ವಿಜಯಪುರ(ಏ.20): ನಗರದಲ್ಲಿ ಕೊರೋನಾ ರುದ್ರನರ್ತನ ಮಾಡುತ್ತಿದೆ. ಇದುವರೆಗೆ ಸಂಬಂಧದಲ್ಲಿಯೇ ಇದ್ದ ಕೊರೋನಾ ಈಗ ಸ್ನೇಹಿತರನ್ನೂ ವ್ಯಾಪಿಸಿದೆ. ಈ ಮೂಲಕ ಇದುವರೆಗೆ ಕೇವಲ ಮೂರು ಕುಟುಂಬಗಳಲ್ಲಿಯೇ ಇದ್ದ ಕೊರೋನಾ ಈಗ ನಾಲ್ಕನೇ ಕುಟುಂಬವನ್ನು ಆವರಿಸಿದಂತಾಗಿದೆ.

ವಿಜಯಪುರದಲ್ಲಿ ಶನಿವಾರ ಪತ್ತೆಯಾದ ಪಿ.362ರ 60 ವರ್ಷದ ರೋಗಿ ಮತ್ತು ಈ ಮೊದಲೇ ಅಸುನೀಗಿರುವ ಪಿ.257ರ 69 ವರ್ಷದ ವ್ಯಕ್ತಿ ಇಬ್ಬರೂ ಕುಚುಕು ಗೆಳೆಯರಾಗಿದ್ದರು. ಪಿ.221ರ ವೃದ್ಧೆಯಿಂದ ಸೋಂಕಿತನಾಗಿದ್ದ ಪಿ.257 ವೃದ್ಧ ಏ.13ರಂದೇ ಅಸುನೀಗಿದ್ದ. 

ಕೊರೋನಾ ಸೋಂಕಿತರ ಮೊಬೈಲ್ ಸೀಜ್ ಮಾಡಿದ ಪೊಲೀಸರು..!

ಈ ವೃದ್ಧ ಪಿ.362ರ 60 ವರ್ಷದ ವೃದ್ಧನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಆತನಿಗೂ ಆತ್ಮೀಯ ಗೆಳೆಯನೇ ಸೋಂಕು ತಗುಲಿಸಿ ಹೋಗಿದ್ದಾನೆ. ಹೀಗಾಗಿ ಸೋಂಕಿತ ಎಂಬ ದೃಢಪಟ್ಟ ಹಿನ್ನೆಲೆಯಲ್ಲಿ ಪಿ.362 ವೃದ್ಧನಿಗೆ ಈಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.