ಬಿಜೆಪಿ ವಶದಲ್ಲಿದ್ದ ಬ್ಯಾಂಕ್ ಕೈ ವಶಕ್ಕೆ: ಕಮಲ ಪಡೆಗೆ ತೀವ್ರ ಮುಖಭಂಗ
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 7 ಮಂದಿ ಕಾಂಗ್ರೆಸ್ ಬೆಂಬಲಿಗರು ಮತ್ತು 5 ಮಂದಿ ಬಿಜೆಪಿ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ.
ಚಾಮರಾಜನಗರ(ಫೆ.09): ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 7 ಮಂದಿ ಕಾಂಗ್ರೆಸ್ ಬೆಂಬಲಿಗರು ಮತ್ತು 5 ಮಂದಿ ಬಿಜೆಪಿ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ.
ಹಂಗಳ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಬಿಜೆಪಿ ಬೆಂಬಲಿಗರ ವಶದಲ್ಲಿತ್ತು. ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ ನಾಯಕತ್ವದಲ್ಲಿ ಕಾಂಗ್ರೆಸ್ ಬೆಂಬಲಿಗರು ಜಯಭೇರಿ ಬಾರಿಸಿದ್ದಾರೆ. ಅಧಿಕಾರರೂಢ ಬಿಜೆಪಿ ಬೆಂಬಲಿಗರು 5 ಸ್ಥಾನದಲ್ಲಿ ಗೆಲ್ಲುವ ಮೂಲಕ ಅಧಿಕಾರ ಕಳೆದುಕೊಳ್ಳುವ ಮೂಲಕ ಬಿಜೆಪಿ ಬೆಂಬಲಿಗರು ಬಾರಿ ಮುಖಭಂಗ ಅನುಭವಿಸಿದ್ದಾರೆ.
ಇಳುವರಿ ಹೆಚ್ಚಾಗ್ಬೇಕಾ..? ಜೇನು ಸಾಕಿ, ಒಂದೇ ಕೆಲಸದಲ್ಲಿ ಎರಡು ಲಾಭ
ಕಾಂಗ್ರೆಸ್ ಬೆಂಬಲಿತರಾದ ಎಚ್.ಎನ್.ಮಲ್ಲಪ್ಪ, ನಂಜುಂಡಪ್ಪ, ಎಚ್.ಎಂ. ಮಹೇಶ್, ಗೋಪಾಲ, ಮಾದನಯಕ, ಲಿಂಗರಾಜು ಭರ್ಜರಿ ಗೆಲುವು ಸಾಧಿಸಿದರು. ಬಿಜೆಪಿ ಬೆಂಬಲಿತರಾದ ಎಚ್.ಬಿ.ನಾಗೇಶ್, ಶಂಭಪ್ಪ, ಸತ್ಯಮ್ಮ, ಸುನಂದಮ್ಮ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಹಂಗಳದ ರಾಜಪ್ಪ ಗೆಲವು ಸಾಧಿಸಿದ್ದಾರೆ.
ಹಿನ್ನೆಲೆ:
ಹಂಗಳ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘ ಬಿಜೆಪಿ ಬೆಂಬಲಿಗರು ಅಧಿಕಾರದಲ್ಲಿದ್ದರು. ಚುನಾವಣೆ ಬೇಡ ಅವಿರೋಧ ಆಯ್ಕೆಗೆ ಬನ್ನಿ ಎಂದು ಮುಖಂಡ ಎಚ್.ಎಸ್.ನಂಜಪ್ಪ ಬಿಜೆಪಿ ಮುಖಂಡರಿಗೆ ಹೇಳಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಮಾತುಕತೆ ನಡೆಸಿದಾಗ ಕಾಂಗ್ರೆಸ್ ಮುಖಂಡ ಎಚ್.ಎಸ್.ನಂಜಪ್ಪ ನೀವು ಅಧಿಕಾರದಲ್ಲಿ ಇರುವ ಕಾರಣ ನೀವೇ (ಬಿಜೆಪಿ) 8 ಸ್ಥಾನ ಪಡೆದುಕೊಳ್ಳಿ. ನಮಗೆ(ಕಾಂಗ್ರೆಸ್) 6 ಸ್ಥಾನ ಕೊಡಿ ಹಾಗೂ ಬಿಜೆಪಿ ಬೆಂಬಲಿಗರು ಮೊದಲ 40 ತಿಂಗಳ ಕಾಲ ಅಧ್ಯಕ್ಷರಾಗಿ ಅಧಿಕಾರ ನಡೆಸಿ, ಉಳಿದ 20 ತಿಂಗಳು ಕಾಂಗ್ರೆಸ್ ಬೆಂಬಲಿಗರಿಗೆ ಅವಕಾಶ ಕೋಡಿ ಎಂದಾಗ ಸ್ಥಳೀಯ ಬಿಜೆಪಿಗರು ಒಪ್ಪಿಲಿಲ್ಲ ಎನ್ನಲಾಗಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ಮಾತುಕತೆ ಮುರಿದು ಬಿದ್ದ ಕಾರಣ ಫೆ. 5ರಂದು ಚುನಾವಣೆ ಗ್ರಾಮದಲ್ಲಿ ಶಾಂತಿಯುತವಾಗಿ ನಡೆದು ಮತ ಏಣಿಕೆ ನಡೆದಾಗ ಕಾಂಗ್ರೆಸ್‌ಗೆ 7 ಸ್ಥಾನ ಬಂದಿವೆ.
ಜಿದ್ದಾಜಿದ್ದಿ ಕಣ
ಮಾಜಿ ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ ಅವರ ಪ್ರಭಾವವಿದೆ. ಈ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲ್ಲುವ ಮೂಲಕ ಕಾಂಗ್ರೆಸ್‌ಗೆ ಮುಖಭಂಗ ಮಾಡಲು ಬಿಜೆಪಿ ಹವಣಿಸಿತ್ತು. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಪ್ರಣಯ್ ಹಿಂದಲಟ್ಟಿಹಾಗೂ ಹಂಗಳ ಶಕ್ತಿಕೇಂದ್ರ ಅಧ್ಯಕ್ಷ ಎಚ್.ಎಂ.ಮಹದೇವಪ್ಪ ಕೂಡ ಇದೇ ಗ್ರಾಮದವರೇ ಆಗಿರುವ ಕಾರಣ ಚುನಾವಣೆಯಲ್ಲಿ ಜಿದ್ದಾಜಿದ್ದಿ ಇತ್ತು. ಕಾಂಗ್ರೆಸ್ ಮುಖಂಡರ ಮಾತು ಕೇಳಿ ಅವಿರೋಧ ಆಯ್ಕೆ ನಡೆದಿದ್ದರೆ ಸಂಘದ ಅಧ್ಯಕ್ಷ ಸ್ಥಾನ ಸಿಕ್ಕಿ 40 ತಿಂಗಳ ಕಾಲ ಅಧಿಕಾರ ನಡೆಸಬಹುದಿತ್ತು. ಈಗ ಅಧಿಕಾರ ಕಳೆದುಕೊಂಡು ಮುಖಭಂಗ ಅನುಭವಿಸಿದೆ.Bank in bjp power comes under congress hold