Asianet Suvarna News Asianet Suvarna News

ಕೌಟುಂಬಿಕ ಕಲಹ : ಪತಿ -ಪತ್ನಿ ಆತ್ಮಹತ್ಯೆಗೆ ಶರಣು

  • ಕೌಟಂಬಿಕ ಕಲಹದಿಂದ ಬೇಸತ್ತು ಪತಿ ಪತ್ನಿ ಆತ್ಮಹತ್ಯೆ
  • ಮದ್ಯ ವ್ಯಸನಿಯಾಗಿದ್ದ ಪತಿಯಿಂದ ನಿತ್ಯ ಕುಡಿದು ಬಂದು ಜಗಳ
Couple Commits Suicide in Magadi snr
Author
Bengaluru, First Published Sep 22, 2021, 12:16 PM IST
  • Facebook
  • Twitter
  • Whatsapp

 ಮಾಗಡಿ (ಸೆ.22): ಕೌಟಂಬಿಕ ಕಲಹದಿಂದ ಬೇಸತ್ತು ಪತಿ ಪತ್ನಿ ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ಪಟ್ಟಣದ  ತಿರುಮಲೆ  ಭಜನೆ ಮನೆ ರಸ್ತೆಯಲ್ಲಿ  ನಡೆದಿದೆ. 

ಪಟ್ಟಣದ ತಿರುಮಲೆ ಭಜನೆ  ಮನೆ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನರಸಿಂಹ ಮೂರ್ತಿ ನಾಯ್ಕ (35) ಮತ್ತು ಹೇಮಾ ಮೃತರು.

ಕೋಲಾರ: 2 ಕೋಟಿ ಸಂಗ್ರಹಿಸಿದ್ದ ಅಗ್ರಿಗೋಲ್ಡ್‌ ಏಜೆಂಟ್ ಆತ್ಮಹತ್ಯೆ

ಮದ್ಯ ವ್ಯಸನಿಯಾಗಿದ್ದ  ನರಸಿಂಹ  ಪ್ರತಿನಿತ್ಯ  ಮದ್ಯ ಸೇವಿಸಿ ಬಂದು  ಮನೆಯಲ್ಲಿ ಪತ್ನಿ ಹೆಮಾಳೊಂದಿಗೆ ಜಗಳ ಅಡುತ್ತಿದ್ದನು. 

ಮಂಗಳವಾಡ ಜಗಳ ವಿಕೊಪಲ್ಎ ತಿರುಗಿ  ಇಬ್ಬರು ಮನೆಯಲ್ಲಿ  ನೇಣು ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿದ್ದಾರೆ. 

ಮಾಗಡಿ ಪೊಲೀಸ್ ಇನ್ಸ್‌ಪೆಕ್ಟರ್‌ ಬಿ ರವಿ ಸಬ್‌ ಇನ್ಸ್‌ಪೆಕ್ಟರ್  ಶ್ರೀಕಾಂತ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ರಾಜ್ಯದಲ್ಲಿ ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಘಟನೆಗಳು ಹೆಚ್ಚಾಗುತ್ತಲೇ ಇದ್ದು, ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿದ್ದರು. 

Follow Us:
Download App:
  • android
  • ios