ಸಾರ್ಡಿನಿಯಾ(ಇಟಲಿ ಸೆ.25] ಮದುವೆಗೆಂದು ಭಾರತದಲ್ಲಿ ರಾಶಿ ರಾಶಿ ಬಟ್ರಟೆ ಖರೀದಿ ಮಾಡಿ ಅದರಲ್ಲಿ ವಧು೦ವರರು ಮಿರಿ ಮಿರಿ ಮಿಂಚುತ್ತಾರೆ. ಆದರೆ ಇಲ್ಲೊಂದು ಜೋಡಿ ಬೆತ್ತಲೆಯಾಗಿಯೇ ಮದುವೆಯಾಗಿದೆ.

ಇಟಲಿಯ ಸಾರ್ಡಿಯಾನ ದ್ವೀಪದಲ್ಲಿ ನಡೆದ  ಆಧುನಿಕ ಸ್ವಯಂವರದಲ್ಲಿನ ಗಂಡು-ಹೆಣ್ಣುಗಳಿಗೆ ಬಟ್ಟೆ ಬೇಕಾಗಿಯೇ ಇರಲಿಲ್ಲ. ಬೀಚ್ ನಲ್ಲಿ ಮದುವೆಯಾದ ಜೋಡಿಗೆ ಎಲ್ಲವೂ ಖುಲ್ಲಂ ಖುಲ್ಲಾ!

ಸಾರ್ಡಿಯಾನ ದ್ವೀಪದ ಟಾರ್ಕೋಯಿಸ್ ಸಾಗರ ತೀರದಲ್ಲಿ ನಡೆದ ನೇಕೆಡ್ ಬೀಚ್ ಉತ್ಸವದಲ್ಲಿ ಕೆಲವು ಜೋಡಿಗಳು ನಗ್ನವಾಗಿಯೇ ಸತಿ-ಪತಿಗಳಾದರು. ದಂತ ವೈದ್ಯೆ ಅಂಕಾ ಅರ್ಸೆನೆ(29) ಸಾಫ್ಟ್ ವೇರ್  ಉದ್ಯೋಗಿ ವ್ಯಾಲೆಂಟೈನ್(34) ರನ್ನು ವರಿಸಿದರು.  ಈ ಮುಕ್ತ ವಿವಾಹವನ್ನು ವಧು-ವರರ ಹೆತ್ತವರು, ಬಂಧು-ಮಿತ್ರರು ಕಣ್ಣು ತುಂಬಿಕೊಂಡರು. ಕೆಲವೊಂದು ಜೋಡಿಗಳು ಬೀಚ್ ನಲ್ಲಿ ನಗ್ನವಾಗಿಯೇ ಓಡಾಡುತ್ತ ಮದುವೆಗೆ ಶುಭ ಹಾರೈಸಿದರು.