Asianet Suvarna News Asianet Suvarna News

ಇನ್ನು ಮೂರು ತಿಂಗಳಲ್ಲಿ ಕೊರೋನಾಗೆ ಔಷಧ ಲಭ್ಯ

ದೇಶದಾದ್ಯಂತ ಹರಡಿರುವ ಮಾರಕ ಕೊರೋನಾ ವೈರಸ್ ಗೆ ಶೀಘ್ರದಲ್ಲೇ ಔಷಧಿ ಕಂಡು ಹಿಡಿಯಲಾಗುತ್ತಿದೆ. 

Covid-19 vaccine development close by Israeli researchers
Author
Bengaluru, First Published Mar 5, 2020, 7:36 AM IST

ನವದೆಹಲಿ[:ವಿಶ್ವಾದ್ಯಂತ 3100ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕೊರೋನಾ ವೈರಸ್‌ ಇದೀಗ ಭಾರತದಲ್ಲೂ ತಲ್ಲಣ ಸೃಷ್ಟಿಸಿದೆ. ಈವರೆಗೆ ಅಲ್ಲೊಂದು ಇಲ್ಲೊಂದು ಪ್ರಕರಣ ಬೆಳಕಿಗೆ ಬಂದಿದ್ದ ಭಾರತದಲ್ಲಿ ಬುಧವಾರ ಒಂದೇ ದಿನ 22 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಈವರೆಗೆ ದೇಶದಲ್ಲಿ ಸೋಂಕುಪೀಡಿತರಾದವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಇದಲ್ಲದೆ ವಿದೇಶದಲ್ಲಿ ನೆಲೆಸಿರುವ 17 ಭಾರತೀಯರಿಗೂ ಸೋಂಕು ತಗುಲಿದೆ. ಏಕಾಏಕಿ ಸೋಂಕುಪೀಡಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಆದ ಬೆನ್ನಲ್ಲೇ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಘೋಷಿಸಿದೆ.

ಈ ಕುರಿತು ಬುಧವಾರ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಖಾತೆ ಸಚಿವ ಹರ್ಷವರ್ಧನ್‌, ದೇಶದಲ್ಲಿ ಈವರೆಗೆ ಒಟ್ಟು 29 ಕೊರೋನಾ ಸೋಂಕು ಪ್ರಕರಣ ಬೆಳಕಿಗೆ ಬಂದಿದೆ. ಇವರಲ್ಲಿ ಹಲವು ವಿದೇಶಿಯರು ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಈವರೆಗೆ 12 ದೇಶಗಳಿಂದ ಬಂದವರಿಗೆ ಮಾತ್ರ ನಡೆಸಲಾಗುತ್ತಿದ್ದ ಕೋರೋನಾ ಸೋಂಕು ಪತ್ತೆ ತಪಾಸಣೆಯನ್ನು ವಿಶ್ವದ ಎಲ್ಲಾ ದೇಶಗಳ ಪ್ರಯಾಣಿಕರಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಕೊರೋನಾಗೆ ಔಷಧಿ
ನ್ನು ಮೂರು ತಿಂಗಳಲ್ಲಿ ತೀವ್ರವಾಗಿ ವ್ಯಾಪಿಸಿರುವ ಮಾರಕ ಕೊರೋನಾ ವೈರಸ್ ತಡೆಯಬಲ್ಲ ಔಷಧವನ್ನು ಸಿದ್ಧ ಮಾಡಲಾಗುತ್ತಿದೆ. 90 ದಿನಗಳಲ್ಲಿ  ಬಳಕೆಗೆ ಲಭ್ಯವಾಗುವ ಸಾಧ್ಯತೆ ಇದೆ. 

Follow Us:
Download App:
  • android
  • ios