ಗಂಗಾವತಿ(ಜೂ.18): ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ತಾಲೂಕಿನ ಮರಳಿ ಗ್ರಾಮದ 45 ವರ್ಷದ ಮಹಿಳೆ ಪಿ-7105 ಬುಧವಾರ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೊರೋನಾಗೆ ಮೊದಲ ಬಲಿಯಾಗಿದೆ.

ಈ ಮಹಿಳೆಯ ಇಬ್ಬರು ಪುತ್ರರು ಜಿಂದಾಲ್‌ ಕಂಪನಿಯ ಉದ್ಯೋಗಿಗಳಾಗಿದ್ದರಿಂದ ಮನೆ ಬಂದ ವೇಳೆ ಮಕ್ಕಳಿಂದ ದಂಪತಿಗೆ ಸೋಂಕು ತಗುಲಿತ್ತು. 

ಕೊರೋನಾ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲ

ಜೂ. 13ರಂದು ಇವರನ್ನು ಕೋವಿಡ್‌ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರು ಮಕ್ಕಳನ್ನು ಬಸಾಪಟ್ಟಣ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಪತಿಗೆ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.