ಕೋಲಾರ: 2 ಕೋಟಿ ಸಂಗ್ರಹಿಸಿದ್ದ ಅಗ್ರಿಗೋಲ್ಡ್ ಏಜೆಂಟ್ ಆತ್ಮಹತ್ಯೆ
* ಕೋಲಾರ ತಾಲೂಕಿನ ಹೊಲ್ಲಂಬಳ್ಳಿ ಗ್ರಾಮದಲ್ಲಿ ನಡೆದ ಘಟನೆ
* ಅಗ್ರಿಗೋಲ್ಡ್ ಕಂಪನಿಯ ವಂಚನೆ ಬಯಲು
* ಹಣ ವಾಪಸ್ ಕೊಡಿಸುವಂತೆ ಪೀಡಿಸುತ್ತಿದ್ದ ಗ್ರಾಹಕರು
ಕೋಲಾರ(ಸೆ.22): ಅಗ್ರಿಗೋಲ್ಡ್ ಕಂಪನಿಯ ಏಜೆಂಟ್‌ವೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲೂಕಿನ ಹೊಲ್ಲಂಬಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಕೋಲಾರ ತಾಲೂಕಿನ ಹೊಲ್ಲಂಬಳ್ಳಿಯ ಡಿ.ಎಂ. ಶ್ರೀನಿವಾಸಪ್ಪ (53) ಅವರು ಆತ್ಮಹತ್ಯೆ ಮಾಡಿಕೊಂಡವರು.
2004ರವರೆಗೂ ಅಗ್ರಿಗೋಲ್ಡ್‌ನಲ್ಲಿ ಏಜೆಂಟ್ ಆಗಿದ್ದ ಅವರು ಸಂಸ್ಥೆಗೆ 2 ಕೋಟಿ ಸಂಗ್ರಹಿಸಿ ಕೊಟ್ಟಿದ್ದರು. ಅಗ್ರಿಗೋಲ್ಡ್ ಕಂಪನಿಯ ವಂಚನೆ ಬಯಲಾದ ಬಳಿಕ ಸಂಸ್ಥೆಗೆ ಪಾವತಿಸಿದ ಹಣ ವಾಪಸ್ ಕೊಡಿಸುವಂತೆ ಗ್ರಾಹಕರು ಪೀಡಿಸುತ್ತಿದ್ದರು.
ರಾಜ್ಯದಲ್ಲಿ ಮತ್ತೊಂದು ದುರ್ಘಟನೆ: ಒಂದೇ ಕುಟುಂಬದ ಮೂವರ ಆತ್ಮಹತ್ಯೆ
ಕೇಸ್ ನ್ಯಾಯಾಲಯದಲ್ಲಿದೆ ಎಂದರೂ ಜನ ಕೇಳುತ್ತಿರಲಿಲ್ಲ. ಇದರಿಂದ ಶ್ರೀನಿವಾಸಪ್ಪ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.