೆಗೆ ಬ್ರೇಕ್ ಹಾಕಿದೆ.
ಕೊರೋನಾ ಇರುವುದರಿಂದ 2020-21ನೇ ಸಾಲಿನ ಸರಕಾರಿ ನೌಕರರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಕೈ ಬಿಟ್ಟಿದೆ. ಆದರೆ, ವಿರಳ ಪ್ರಕರಣಗಳಲ್ಲಿ ಮುಖ್ಯಮಂತ್ರಿ ಅನುಮೋದನೆ ಪಡೆದು ವರ್ಗಾವಣೆ ಸಾಧ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.
ಸರ್ಕಾರಿ ನೌಕರರ ವೇತನಕ್ಕೆ ಕತ್ತರಿ?
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಸಾಮಾನ್ಯವಾಗಿ ಮೇ ಮತ್ತು ಜೂನ್ ತಿಂಗಳಿನಲ್ಲಿ ವರ್ಗಾವಣೆ ನಡೆಯುತ್ತಿತ್ತು. ಒಟ್ಟಿನಲ್ಲಿನ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರು ಇನ್ನು ಒಂದು ವರ್ಷ ಕಾಯಬೇಕಾಗಿದೆ.
ಹೊಸದಾಗಿ ಅನುದಾನ ಕೇಳಿದ್ದ ಶಿಕ್ಷಣ ಸಂಸ್ಥೆಗಳಿಗೆ ಈ ವರ್ಷ ಹಣ ನೀಡಲು ಸಾಧ್ಯವಿಲ್ಲ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದರು. ಕೊರೋನಾ ಕಾರಣಕ್ಕೆ ಇದೀಗ ವರ್ಗಾವಣೆಗೂ ಬ್ರೇಕ್ ಬಿದ್ದಿದೆ.