ಬೆಂಗಳೂರು(ಆ.25):  ಸಾರ್ವಜನಿಕರಿಗೆ ಪಾಸಿಟಿವ್‌ ಇಲ್ಲದಿದ್ದರೂ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಸ್ಥಳಾಂತರಿಸಿ ಕೊರೋನಾ ಸೋಂಕಿನ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂಬ ಆರೋಪವು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕೇಳಿಬಂದಿದೆ.

ಚೆಕ್‌ಅಪ್‌ ಕ್ಯಾಂಪ್‌ ಹೆಸರಿನಲ್ಲಿ ಕೋವಿಡ್‌-19 ಪರೀಕ್ಷೆ ನಡೆಸುತ್ತಾರೆ. ಬಳಿಕ ನಮ್ಮನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಕೂಡಿ ಹಾಕುತ್ತಾರೆ. ಹಾಗೆ ನಮ್ಮನ್ನು ಆಕ್ಸ್‌ಫರ್ಡ್‌ ಮೆಡಿಕಲ್‌ ಕಾಲೇಜಿನಲ್ಲಿ ಕೂಡಿ ಹಾಕಿದ್ದಾರೆ. ಚಿಕಿತ್ಸೆ ಕೊಡೋಕೆ ಯಾರೂ ಬರೋದಿಲ್ಲ. ಊಟ, ತಿಂಡಿ ಸಹ ಚೆನ್ನಾಗಿರುವುದಿಲ್ಲ. ನೂರು ಜನರು ಇರಬೇಕಾದ ಕೋವಿಡ್‌ ಸೆಂಟರ್‌ನಲ್ಲಿ 300 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾವೂ ಚೆನ್ನಾಗಿದ್ದು ನಮ್ಮನ್ನು ಕೂಡಿ ಹಾಕಿದ್ದಾರೆ ಎಂದು ಹಲವು ಸೋಂಕಿತರು ಆರೋಪ ಮಾಡಿದ್ದಾರೆ.

ಗುಡ್ ನ್ಯೂಸ್: ಸೋಮವಾರ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚು..!

ಅಧಿಕಾರಿಗಳು ದುಡ್ಡು ಹೊಡೆಯಲು ನಮ್ಮನ್ನು ಲೆಕ್ಕಕ್ಕೆ ತೋರಿಸ್ತಿದ್ದಾರೆ. ನಮಗೆ ಪಾಸಿಟಿವ್‌ ಇದೆಯಾ ಅಥವಾ ಇಲ್ಲವಾ ಅನ್ನುವುದರ ಬಗ್ಗೆ ಕೇಳಿದರೆ ವರದಿ ಸಹ ಕೊಡುತ್ತಿಲ್ಲ. ವಾರ್ಡ್‌ನಲ್ಲಿರುವ 300 ಜನರಿಗೂ ಒಂದೇ ಕಡೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಂಕಿನ ಗುಣಲಕ್ಷಣಗಳು ಇಲ್ಲದಿದ್ದರೂ 10 ರಿಂದ 12 ದಿನಗಳ ಕಾಲ ಡಿಸ್ಚಾರ್ಜ್ ಮಾಡೋದಿಲ್ಲ ಎಂದು ಬಿಬಿಎಂಪಿ, ಆರೋಗ್ಯ ಇಲಾಖೆ ವಿರುದ್ಧ ಸೋಂಕಿತರು ಆರೋಪಿಸಿದ್ದಾರೆ.

ಅಂತರ್‌ ರಾಜ್ಯ ಪ್ರಯಾಣಿಕರಿಗೆ ಇದ್ದ ಎಲ್ಲಾ ಷರತ್ತುಗಳು‌ ರದ್ದು, ಸೀಲ್ ಇಲ್ಲ, ಕ್ವಾರಂಟೈನ್ ಇಲ್ಲ..

ಕೊರೋನಾ ವರದಿ ಬಗ್ಗೆ ವಿಚಾರಿಸಿದರೆ ಅಂತಹವರನ್ನು ಮಾತ್ರ ಡಿಸ್ಜಾಜ್‌ರ್‍ ಮಾಡಿ ಕಳಿಸುತ್ತಾರೆ. ಹಣ ಹೊಡೆಯೋಕೆ ಸುಖಾಸುಮ್ಮನೆ ನೆಗೆಟಿವ್‌ ಇರುವವರನ್ನು ಸ್ಥಳಾಂತರಿಸಲಾಗುತ್ತಿದೆ. ಗುಣಲಕ್ಷಣಗಳು ಇಲ್ಲದವರು ಮನೆಯಲ್ಲೇ ಇರಬಹುದು. ಆದರೆ, ಯಾಕೆ ಕೋವಿಡ್‌ ಕೇರ್‌ಗೆ ಶಿಫ್ಟ್‌ ಮಾಡುತ್ತಿದ್ದಾರೆ? ಸರ್ಕಾರ ಇದರ ಬಗ್ಗೆ ಗಮನಹರಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಸೋಂಕಿತರು ಸಂಶಯ ಹೊರಹಾಕಿದ್ದಾರೆ.