ಬೆಂಗಳೂರು (ಜ.21):  ಆ ಐನಾತಿ ದಂಪತಿಗೆ ಮಿಡಲ್ ಕ್ಲಾಸ್ ಜನರೇ ಟಾರ್ಗೆಟ್. ಹೆಚ್ಚು ಬಡ್ಡಿ ನೀಡುವ ಆಸೆ ತೋರಿಸಿ ವಂಚನೆ ಮಾಡುವುದೇ ಇವರ ಬ್ಯುಸಿನೆಸ್. ಈಗ ಇವರ ಹಳ್ಳಕ್ಕೆ ಬಿದ್ದವರದ್ದು ಕಣ್ಣಿರ ಕಥೆ...

ಈ ದಂಪತಿ ನೀಡುತ್ತೇವೆ ಎಂದು ಹೇಳಿದ ಹೆಚ್ಚುವರಿ ಬಡ್ಡಿ ಆಸೆಗೆ‌ ಬಿದ್ದು ಇದೀಗ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ.  ಪತ್ನಿಗೆ ಹೇಳದಂತೆ ಪತಿಯಿಂದ ಹೂಡಿಕೆ..ಪತಿಗೆ ಗೊತ್ತಾಗದಂತೆ ಪತ್ನಿಯಿಂದ ಹೂಡಿಕೆ ಮಾಡಿಸಿಕೊಂಡು ಇದೀಗ ಮಹಾ ವಂಚನೆ ಮಾಡಿದ್ದಾರೆ. ಈ ವಂಚನೆಯಿಂದ ಅನೇಕ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ.  

ಬೆಂಗಳೂರಿನ ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,  ಬರೋಬ್ಬರಿ 900 ಜನರಿಂದ ಹಣ ಪಡೆದು ಸುಮಾರು 20 ಕೋಟಿ ರು.‌ ವಂಚನೆ ಮಾಡಿದ್ದಾರೆ.  ಮೃತ ಗಂಡನಿಗೆ ಬಂದಿದ್ದ ಹಣ ಹಾಕಿ ಮಹಿಳೆಯೋರ್ವರು  ಕೈ ಸುಟ್ಟುಕೊಂಡು ಮಗಳ ಮದುವೆಗೆ ಹಣವಿಲ್ಲದೇ ಪರದಾಡುತ್ತಿದ್ದಾರೆ. ಒಟ್ಟು 20 ಲಕ್ಷ ರು. ಈ ದಂಪತಿಗೆ ಕೊಟ್ಟು ಯಾಮಾರಿದ್ದಾರೆ.

ಕಂಡೋರ ಸೈಟ್‌ 1 ಕೋಟಿಗೆ ಮಾರಾಟ..! ...  

ಅದೇ ರೀತಿ ನಿವೃತ್ತ ಕೆಎಸ್ ಆರ್ ಟಿಸಿ ಚಾಲಕನಿಗೂ ದೋಖಾ ಮಾಡಿದ್ದಾರೆ.   ಮನೆ ಖರೀದಿ ಆಸೆಗೆ ಒಟ್ಟು 50 ಲಕ್ಷ ಹಣ ಹೂಡಿಕೆ ಮಾಡಿದ್ದ ಚಾಲಕ ನಾರಾಯಣ್ ಈಗ ಮೋಸ ಹೋಗಿದ್ದಾರೆ. ಹಣವೂ ಇಲ್ಲ ಮನೆಯೂ ಇಲ್ಲದೆ ಬೀದಿಗೆ ಬೀಳುವಂತಾಗಿದ್ದಾರೆ. 

ಸದ್ಯ ಸಂತ್ರಸ್ತ ಹೂಡಿಕೆದಾರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು ನ್ಯಾಯ ಒದಗಿಸುವಂತೆ ಕೋರಿದ್ದು, ತಮ್ಮ ಹಣ ತಮಗೆ ವಾಪಸಾಗಲಿ ಎನ್ನುತ್ತಿದ್ದಾರೆ.  

ದಂಪತಿ ಅರೆಸ್ಟ್  

ಈಗಾಗಲೇ ಗಿರಿನಗರ ಪೊಲೀಸರು ವಂಚಕ ದಂಪತಿ ಜ್ಞಾನೇಶ್-ಲೀಲಾವತಿ ಹಾಗೂ ಮಗ ಮನೋಜ್‌ರನ್ನು ಬಂಧಿಸಿದ್ದಾರೆ. ಇನ್ನು ವಂಚನೆ ಪಾಲುದಾರರೇ ಆಗಿರುವ  ಮಗಳು‌ ಮೇಘನಾ ಹಾಗೂ ಅಳಿಯ ರವಿಕುಮಾರ್‌ ರನ್ನು ಬಂಧಿಸುವಂತೆ ಆಗ್ರಹಿಸಲಾಗಿದೆ. 

ಚಿನ್ನಾಭರಣ ದೋಚಿದ ನೇಪಾಳದ ಮಾಜಿ ಪೊಲೀಸ್‌..! ...

ಆದರೆ ಅಳಿಯ ರವಿಕುಮಾರ್, ಹನುಮಂತ ನಗರ ಠಾಣೆ ವೈಟರ್ ಆಗಿದ್ದು,  ಆತ ತನಿಖೆ ಮೇಲೆ‌ ಪ್ರಭಾವ ಬೀರುತ್ತಿರುವ ಆರೋಪ ಎದುರಾಗಿದೆ.   ಅಲ್ಲದೇ ಕೂಡಲೇ ಈ ಪ್ರಕರಣ ಸಿಐಡಿಗೆ ವರ್ಗಾಯಿಸುವಂತೆಯೂ ಮೋಸ ಹೋದವರು ಈಗ ಆಗ್ರಹಿಸುತ್ತಿದ್ದಾರೆ.