ಗದಗ(ಜು.12): ಜಿಲ್ಲೆಯಲ್ಲಿ ಮತ್ತೊಮ್ಮೆ ಮಹಾಮಾರಿ ಕೊರೋನಾ ಸ್ಫೋಟಗೊಂಡಿದೆ. ಶನಿವಾರ ಒಂದೇ ದಿನ 40 ಜನರಿಗೆ ಸೋಂಕು ದೃಢವಾಗುವ ಮೂಲಕ ಕೊರೋನಾ ತನ್ನ ನಾಗಾಲೋಟವನ್ನು ಮುಂದುವರಿಸಿದ್ದು, ಜಿಲ್ಲೆಯ ಜನತೆಯಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ. ಆರೋಗ್ಯ ಇಲಾಖೆ ನಡೆಸಿದ ರ‌್ಯಾಂಮ್‌ ಟೆಸ್ಟ್‌ನಲ್ಲಿ ಪೌರ ಕಾರ್ಮಿಕರು ಹಾಗೂ ಬೀದಿಬದಿ ವ್ಯಾಪಾರಿಗಳೂ ಒಳಗೊಂಡಂತೆ ಗರಿಷ್ಠ ಸಂಖ್ಯೆಯಲ್ಲಿ ದೃಢವಾಗಿದ್ದು, ಸದ್ಯ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಮುನ್ನೂರರ ಗಡಿ ದಾಟಿದೆ.

ಸೋಂಕಿತರ ವಿವರ:

ಗದಗ -ಬೆಟಗೇರಿಯ ಶರಣಬಸವೇಶ್ವರ ನಗರದ ನಿವಾಸಿ 20 ವರ್ಷದ ಪುರುಷ (ಪಿ- 35048), ಚಾವಡಿ ಕೂಟದ ನಿವಾಸಿ 49 ವರ್ಷದ ಪುರುಷ (ಪಿ- 35049), ಕೇಶವನಗರದ ಪ್ರದೇಶದ ನಿವಾಸಿ 27 ವರ್ಷದ ಮಹಿಳೆ (ಪಿ-35050) ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ. ವಿಜಯಪುರ ಜಿಲ್ಲೆಯಿಂದ ಆಗಮಿಸಿದ ಗದಗ ನಗರದ ರಾಜೀವಗಾಂಧಿ ನಗರದ ನಿವಾಸಿ 45 ವರ್ಷದ ಪುರುಷ (ಪಿ-35051) ನಿಗೆ ಸೋಂಕು ದೃಢಪಟ್ಟಿರುತ್ತದೆ.
ಬೆಳಗಾವಿ ಜಿಲ್ಲೆಯಿಂದ ಆಗಮಿಸಿದ ರಾಮದುರ್ಗ ತಾಲೂಕಿನ ಗುಟ್ಟಿಗೊಳಿ ಗ್ರಾಮದ ನಿವಾಸಿ 54 ವರ್ಷದ ಮಹಿಳೆ (ಪಿ-35052)ಗೆ ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ. ಬೆಳಗಾವಿ ಜಿಲ್ಲೆಯಿಂದ ಆಗಮಿಸಿದ ರಾಮದುರ್ಗ ತಾಲೂಕಿನ ಗುಟ್ಟಿಗೊಳಿ ಗ್ರಾಮದ ನಿವಾಸಿ 33 ವರ್ಷದ ಪುರುಷ (ಪಿ-35053) ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ. ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ ಗಜೇಂದ್ರಗಡ ನಿವಾಸಿ 52 ವರ್ಷದ ಪುರುಷ (ಪಿ-35054), ಗೋವಾದಿಂದ ಜಿಲ್ಲೆಗೆ ಆಗಮಿಸಿದ ಗಜೇಂದ್ರಗಡದ ತಾಜ ಗಲ್ಲಿ ನಿವಾಸಿ 27 ವರ್ಷದ ಮಹಿಳೆ (ಪಿ-35055) ಗೆ ಸೋಂಕು ದೃಢವಾಗಿದೆ.

ನಾನು ಕೊಲೆಗಾರನು ಅಲ್ಲ, ಕಾಣೆಯೂ ಆಗಿಲ್ಲ: ಕೊರೋನಾ ಸೋಂಕಿತ ಅಧಿಕಾರಿಯ ನೋವಿನ ಮಾತು

ಮೂಲ ಪತ್ತೆಯಾಗದ ಪ್ರಕರಣಗಳು:

ಗದಗ ನಗರದ ಸಿದ್ದರಾಮೇಶ್ವರ ನಗರದ ನಿವಾಸಿ 35 ವರ್ಷದ ಮಹಿಳೆ (ಪಿ- 35056), ಮಾಬುಸಾಬನಿ ಕಟ್ಟಿನಿವಾಸಿ 33 ವರ್ಷದ ಪುರುಷ (ಪಿ-35057), ರೆಹಮತ ನಗರ ನಿವಾಸಿ 21 ವರ್ಷದ ಪುರುಷ (ಪಿ-35058), ಬೆಟಗೇರಿಯ ಟರ್ನಲ್‌ ಪೇಟ ನಿವಾಸಿ 45 ವರ್ಷದ ಮಹಿಳೆ (ಪಿ-35059), ಬೆಟಗೇರಿಯ ಮಂಜುನಾಥ ನಗರದ ನಿವಾಸಿ 50 ವರ್ಷದ ಪುರುಷ (ಪಿ-35060), ಗದಗ ತಾಲೂಕಿನ ಕಣವಿ ಗ್ರಾಮದ ನಿವಾಸಿ 42 ವರ್ಷದ ಮಹಿಳೆ (ಪಿ-35061), ಗದಗ ನಗರದ ಖಾನತೋಟ ನಿವಾಸಿ 28 ವರ್ಷದ ಮಹಿಳೆ (ಪಿ-35062), ಎಸ್‌.ಎಂ.ಕೆ. ನಗರದ ನಿವಾಸಿ 24 ವರ್ಷದ ಪುರುಷ (ಪಿ-35063), ವಕ್ಕಲಗೇರಿ ಓಣಿಯ ನಿವಾಸಿ 29 ವರ್ಷದ ಮಹಿಳೆ (ಪಿ-35064).
ಕನ್ಯಾಳ ಅಗಸಿ ನಿವಾಸಿ 58 ವರ್ಷದ ಪುರುಷ (ಪಿ-35065), ಗದಗ ನಗರದ ಚಾಪೇಕರ ಆಸ್ಪತ್ರೆಯ ಹತ್ತಿರದ ನಿವಾಸಿ 59 ವರ್ಷದ ಪುರುಷ (ಪಿ-35066), ಎಸ್‌.ಎಂ.ಕೆ. ನಗರದ ನಿವಾಸಿ 44 ವರ್ಷದ ಪುರುಷ (ಪಿ-35067), ಖಾನತೋಟ ನಿವಾಸಿ 42 ವರ್ಷದ ಮಹಿಳೆ (ಪಿ-35068), ಜನತಾ ಬಜಾರ ನಿವಾಸಿ 38 ವರ್ಷದ ಪುರುಷ (ಪಿ-35069), ರೋಣ ತಾಲೂಕಿನ ಯಾವಗಲ್‌ ಗ್ರಾಮದ ನಿವಾಸಿ 34 ವರ್ಷದ ಪುರುಷ (ಪಿ-35075), ವಡ್ಡರಗೇರಿ ನಗರದ ನಿವಾಸಿ 38 ವರ್ಷದ ಮಹಿಳೆ (ಪಿ-35080) ಇವರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿನ ಪತ್ತೆ ಕಾರ್ಯ ನಡೆದಿದೆ.

ಗದಗ ನಗರದ ತ್ರಿಕೂಟೇಶ್ವರ ಮಂದಿರ ಹತ್ತಿರದ ನಿವಾಸಿ 73 ವರ್ಷದ ಪುರುಷ (ಪಿ-35070) ಇವರಿಗೆ ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ. ನರಗುಂದ ಗಾಡಿ ಓಣಿ ನಿವಾಸಿ 42 ವರ್ಷದ ಪುರುಷ (ಪಿ-18279) ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ 23 ವರ್ಷದ ಪುರುಷ (ಪಿ-35071) ಗೆ ಸೋಂಕು ದೃಢಪಟ್ಟಿದೆ. ನರಗುಂದದ ಹೊರಕೇರಿ ಓಣಿ ನಿವಾಸಿ 26 ವರ್ಷದ ಮಹಿಳೆ ಪಿ-24756 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ 37 ವರ್ಷದ ಮಹಿಳೆ (ಪಿ-35072) ಇವರಿಗೆ ಸೋಂಕು ದೃಢಪಟ್ಟಿದೆ.

ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ ನರಗುಂದದ ನಿವಾಸಿ 30 ವರ್ಷದ ಪುರುಷ (ಪಿ-35073) ಗೆ ಇವರಿಗೆ ಸೋಂಕು ದೃಢಪಟ್ಟಿದೆ. ನರಗುಂದದ ಹೊರಕೇರಿ ಓಣಿ ನಿವಾಸಿ 26 ವರ್ಷದ ಮಹಿಳೆ ಪಿ-24756 ಸೋಂಕಿತರ ಸಂಪರ್ಕದಿಂದಾಗಿ ಚಿಕ್ಕ ನರಗುಂದದ ನಿವಾಸಿ 43 ವರ್ಷದ ಮಹಿಳೆ (ಪಿ-35074) ಗೆ ಸೋಂಕು ದೃಢಪಟ್ಟಿದೆ. ನರಗುಂದದ ಹೊರಕೇರಿ ಓಣಿ ನಿವಾಸಿ 26 ವರ್ಷದ ಮಹಿಳೆ ಪಿ-24756 ಸೋಂಕಿತರ ಸಂಪರ್ಕದಿಂದಾಗಿ ನರಗುಂದ ತಾಲೂಕಿನ ಸಂಕದಾಳ ಗ್ರಾಮದ ನಿವಾಸಿ 44 ವರ್ಷದ ಮಹಿಳೆ (ಪಿ-35076) ಗೆ ಸೋಂಕು ದೃಡವಾಗಿದೆ.

ಗದಗ ನಗರದ ದಾಸರ ಓಣಿ ನಗರದ ನಿವಾಸಿ 58 ವರ್ಷದ ಮಹಿಳೆ (ಪಿ-35077) ಗೆ ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ. ಹುಡ್ಕೋ ಕಾಲನಿ ಮೊದಲ ತಿರುವು ನಿವಾಸಿ 25 ವರ್ಷದ ಪುರುಷ (ಪಿ-35078) ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ರುತ್ತದೆ. ಹಾತಲಗೇರಿ ನಾಕಾ ಪ್ರದೇಶದ ನಿವಾಸಿ 34 ವರ್ಷದ ಮಹಿಳೆ (ಪಿ-35079) ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಲಕ್ಷ್ಮೇಶ್ವರದ ಇಂದಿರಾ ನಗರ ನಿವಾಸಿ 40 ವರ್ಷದ ಮಹಿಳೆ ಪಿ-18285 ಸೋಂಕಿತರ ಸಂಪರ್ಕದಿಂದಾಗಿ ಗದಗ ತಾಲೂಕಿನ ನಾಗಾವಿ ಗ್ರಾಮದ 70 ವರ್ಷದ ಮಹಿಳೆ (ಪಿ-35081) ಗೆ ಸೋಂಕು ದೃಢಪಟ್ಟಿದೆ. ಗದಗ ನಗರದ ವಕ್ಕಲಗೇರಿ ನಿವಾಸಿ 38 ವರ್ಷದ ಮಹಿಳೆ (ಪಿ-35082) ಗೆ ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ. ಅಂತರ ಜಿಲ್ಲಾ ಪ್ರಯಾಣದ ಹಿನ್ನಲೆಯಲ್ಲಿ ಮುಂಡರಗಿ ತಾಲೂಕಿನ ಹಮ್ಮಗಿ ಗ್ರಾಮದ 28 ವರ್ಷದ ಮಹಿಳೆ (ಪಿ-35083) ಇವರಿಗೆ ಸೋಂಕು ದೃಢಪಟ್ಟಿದೆ.

ಬೆಂಗಳೂರಿನಿಂದ ಆಗಮಿಸಿದ ರೋಣ ತಾಲೂಕಿನ ಮುಶಿಗೇರಿ ಗ್ರಾಮದ ನಿವಾಸಿ 26 ವರ್ಷದ ಪುರುಷ (ಪಿ-35084) ಗೆ ಸೋಂಕು ದೃಢಪಟ್ಟಿದೆ. ಅಂತರಜಿಲ್ಲಾ ಪ್ರಯಾಣದ ಹಿನ್ನಲೆಯಲ್ಲಿ ಹುಲಕೋಟಿ ಗ್ರಾಮದ ನಿವಾಸಿ 32 ವರ್ಷ ಪುರುಷ (ಪಿ-35085) ಗೆ ಸೋಂಕು ದೃಢಪಟ್ಟಿದೆ. ಹುಬ್ಬಳ್ಳಿಯಿಂದ ಆಗಮಿಸಿದ ನರಗುಂದದ ದಂಡಾಪುರ ಓಣಿ ನಿವಾಸಿ 35 ವರ್ಷದ ಪುರುಷ (ಪಿ-35086) ಗೆ ಸೋಂಕು ದೃಢಪಟ್ಟಿದೆ. ಬೆಳಗಾವಿ ಜಿಲ್ಲೆಯಿಂದ ಆಗಮಿಸಿದ ರಾಮದುರ್ಗ ತಾಲೂಕಿನ ಗುಟ್ಟಿಗೊಳಿ ಗ್ರಾಮದ ನಿವಾಸಿ 65 ವರ್ಷದ ಪುರುಷ (ಪಿ-35087) ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ. ಎಲ್ಲಾ ಸೋಂಕಿತರನ್ನು ನಿಗದಿತ ಕೊವಿಡ್‌-19 ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಓರ್ವ ಮಹಿಳೆ ಸಾವು:

ಗದಗ ನಗರದ ದಾಸರ ಓಣಿ ನಿವಾಸಿ 58 ವರ್ಷದ ಮಹಿಳೆ (ಪಿ-35077) ಜು.10 ರಂದು ಸಂಜೆ ಮೃತಪಟ್ಟಿರುತ್ತಾರೆ. ಜು. 8ರಂದು ಕೆಮ್ಮು, ಜ್ವರ ಲಕ್ಷಣಗಳಿಂದಾಗಿ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಾಖಲಾಗಿದ್ದು, ನ್ಯುಮೋನಿಯಾ, ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಇವರಿಗೆ ಐಸಿಯು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇವರಿಗೆ ಚಿಕಿತ್ಸೆ ಫಲಕಾರಿಯಾಗದೆ ಜು. 10ರಂದು ಸಾಯಂಕಾಲ ಮೃತಪಟ್ಟಿರುತ್ತಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿದ್ದು ಜು 11 ರಂದು ಕೋವಿಡ್‌-19 ಸೋಂಕು ದೃಢ ಪಟ್ಟಿರುತ್ತದೆ. ಮೃತರ ಅಂತ್ಯಕ್ರಿಯೆಯನ್ನು ಕೋವಿಡ್‌-19ರ ಮಾರ್ಗಸೂಚಿಗಳನ್ವಯ ನೆರವೇರಿಸಲಾಗುವದು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು ತಿಳಿಸಿದ್ದಾರೆ.