ಬಾಗಲಕೋಟೆ: ಅಂತರ್ಜಾತಿ ವಿವಾಹ, ಎಸ್‌ಪಿ ಮೊರೆ ಹೋದ ದಂಪತಿ
ಅಂತರ್ಜಾತಿ ವಿವಾಹವಾಗಿ ಪೊಲೀಸರ ರಕ್ಷಣೆ ಕೋರಿದ ಪ್ರೇಮಿಗಳು| ನಮಗೆ ರಕ್ಷಣೆ ನೀಡಬೇಕೆಂದು ಎಸ್ಪಿ ಮೊರೆ ಹೋದ ಎರಡೂ ಕುಟುಂಬಸ್ಥರು| ಯುವತಿಯ ಕಪಾಳಕ್ಕೆ ಆಕೆಯ ಸಹೋದರ ಹೊಡೆದರೆ ಯುವಕನ ಮೇಲೆಯು ಹುಡುಗಿಯ ಸಹೋದರ ಹಾಗೂ ತಂದೆಯಿಂದ ಹಲ್ಲೆಗೆ ಯತ್ನ|
ಬಾಗಲಕೋಟೆ(ಫೆ.27): ಅಂತರ್ಜಾತಿ ಮದುವೆಯಾಗಿದ್ದ ದಂಪತಿ ತಮಗೆ ರಕ್ಷಣೆ ನೀಡಬೇಕು ಎಂದು ಶುಕ್ರವಾರ ಬಾಗಲಕೋಟೆ ಎಸ್ಪಿಗೆ ಮೊರೆ ಹೋಗಿದ್ದಾರೆ.
ನವನಗರದ ಸೆಕ್ಟರ್‌ನಂ.44ರ ನಿವಾಸಿಗಳಾದ ನವೀನ ಭಜಂತ್ರಿ, ಮಹಜಬಿನ್‌ಮಂಟೂರ ಎಂಬ ಪ್ರೇಮಿಗಳೇ ಅಂತರ್ಜಾತಿ ವಿವಾಹವಾಗಿ ಈಗ ಪೊಲೀಸರ ರಕ್ಷಣೆ ಕೋರಿದ್ದಾರೆ. ಎರಡು ಕುಟುಂಬಗಳಿಂದ ನಮಗೆ ರಕ್ಷಣೆ ನೀಡಬೇಕು ಎಂದು ಅವರು ಎಸ್ಪಿ ಕಚೇರಿಗೆ ಬಂದಿ ಮನವಿ ಮಾಡಿದ್ದಾರೆ. ಈ ವೇಳೆಯೂ ಕುಟುಂಬಸ್ಥರಿಂದ ಹಲ್ಲೆಗೆ ಯತ್ನ ನಡೆದಿದೆ ಎಂದು ಹೇಳಲಾಗಿದೆ.
ಜಮಖಂಡಿ: ತಹಸೀಲ್ದಾರ್ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನ
ಯುವತಿಯ ಕಪಾಳಕ್ಕೆ ಆಕೆಯ ಸಹೋದರ ಹೊಡೆದರೆ ಯುವಕನ ಮೇಲೆಯು ಹುಡುಗಿಯ ಸಹೋದರ ಹಾಗೂ ತಂದೆಯಿಂದ ಹಲ್ಲೆಗೆ ಯತ್ನ ನಡೆದಿದೆ ಎಂದು ಹೇಳಲಾಗಿದೆ. ನಂತರ ಹುಡುಗಿ ತಂದೆ ಹಾಗೂ ಸಹೋದರನನ್ನು ಪೊಲೀಸರು ಹೊರಗೆ ಕಳಿಸಿದ್ದಾರೆ ಎಂದು ತಿಳಿದುಬಂದಿದೆ. ಎಸ್ಪಿ ಎದುರು ಮಗಳನ್ನು ನಮ್ಮ ಜೊತೆ ಕಳಿಸಿಕೊಡಿ ಎಂದು ತಂದೆ ಬೇಡಿಕೊಂಡಿದ್ದು ಕಂಡುಬಂತು.