Asianet Suvarna News Asianet Suvarna News

ಹಾನಗಲ್: ಆ್ಯಂಬುಲೆನ್ಸ್‌ಗಾಗಿ 12 ಗಂಟೆ ಕಾದ ಕೊರೋನಾ ಸೋಂಕಿತೆ..!

ಆ್ಯಂಬುಲೆನ್ಸ್‌ಗಾಗಿ 12 ಗಂಟೆ ಕಾಲ ಕಾದ 60 ವರ್ಷದ ಸೋಂಕಿತ ವೃದ್ಧೆ| ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆರೇಗೊಪ್ಪ ಗ್ರಾಮದಲ್ಲಿ ನಡೆದ ಘಟನೆ| ಹಲವು ಬಾರಿ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದರೂ ಆ್ಯಂಬುಲೆನ್ಸ್‌ ಬಂದಿಲ್ಲ| ರಾತ್ರಿ 11.30ರ ಸುಮಾರಿಗೆ ಆ್ಯಂಬುಲೆನ್ಸ್‌ ಬಂದು ಸೋಂಕಿತೆಯನ್ನು ಹಾವೇರಿಯ ಕೋವಿಡ್‌ ಆಸ್ಪತ್ರೆಗೆ ಕರೆದೊಯ್ದಿದೆ|

Coronavirus Positive Patient Wait 12 Hours for Ambulance in Hanagal in Haveri District
Author
Bengaluru, First Published Jul 5, 2020, 2:46 PM IST

ಹಾನಗಲ್(ಜು.06): ಕೊರೋನಾ ಸೋಂಕಿತ ಮಹಿಳೆಯೊಬ್ಬರು ಕೋವಿಡ್‌ ಆಸ್ಪತ್ರೆಗೆ ತೆರಳುವ ಸಲುವಾಗಿ ಆ್ಯಂಬುಲೆನ್ಸ್‌ಗಾಗಿ 12 ಗಂಟೆ ಕಾಲ ಕಾಯುತ್ತಿದ್ದ ಘಟನೆ ಇಲ್ಲಿನ ಆರೇಗೊಪ್ಪ ಗ್ರಾಮದಲ್ಲಿ ನಡೆದಿದ್ದು, ಶನಿವಾರ ಪ್ರಕರಣ ಬೆಳಕಿಗೆ ಬಂದಿದೆ. 

ಗ್ರಾಮದ 60 ವರ್ಷದ ಮಹಿಳೆಯೊಬ್ಬರಿಗೆ ಸೋಂಕಿರುವ ಕುರಿತು ಶುಕ್ರವಾರ ಬೆಳಗ್ಗೆ ಮಾಹಿತಿ ಬಂದಿದೆ. ತಕ್ಷಣ ಕುಟುಂಬಸ್ಥರು ಕೋವಿಡ್‌ ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿದ್ದಾರೆ. 

ಹಾವೇರಿ: ಭಾನುವಾರ ಲಾಕ್‌ಡೌನ್‌, ಖರೀದಿಗಾಗಿ ಜನರ ಓಡಾಟ ಜೋರು

ಹಲವು ಬಾರಿ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದರೂ ಆ್ಯಂಬುಲೆನ್ಸ್‌ ಬಂದಿಲ್ಲ. ಕೊನೆಗೆ ರಾತ್ರಿ 11.30ರ ಸುಮಾರಿಗೆ ಆ್ಯಂಬುಲೆನ್ಸ್‌ ಬಂದು ಸೋಂಕಿತೆಯನ್ನು ಹಾವೇರಿಯ ಕೋವಿಡ್‌ ಆಸ್ಪತ್ರೆಗೆ ಕರೆದೊಯ್ದಿದೆ. ಈ ಬಗ್ಗೆ ಸೋಂಕಿತೆಯ ಮಗ ಆತಂಕ ವ್ಯಕ್ತಪಡಿಸಿದ್ದಾರೆ.
 

Follow Us:
Download App:
  • android
  • ios