ಬೆಂಗಳೂರು [ಮಾ.05] : ಉದ್ಯಾನನಗರಿ ಬೆಂಗಳೂರಿನಲ್ಲಿ ಎರಡು ದಿನ ಉಳಿದುಕೊಂಡಿದ್ದ ಟೆಕ್ಕಿಗೆ ತೆಲಂಗಾಣದಲ್ಲಿ ಕರೋನಾ ಸೋಂಕು ದೃಢ ಪಟ್ಟಿದ್ದ ಹಿನ್ನೆಲೆಯಲ್ಲಿ ನಗರಾದ್ಯಂತ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಶೀತ ಸಂಬಂಧಿ ಸಮಸ್ಯೆ ಉಳ್ಳವರು ಹಾಗೂ ಪ್ರವಾಸ ಇತಿಹಾಸವುಳ್ಳವರೆಲ್ಲರೂ ತಪಾಸಣೆಗಾಗಿ ವಿವಿಧ ಆಸ್ಪತ್ರೆಗಳಿಗೆ ಎಡತಾಕತೊಡಗಿದ್ದಾರೆ.

ಆದರೆ, ಬುಧವಾರ ತಡರಾತ್ರಿ ವೇಳೆಗೆ ಟೆಕಿಯ ಫ್ಲ್ಯಾಟ್ ಮೇಟ್ ಹಾಗೂ ಸಹೋದ್ಯೋಗಿ ಸೇರಿದಂತೆ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಐದೂ ಮಂದಿ ಶಂಕಿತರಿಗೆ ಸೋಂಕು ಇಲ್ಲದಿರುವುದು ದೃಢ ಪಟ್ಟಿದೆ. ಹೀಗಾಗಿ ನಗರಿಗರು ನಿಟ್ಟಿಸಿರುವ ಬಿಡುವಂತಾಗಿದೆ.

ಇನ್ನು ಮೂರು ತಿಂಗಳಲ್ಲಿ ಕೊರೋನಾಗೆ ಔಷಧ ಲಭ್ಯ..

ಹೈದರಾಬಾದ್‌ನಲ್ಲಿ ಸೋಂಕು ದೃಢಪಟ್ಟ ವ್ಯಕ್ತಿಯು ಬೆಂಗಳೂರಿನಲ್ಲಿ ಎರಡು ದಿನ ವಾಸ್ತವ್ಯ ಹೂಡಿದ್ದ ಹಿನ್ನೆಲೆ ಯಲ್ಲಿ ಮಂಗಳವಾರ ನಗರದ ಜನತೆ ತೀವ್ರ ಆತಂಕಕ್ಕೆ ಗುರಿ ಯಾಗಿದ್ದರು. ಈ ಬೆಳವಣಿಗೆಗಳಿಂದ ಬೆಂಗಳೂರಿನಾದ್ಯಂತ ಜನರು ಭಯಭೀತಗೊಂಡಿದ್ದು, ಜನದಟ್ಟಣೆ ಇರುವ ಪ್ರದೇಶದಲ್ಲಿ ಓಡಾಡಲು ಸಹ ಹಿಂಜರಿಕೆ ಪ್ರದರ್ಶಿಸುವ ಸ್ಥಿತಿ ನಿರ್ಮಾಣ ವಾಗಿದೆ. ಅಲ್ಲದೆ ಬಹುತೇಕ ಜನರು ಮಾಸ್ಕ್ ಧರಿಸಿದ್ದು, ಮಾಸ್ಕ್‌ಗಳಿಗೆ ಬೆಂಗಳೂರಿನಲ್ಲಿ ಇನ್ನಿಲ್ಲದ ಬೇಡಿಕೆ ನಿರ್ಮಾ ಣಗೊಂಡಿದೆ. ಎನ್‌95 , ಎನ್‌75  ಮಾಸ್ ್ಕಗಳಿಗೆ ಏಕಾಏಕಿ ಉಂಟಾದ ಬೇಡಿಕೆ ಹಿನ್ನೆಲೆಯಲ್ಲಿ ಭಾರೀ ದರ ಹೆಚ್ಚಳ ಮಾಡಲಾಗಿದೆ.

ಐದೂ ಮಂದಿಗೆ ನೆಗೆಟಿವ್: ರಾಜೀವ್‌ಗಾಂಧಿ ಆಸ್ಪತ್ರೆ ಯಲ್ಲಿ ಕೊರೋನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ಐದು ಮಂದಿ ದಾಖಲಾಗಿದ್ದರು. ಇವರಲ್ಲಿ ಐದು ಪರೀಕ್ಷಾ ವರದಿ ಬಂದಿದ್ದು ಸೋಂಕು ದೃಢಪಟ್ಟಿಲ್ಲ. ಈವರೆಗೆ ರಾಜ್ಯದಲ್ಲಿ ಒಬ್ಬ ವ್ಯಕ್ತಿಗೂ ಕೊರೋನಾ ಸೋಂಕು ದೃಢಪಟ್ಟಿಲ್ಲ. ಹೀಗಿ ದ್ದರೂ ಜನ ಭಯ ಭೀತಿಗೊಳ್ಳಲು ತೆಲಂಗಾಣ ಟೆಕ್ಕಿಗೆ ಸೋಂಕು ದೃಢಪಟ್ಟಿರುವುದು ಒಂದು ಕಾರಣವಾದರೆ ಅನಗತ್ಯ ವಾಗಿ ಹರಡುತ್ತಿರುವ ವದಂತಿಗಳು ಮತ್ತೊಂದು ಕಾರಣ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಮುಂದುವರೆದ ಪರಿಶೀಲನೆ: ಮತ್ತೊಂದೆಡೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಪ್ರಯಾಣಿಕರ ಪರಿಶೀಲನೆ ಮುಂದುವರೆಸಲಾಗಿದೆ. ಬುಧವಾರ 77 ಮಂದಿಯನ್ನು ಪರಿಶೀಲನೆ ನಡೆಸಿದ್ದು, 28 ದಿನಗಳ ನಿಗಾ ವ್ಯವಸ್ಥೆಗೆ ನೋಂದಾಯಿಸಲಾಗಿದೆ. ಜ. 20 ರಿಂದ ಮಾ. ೪ರವರೆಗೆ 42, 283 ಪ್ರಯಾಣಿಕರನ್ನು ಥರ್ಮಲ್ ಸ್ಕ್ಯಾ ರ್ ತಪಾಸಣೆಗೆ ಒಳಪಡಿಲಾಗಿದ್ದು, ಯಾರಲ್ಲೂ ಸೋಂಕು ದೃಢಪಟ್ಟಿಲ್ಲ. ಇವರಲ್ಲಿ ಶಂಕಿತ 637 ಮಂದಿಯನ್ನು ಮನೆಯಲ್ಲಿ 28 ದಿನಗಳ ನಿಗಾದಲ್ಲಿಸಲಾಗಿದೆ.