ಕೊರೋನಾ ಆರಂಭದ ಮೊದಲ 55 ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ಒಂದು ಕೊರೋನಾ ಪಾಸಿಟಿವ್‌ ಕೇಸ್‌ಗಳು ಇರಲಿಲ್ಲ. ಆದರೆ ಕಳೆದ ಸುಮಾರು 55 ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 155 ರ ಗಡಿ ದಾಟಿದೆ. ಹೀಗಾಗಿ ಕಾಫಿ ನಾಡಿನ ಮಂದಿ ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಚಿಕ್ಕಮಗಳೂರು(ಜು.16): ಜಿಲ್ಲೆಯಲ್ಲಿ ಕೊರೋನಾ ವೈರಸ್‌ಗೆ 2 ದಿನಗಳಲ್ಲಿ 3 ಮಂದಿ ಬಲಿಯಾಗಿದ್ದು, ಮಹಾಮಾರಿಗೆ ಪ್ರಾಣತೆತ್ತವರ ಸಂಖ್ಯೆ6ಕ್ಕೆ ಏರಿಕೆಯಾಗಿದೆ. ಇದರಿಂದ ಜನರಲ್ಲಿ ಭೀತಿ ಹೆಚ್ಚಳವಾಗಿದೆ.

Add Asianetnews Kannada as a Preferred SourcegooglePreferred

ಸೋಮವಾರವಷ್ಟೇ ಜಿಲ್ಲೆಯಲ್ಲಿ ಕೊರೋನಾಗೆ ಇಬ್ಬರು ಸಾವನ್ನಪ್ಪಿದ್ದರು. ಮಧುಮೇಹದಿಂದ ಬಳಲುತ್ತಿದ್ದ ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆ ನಿವಾಸಿ 4 ದಿನದ ಹಿಂದೆ ಕೋವಿಡ್‌-19 ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಾವನ್ನಪ್ಪಿದ್ದರು.

ನಗರದ ರಾಮನಹಳ್ಳಿ ನಿವಾಸಿ 72 ವರ್ಷದ ವೃದ್ಧೆ ಕೂಡ ಎರಡು ದಿನದ ಹಿಂದೆ ಸಾವನ್ನಪ್ಪಿದ್ದರು. ಆದರೆ ಆತಂಕದಿಂದ ಸಾವಿನ ಬಳಿಕ ಮನೆಯವರು ಹಾಗೂ ಸರ್ಕಾರ ಕೋವಿಡ್‌ ಪರೀಕ್ಷೆಗೆ ಮುಂದಾಗಿತ್ತು. ಕೊರೋನಾ ಪರೀಕ್ಷೆಯಲ್ಲಿ ಮೃತ ವೃದ್ಧೆಗೂ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಮನೆಯವರಲ್ಲೂ ಆತಂಕ ಎದುರಾಗಿದೆ.

ಈ ಮಧ್ಯೆ ನಗರದ ಗೌರಿಕಾಲುವೆ ನಿವಾಸಿ 56 ವರ್ಷದ ವ್ಯಕ್ತಿ ಕೂಡ ಮೃತರಾಗಿದ್ದಾರೆ. ಅಸ್ತಮಾ ಹಾಗೂ ಶುಗರ್‌ನಿಂದ ಬಳಲುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಟ್ರಾವೆಲ್‌ ಹಿಸ್ಟರಿ ಇಲ್ಲದ 8 ಐಎಲ್‌ಐ ಕೇಸ್‌ಗಳು ಪತ್ತೆಯಾಗಿದ್ದು ಜಿಲ್ಲೆಯ ಜನರಲ್ಲಿ ಆತಂಕ ತಂದಿದೆ.

ಕೊರೋನಾ ಕಮಾಂಡರ್‌ವೊಬ್ಬರ ಜೀವ ಉಳಿಸಲಾಗದೇ ಕೈಚೆಲ್ಲಿದ ಬಿಬಿಎಂಪಿ..!

ಕೊರೋನಾ ಆರಂಭದ ಮೊದಲ 55 ದಿನಗಳ ಕಾಲ ಜಿಲ್ಲೆಯಲ್ಲಿ ಒಂದೇ ಒಂದು ಕೊರೋನಾ ಪಾಸಿಟಿವ್‌ ಕೇಸ್‌ಗಳು ಇರಲಿಲ್ಲ. ಆದರೆ ಕಳೆದ ಸುಮಾರು 55 ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 155 ರ ಗಡಿ ದಾಟಿದೆ. 6 ಜನರು ವೈರಸ್‌ಗೆ ಪ್ರಾಣ ತೆತ್ತಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೋಂಕು ಹಾಗೂ ಸಾವಿನ ಸಂಖ್ಯೆಯಿಂದ ಜಿಲ್ಲೆಯ ಜನರು ಆತಂಕದಿಂದ ಬದುಕುವಂತಾಗಿದೆ.